ಕಾರ್ಕಳ:ಜ್ಞಾನಸುಧಾ ವಿದ್ಯಾರ್ಥಿನಿ: ಐ.ಡಿ.ಎಸ್.ಸಿ ಕ್ಯಾಂಪ್‍ಗೆ ಆಯ್ಕೆ
ಕಾರ್ಕಳ: ಮೂಡಬಿದರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ 18-ಕರ್ನಾಟಕ ಬೆಟಲೀಯನ್ ಆಯೋಜಿಸಿದ ಐ.ಡಿ.ಎಸ್.ಸಿ ಕ್ಯಾಂಪ್‍ನಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ ಕೆಡೆಟ್ ದಿಶಾ ಎಂ.ಬಿ.ಜಿ ಅವರು, ಮುಂದೆ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಗೋವ ಡೈರಕ್ಟರೇಟ್ ನಡೆಸಲ್ಪಡುವ ಐ.ಡಿ.ಎಸ್.ಸಿ ಕ್ಯಾಂಪ್ಗೆ ಆಯ್ಕೆಗೊಂಡಿರುತ್ತಾರೆ. ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಕಾಲೇಜಿನ ಎನ್.ಸಿ.ಸಿ ಮಾರ್ಗದರ್ಶಕ ಸುಮಿತ್ ಅಭಿನಂದಿಸಿದ್ದಾರೆ.
ಯುವ ಪರಿವರ್ತಕರ ಹುದ್ದೆ : ಅರ್ಜಿ ಆಹ್ವಾನ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ
ಉಡುಪಿ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ, ಎಪಿಡೀಮೀಯಾಲಜಿ ವಿಭಾಗ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು (ನಿಮ್ಹಾನ್ಸ್) ಇವರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ತೇರ್ಗಡೆ ಹೊಂದಿರುವ, 21 ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜುಲೈ 22 ರ ಒಳಗೆ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ [email protected] […]
ರೈಲಿನಲ್ಲಿ ಉಡುಪಿಗೆ ಬರುತ್ತಿದ್ದ ವ್ಯಕ್ತಿಯ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಮಣಿಪಾಲ: ಮುಂಬೈನಿಂದ ಉಡುಪಿಗೆ ರೈಲಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರ ಬಳಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾಪು ತಾಲೂಕಿನ ಶಿರ್ವ ಗ್ರಾಮದ ಬಂಟಕಲ್ ನಿವಾಸಿ ತುಕಾರಾಂ ಭಟ್ ಅವರು ಪತ್ನಿ ಮತ್ತು ಮಗಳೊಂದಿಗೆ ಜುಲೈ 10 ರಂದು ರಾತ್ರಿ 10.45ರ ಸುಮಾರಿಗೆ ಮುಂಬೈನ ಥಾಣೆ ರೈಲ್ವೇ ಸ್ಟೇಷನ್ ನಿಂದ ಉಡುಪಿಗೆ ರೈಲಿನಲ್ಲಿ ಹೊರಟಿದ್ದರು. ತುಕಾರಾಂ ಅವರ ಪತ್ನಿ ಹಾಗೂ ಮಗಳು ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿ ಹಾಕಿ ಬಟ್ಟೆಯ ಮಧ್ಯೆ ಇಟ್ಟಿದ್ದರು. […]
ಇಂದ್ರಾಳಿ: ಹೆದ್ದಾರಿ ದುರಸ್ತಿಗೆ ನಾಗರಿಕ ಸಮಿತಿಯ ಆಗ್ರಹ
ಮಣಿಪಾಲ: ಉಡುಪಿಯಿಂದ ಮಣಿಪಾಲ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ರೈಲು ಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳು ಬಿದ್ದು, ಕೃತಕ ಈಜುಕೊಳ ನಿರ್ಮಾಣಗೊಂಡಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಹೊಂಡದಲ್ಲಿ ಬಿದ್ದಿರುವ ಬಹಳ ಘಟನೆಗಳು ನಡೆದಿವೆ. ಪಾದಚಾರಿಗಳಂತೂ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಮಳೆಯಿಂದ ಹೊಂಡದಲ್ಲಿ ಸಂಗ್ರವಾಗಿರುವ ಕೆಸರು ನೀರು ವಾಹನಗಳ ಚಕ್ರದ ಚಲನೆಗೆ, ಪಾದಚಾರಿಗಳ ಮೈಮೇಲೆ ಬೀಳುತ್ತಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, […]
ಅಲೆವೂರು ಗ್ರಾಪಂ ಸದಸ್ಯನಿಂದ ಕಟ್ಟಡ ಕಾರ್ಮಿಕರ ಕಿಟ್ ದುರುಪಯೋಗ: ಗ್ರಾಪಂ ಅಧ್ಯಕ್ಷೆಯಿಂದ ದೂರು
ಉಡುಪಿ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮಂಜೂರಾದ 200 ಸಾಮಗ್ರಿಗಳ ಕಿಟ್ ಗಳನ್ನು ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶ್ರೀಕಾಂತ್ ನಾಯಕ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿ ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪ ಅಂಚನ್ ಮಣಿಪಾಲ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಜುಲೈ 8 ರಂದು ಕಾರ್ಮಿಕ ಇಲಾಖೆಯಿಂದ ಗ್ರಾಪಂ ವ್ಯಾಪ್ತಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 200 ಆಹಾರ ಸಾಮಗ್ರಿಗಳ ಕಿಟ್ ಮಂಜೂರಾಗಿತ್ತು. ಈ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಶಾಂತಪ್ಪ […]