ಹರಿದ್ವಾರದ ಮಧ್ವಾಶ್ರಮದಲ್ಲಿ ಪೇಜಾವರ ಶ್ರೀಗಳಿಗೆ ಉಮಾಭಾರತಿ ಅವರಿಂದ ಗುರುಪೂಜೆ

ಶನಿವಾರ ಗುರುಪೂರ್ಣಿಮೆಯ ಪರ್ವದಿನ. ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಲ್ಲಿ ಮಂತ್ರದೀಕ್ಷೆ ಪಡೆದ ರಾಷ್ಟ್ರದ ಪ್ರಖರ ಹಿಂದೂ ಧ್ವನಿ, ಕೇಂದ್ರದ ಮಾಜಿ ಮಂತ್ರಿ ಉಮಾಭಾರತಿ ಅವರು ಹರಿದ್ವಾರದಲ್ಲಿರುವ ಶ್ರೀ ಪೇಜಾವರ ಮಠದ ಶಾಖೆ ಶ್ರೀ ಮಧ್ವಾಶ್ರಮದಲ್ಲಿ ಗುರು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಭಕ್ತಿ ನಮನ ಸಲ್ಲಿಸಿದರು. ಬಳಿಕ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಪಾದಪೂಜೆ ಸಹಿತ ಫಲ ಪುಷ್ಪ ಸಹಿತ ಗುರುಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು . ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರಕೂಟಾಶ್ರಮದ ಶ್ರೀ ರಾಮಕಿಶನ್ […]

ರೋಟರಿ ಶ್ರದ್ಧೆ, ಸೇವಾನುಭವಗಳ ಸಂಘಟನೆ: ಅಭಿನಂದನ್ ಶೆಟ್ಟಿ

ಉಡುಪಿ: ರೋಟರಿಯು ಪರಸ್ಪರ ಪ್ರೀತಿಗೌರವವನ್ನು ಕೊಡುತ್ತಾ, ಸಂತ್ರಸ್ತ ಪ್ರಪಂಚಕ್ಕೆ ಸೇವೆಯನ್ನು ನೀಡುವ ಅನುಭವಗಳ ಮೇಲೆ ಸದಸ್ಯರನ್ನು ಸಮಾಜಕ್ಕೆ ಸಿದ್ಧಪಡಿಸುವ ಸಂಘಟನೆಯಾಗಿದೆ ಎಂದು ಪಿಡಿಜಿ ರೋ. ಅಭಿನಂದನ್ ಶೆಟ್ಟಿ ಹೇಳಿದರು. ರೋಟರಿ ಜಿಲ್ಲಾ 3182 ಇದರ ಅತ್ಯಂತ ಬ್ರಹತ್ ಮಟ್ಟದ ಅಂತರಾಷ್ಟ್ರೀಯ ಅನುದಾನದಿಂದ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ನೇತೃತ್ವದಲ್ಲಿ ಮಾಹೆ ರೋಟರಿ ಸ್ಕಿನ್ ಬ್ಯಾಂಕ್ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು. ಮಣಿಪಾಲ ಟೌನ್ ಇದರ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೋ. ಗಣೇಶ್ […]

ಉಡುಪಿ: ಮೂರಂಕಿಯಿಂದ ದಿಢೀರ್ ಆಗಿ ಒಂದಂಕಿಗೆ ಇಳಿದ ಕೊರೊನಾ.!

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಆಗಿ ಇಳಿಕೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ 131 ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿತ್ತು. ಆದರೆ ಇಂದು (ಜುಲೈ 24) ಆ ಸಂಖ್ಯೆ ಏಕಾಏಕಿಯಾಗಿ ಒಂದಂಕಿಗೆ ಇಳಿದಿದ್ದು, ಉಡುಪಿ ತಾಲೂಕಿನಲ್ಲಿ ಕೇವಲ ಮೂರು ಪ್ರಕರಣ ದಾಖಲಾಗಿದೆ. ಇಂದಿನ ಕೊರೊನಾ ಪ್ರಕರಣಗಳ ವಿವರ: ಉಳಿದಂತೆ ಕುಂದಾಪುರ ಹಾಗೂ ಕಾರ್ಕಳ ತಾಲೂಕಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಈ ದಿಢೀರ್ ಬೆಳವಣಿಗೆ ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ. ಶುಕ್ರವಾರ ದಾಖಲಾದ ಕೊರೊನಾ ಕೇಸ್ ಗಳ […]

ರಹಸ್ಯ ಕಾರ್ಯಾಚರಣೆಯಲ್ಲಿ‌ ಹೊರಬಿತ್ತು ಸಚಿವೆ ಶಶಿಕಲಾ ಜೊಲ್ಲೆಯ ‘ಒಂದು ಮೊಟ್ಟೆಯ ಕಥೆ’

ಬೆಂಗಳೂರು: ಸರ್ಕಾರದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಅಪೌಷ್ಠಿಕ ಮಕ್ಕಳಿಗೆ ನೀಡಲಾಗುವ ಮೊಟ್ಟೆ ವಿತರಣೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು,‌ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರದಲ್ಲಿ ತೊಡಗಿರುವ ದೃಶ್ಯಾವಳಿಗಳು ನ್ಯೂಸ್ ಫಸ್ಟ್ ವಾಹಿನಿ ನಡೆಸಿರುವ ಚುಟುಕು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ. ಮಾತೃಪೂರ್ಣ ಯೋಜನೆಯ ಮೊಟ್ಟೆ ವಿತರಿಸುವ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟೆಂಡರ್ ಕರೆಯಲು ಸರ್ಕಾರ ನಿರ್ಧರಿಸಿದ್ದು, ಈ ಟೆಂಡರ್ ಅನ್ನು ತಮಗೆ ಬೇಕಾದವರಿಗೆ ನೀಡಲು […]

ಉಡುಪಿ ನಗರಸಭೆ ಬಳಿ ಕೃತಕ ಜಲಾಶಯ: ಭೂಕುಸಿತ ಸಂಭವಿಸುವ ಭೀತಿ.?; ಆತಂಕದಲ್ಲಿ ಸಾರ್ವಜನಿಕರು..!

ಉಡುಪಿ: ಕವಿ ಮುದ್ದಣ ಮಾರ್ಗದಲ್ಲಿ ನಗರಸಭೆ ಕಚೇರಿ ಸಮೀಪ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಭಿವೃದ್ಧಿಯ ಕಾರಣದಿಂದ ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಲಾಗಿದ್ದು, ಅದೇ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಸುಮಾರು ಅರವತ್ತು ಅಡಿ ಆಳದ ಗುಂಡಿ ನಿರ್ಮಾಣ ಮಾಡಲಾಗಿದೆ. ಇದೀಗ ಗುಂಡಿಯಲ್ಲಿ ಮಳೆ ನೀರು, ಒಸರು ನೀರು ಜಲಾಶಯದಂತೆ ಸಂಗ್ರಹಗೊಂಡಿದೆ. ನೀರಿನ ಮಟ್ಟವು ಐವತ್ತು ಅಡಿಯ ಆಳದವರೆಗೆ ಇರಬಹುದೆಂದು ಅಂದಾಜಿಸಲಾಗಿದೆ. ಗುಂಡಿಯ ಅಂಚಿನ ಸುತ್ತಲೂ ಮಣ್ಣು ಕುಸಿಯದಂತೆ ತಡೆಯೊಡ್ಡಲು ಯಾವುದೇ […]