ರಾಜ್ಯದಲ್ಲಿಯೂ “ಸಮಾನ ನಾಗರಿಕ ಸಂಹಿತೆ” ಕಾನೂನು ಜಾರಿಗೊಳಿಸಿ: ಶ್ರೀರಾಮಸೇನೆ ಆಗ್ರಹ

ಉಡುಪಿ: “ಸಮಾನ ನಾಗರಿಕ ಸಂಹಿತೆ” ಕಾನೂನು ಜಾರಿಯ ಮೂಲಕ ಉತ್ತರ ಪ್ರದೇಶ ಮತ್ತು ಅಸ್ಸಾಂ ಸರಕಾರಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಕ್ರಮವನ್ನು ಉಡುಪಿ ಜಿಲ್ಲಾ ಶ್ರೀರಾಮಸೇನೆ ಸ್ವಾಗತಿಸಿದೆ. ಪ್ರಸ್ತುತ ಸಮಯದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯು ಅವಶ್ಯಕತೆ ಇದೆಯೆಂದು ಕೇಂದ್ರ ಸರಕಾರಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯ ಸೂಚಿಸಿದ ಕೆಲವೇ ಘಂಟೆಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ನೂತನ ಜನಸಂಖ್ಯಾ ನೀತಿ” ಕರಡನ್ನು ಜಾರಿಗೆ ತರಲು ಮುಂದಾಗಿರುವುದು ಅತ್ಯಂತ ಸಂತೋಷದ ವಿಷಯವೆಂದು ಸಂಘಟನೆಯ […]

ಉಡುಪಿ: ಎರಡೂವರೆ ವರ್ಷದ ಮಗುವಿನ ಅಪಹರಣ

ಉಡುಪಿ: ಎರಡೂವರೆ ವರ್ಷದ ಮಗವೊಂದನ್ನು ಅಪಹರಣ ನಡೆಸಿರುವ ಘಟನೆ ಉಡುಪಿ ಕರಾವಳಿ ಬೈಪಾಸ್ ಬಳಿ ಇಂದು ನಡೆದಿದೆ. ನಾಪತ್ತೆಯಾದ ಮಗುವನ್ನು ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ ಪುತ್ರ ಶಿವರಾಜ್ (2.4 ವರ್ಷ) ಎಂದು ಗುರುತಿಸಲಾಗಿದೆ. ಈ ದಂಪತಿ ಉಡುಪಿಯ ಕರಾವಳಿ ಬೈಪಾಸ್ ಬಳಿಯ ಶೆಡ್‌ವೊಂದರಲ್ಲಿ ವಾಸವಾಗಿದ್ದರು. ಈ ದಂಪತಿಗೆ ಬಾಗಲಕೋಟೆಯ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಇಂದು ಬೆಳಿಗ್ಗೆ ಮಗುವನ್ನು ಚಹಾ ಕುಡಿಸಿ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಆತ ಮಗುವನ್ನು ಕರೆದುಕೊಂಡು ಹೋಗಿದ್ದಾನೆ. […]

ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ನಿಧಿ ಸಮರ್ಪಿಸಿ ಗೌರವಾರ್ಪಣೆ

ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪರ್ಕಳ ಇದರ ವತಿಯಿಂದ ಹೆರ್ಗ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಧನಸಹಾಯ ನೀಡಿ ಗೌರವಾರ್ಪಣೆ ಸಲ್ಲಿಸುವ ಸಮಾರಂಭ ಪರ್ಕಳ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಕೋವಿಡ್ 19 ವಾರಿಯರ್ಸ್ ಗಳಾಗಿ ಜೀವದ ಹಂಗು ತೊರೆದು ಜನ ಸೇವೆ ಮಾಡಿದ 11 ಮಂದಿ ಆಶಾ‌ಕಾರ್ಯಕರ್ತೆಯರನ್ನು ಗೌರವಿಸಲಾಯಿತು.   ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ಅಶೋಕ ಕಾಮತ್ ಕೆ. ಅವರು, ಆಶಾ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. […]

ಉಡುಪಿ ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿ ‘ಕಟ್ಟಿಗೆ ಮುಹೂರ್ತ’ ಸಂಪನ್ನ

ಉಡುಪಿ: ಉಡುಪಿ ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿಯಾಗಿ ನಡೆಯುವ  3ನೇ ಕಾರ್ಯಕ್ರಮ ‘ಕಟ್ಟಿಗೆ ಮುಹೂರ್ತ’ ಇಂದು ಬೆಳಿಗ್ಗೆ ಕೃಷ್ಣಮಠದಲ್ಲಿ ನೆರವೇರಿತು. ಮಠದ ಪುರೋಹಿತರಾದ ಕೆ. ಶ್ರೀನಿವಾಸ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿತು.‌ ಮೊದಲು ಮಠದ ಪಟ್ಟದ ದೇವರಾದ ಕಾಳೀಯಮರ್ದನ ಕೃಷ್ಣ ದೇವರಿಗೆ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಲಾಯಿತು. ಬಳಿಕ ಕಟ್ಟಿಗೆಗಳನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಚಂದ್ರೇಶ್ವರ, ಅನಂತೇಶ್ವರ, ಮಧ್ವಾಚಾರ್ಯರು ಹಾಗೂ ಕೃಷ್ಣ ದೇವರ ದರ್ಶನ ಪಡೆದು […]