ಅಲೆವೂರು: ‘ಶ್ರೀಬದರೀನಗರ’ ನಾಮಫಲಕ ಉದ್ಘಾಟನೆ, ವನಮಹೋತ್ಸವ ಕಾರ್ಯಕ್ರಮ

ಅಲೆವೂರು: ಅಲೆವೂರು ಗ್ರಾಮ ಪಂಚಾಯಿತಿ ವತಿಯಿಂದ ದಿ. ಅಲೆವೂರು ಬದರೀ ನಾರಾಯಣ ಆಚಾರ್ಯ ಸ್ಮಾರಕ ಟ್ರಸ್ಟ್ ನ ಸಹಯೋಗದಲ್ಲಿ ನಡುಅಲೆವೂರು ಮುಖ್ಯರಸ್ತೆಯ “ಶ್ರೀಬದರೀನಗರ” ನಾಮಫಲಕದ ಉದ್ಘಾಟನೆ ಕಾರ್ಯಕ್ರಮ ಹಾಗೂ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು. ಅಲೆವೂರು ಗ್ರಾಪಂ‌ ಅಧ್ಯಕ್ಷೆ ಪುಷ್ಪ ಅಂಚನ್ ನಾಮಫಲಕವನ್ನು ಉದ್ಘಾಟಿಸಿದರು. ಕಲ್ಮಂಜೆ ಮಹಾಲಿಂಗೇಶ್ವರ ದೇವಸ್ಥಾನ ಮುಖ್ಯ ಅರ್ಚಕ ಕಲ್ಮಂಜೆ ವೇದವ್ಯಾಸ ಉಪಾಧ್ಯ ಅವರು ಟ್ರಸ್ಟ್ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಭಿವೃದ್ದಿ ಅಧಿಕಾರಿ ದಯಾನಂದ ಬೆಣ್ಣೂರು, ಗ್ರಾಪಂ […]

ಕಾಪು: ಕಾರು ಅಪಘಾತ; ಗ್ಯಾರೇಜ್ ಮಾಲೀಕ ಸ್ಥಳದಲ್ಲೇ ಮೃತ್ಯು

ಕಾಪು: ಕಾರೊಂದು ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ಉಚ್ಚಿಲ–ಮುದರಂಗಡಿ ರಸ್ತೆಯ ಎಲ್ಲೂರು ಬಳಿಯ ಪಣಿಯೂರು ಪೆಜತ್ತಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಕಾಪು‌ ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರು ಉದ್ಯಾವರ ಬಲಾಯಿಪಾದೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ಭಾನುವಾರ ರಾತ್ರಿ ಎಲ್ಲೂರಿಗೆ ತೆರಳಿದ್ದು, ಅಲ್ಲಿಂದ ವಾಪಸಾಗುತ್ತಿರುವ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ರವೀಂದ್ರ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.‌ ತೀವ್ರ […]

ಕಲಾ ಆವಿಷ್ಕಾರದ ಮಧುರ ನಿನಾದ, ಬ್ರಹ್ಮಾವರ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ :ಕಲಾ ಸೇವೆಗೆ ಮೀಸಲಾದ ಟ್ರಸ್ಟ್ ನ ಕುರಿತು ಒಂದಷ್ಟು..

ತೆಂಕು, ಬಡಗು ಯಕ್ಷಗಾನ ಕಲಾ ಪ್ರಕಾರದ ಕುರಿತು ಸಂಶೋಧನಾತ್ಮಕ ಅಧ್ಯಯನ, ಪರಾಮರ್ಶೆ, ವಿಚಾರಗೋಷ್ಟಿ, ಯಕ್ಷಗಾನ ಸಾಹಿತ್ಯ ಕಮ್ಮಟ, ಪ್ರಯೋಗಾತ್ಮಕ ಪ್ರದರ್ಶನ, ಮೊದಲಾದ ಕಾರ್ಯಕ್ರಮಗಳ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶೋಧಿಸುವ ಹುಮ್ಮಸ್ಸು ಹಾಗೂ ಅದರಿಂದ ಸಿಗುವ ಫಲಿತಾಂಶಗಳನ್ನು ಜಗತ್ತಿಗೆ ಒದಗಿಸುವ ಮಹೋನ್ನತ ಉದ್ದೇಶಗಳೊಂದಿಗೆ ಸದ್ದಿಲ್ಲದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಂಡಾರು ಎಂಬ ಪುಟ್ಟ ಗ್ರಾಮದಲ್ಲಿ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಎಂಬ ಸಂಸ್ಥೆಯ ನಿನಾದ ಹೆಚ್ಚೇನು ಸದ್ದು ಮಾಡದೆ ಮೊಳಗಿದೆ. ಇಂತಹ ದೂರದೃಷ್ಟಿತ್ವ ಚಿಂತನೆಯನ್ನು ಹೊಂದಿರುವ ಟ್ರಸ್ಟ್ ನ […]