ಮಣಿಪಾಲ: ಕೆಎಂಸಿ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗಕ್ಕೆ ಉಪಕರಣಗಳ ಕೊಡುಗೆ
ಮಣಿಪಾಲ: ಸಹಾಯ ಹಸ್ತಾ ಮಣಿಪಾಲ್ ಲಯನ್ಸ್ ಚಾರಿಟಬಲ್ ಫೌಂಡೇಶನ್, ದಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಲಯನ್ಸ್ ಕ್ಲಬ್ ಜಿಲ್ಲೆ 317 ಸಿ ಮತ್ತು ಸಿಎಸ್ಆರ್ ಪ್ರಾಜೆಕ್ಟ್ ಆಫ್ ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ) ಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗಕ್ಕೆ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು. ಈ ಉಪಕರಣಗಳು ಜೈವಿಕ ಸುರಕ್ಷತೆ ಕ್ಯಾಬಿನೆಟ್ ವರ್ಗ II, ಟೈಪ್ ಎ 2 ಆಗಿದ್ದು, ದಾದಿಯರು, ವೈದ್ಯರು ಮತ್ತು ರೋಗಿಗಳಿಗೆ […]
ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್ ನಲ್ಲಿ ಲವ್ಲಿನಾ ಸೆಮಿಫೈನಲ್ಗೆ: ಭಾರತಕ್ಕೆ ಎರಡನೇ ಪದಕ ಖಚಿತ
ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸುವುದು ಖಚಿತವಾಗಿದೆ. ಮಹಿಳಾ ಬಾಕ್ಸಿಂಗ್ 69 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿರುವ ಭಾರತದ ಲವ್ಲಿನಾ ಬೊರ್ಗೊಹೈನ್, ಕನಿಷ್ಠ ಕಂಚಿನ ಪದಕ ಗೆಲ್ಲುವುದು ಖಾತ್ರಿಯಾಗಿದೆ. ಕ್ವಾರ್ಟರ್ಫೈನಲ್ ಹೋರಾಟದಲ್ಲಿ ನಿಖರ ಪಂಚ್ಗಳ ಮೂಲಕ ಗಮನ ಸೆಳೆದ ಲವ್ಲಿನಾ ಚೀನಾ ತೈಪೆಯ ನಿಯೆನ್ ಚಿನ್ ಚೆನ್ ವಿರುದ್ಧ 4-1ರ ಅಂತರದ ಗೆಲುವು ದಾಖಲಿಸಿದರು. ಈ ಮೊದಲು ಮಹಿಳೆಯರ ವೇಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದಿದ್ದರು.