ಕಾಪು: ಹುಟ್ಟುಹಬ್ಬ ಆಚರಣೆ ವೇಳೆ ಚೂರಿ ಇರಿದು ಪರಾರಿ

ಕಾಪು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಜೀವ ಬೆದರಿಕೆಯೊಡ್ಡಿದ ಘಟನೆ ಕಾಪು ತಾಲೂಕಿನ ಕೋಟೆ ಗ್ರಾಮದ ಕಜಕೋಡ್ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಶರತ್ ದೇವಾಡಿಗ ಎಂದು ಗುರುತಿಸಲಾಗಿದೆ. ಶರತ್ ಜೂನ್ 22ರಂದು ರಾತ್ರಿ 7.30ರ ಸುಮಾರಿಗೆ ಕಜಕೋಡ್ ಹೊಳೆಯ ಬದಿಯಲ್ಲಿ ಎಂಟು ಮಂದಿ ಸ್ನೇಹಿತ ಜೊತೆಗೂಡಿ ಸುಕೇಶ್ ಮೆಂಡನ್ ಎಂಬ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಈ ವೇಳೆ ಅಭಿಷೇಕ್ ಎಂಬಾತ ಶರತ್ ನಿಗೆ ಕರೆ ಮಾಡಿದ್ದನು. ಆದರೆ ಶರತ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕಾರಣ […]

ರಾಜೀನಾಮೆ ವಿಚಾರ ಮುಂಬೈನಲ್ಲಿ ತೀರ್ಮಾನಿಸುತ್ತೇನೆ; ಬಂಡಾಯದ ಎಚ್ಚರಿಕೆ ಕೊಟ್ಟ ಜಾರಕಿಹೊಳಿ

ಮೈಸೂರು: ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೇಳುವ ಮುನ್ಸೂಚನೆ ನೀಡಿದ್ದಾರೆ. ಇಂದು ಸುತ್ತೂರು ಮಠಕ್ಕೆ ಭೇಟಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಂಬಯಿಗೆ ಹೋಗಿರೋದು ರಾಜಕೀಯ ಇರಬಹುದು. ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳುತ್ತೇನೆ. ಆದರೆ ಮಂತ್ರಿಗೋಸ್ಕರ ನಾನು ಸ್ವಾಮೀಜಿಯನ್ನ ಭೇಟಿ ಮಾಡುತ್ತಿಲ್ಲ. ರಾಜೀನಾಮೆ ವಿಚಾರ ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದು ಪರೋಕ್ಷವಾಗಿ ರಾಜೀನಾಮೆ […]

ದ.ಕ: ಜುಲೈ 1ರಿಂದ ಖಾಸಗಿ, ಸಿಟಿ ಬಸ್ ಸಂಚಾರ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 1ರಿಂದ ಸೀಮಿತ ಸಂಖ್ಯೆಯಲ್ಲಿ ಖಾಸಗಿ ಹಾಗೂ ಸಿಟಿ ಬಸ್‌ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಮೂಡುಬಿದಿರೆಯಲ್ಲಿ ಗುರುವಾರ ನಡೆದ ಬಸ್‌ ಮಾಲೀಕರ ಸಂಘದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೆಎಸ್ಸಾರ್ಟಿಸಿ ಬಸ್‌ ಸಂಚಾರ: ಗುರುವಾರ ದ.ಕ. ಜಿಲ್ಲೆಯಿಂದ ಮಂಗಳೂರು, ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಉಡುಪಿ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಿಗೆ 200ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಿವೆ. ಜಿಲ್ಲಾ ವ್ಯಾಪ್ತಿಯೊಳಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಬಸ್‌ ಕಾರ್ಯಾಚರಣೆ […]