ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ; ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ಆಗ್ರಹ
ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂತಹ “ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ”. ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಾರ್ವಜನಿಕ ಶಿಕ್ಷಣದ ಉಪನಿರ್ದೇಶಕರು, ಕಾರ್ಮಿಕ ಇನ್ಸ್‌ಪೆಕ್ಟರ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿಯನ್ನು ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು, ಬಾಲ ಕಾರ್ಮಿಕತೆಗೆ ಒಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು, ಕಾರ್ಯಾಂಗ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿ ತಳ […]
ಉಡುಪಿ: ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತ ಚಾಚಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ
ಉಡುಪಿ: ದೇಶ ಸೇವೆ ಹಾಗೂ ಸಮಾಜ ಸೇವೆ ಮಾಡುವ ಉದ್ದೇಶದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗವನ್ನು ಹುಟ್ಟುಹಾಕಿದ್ದು, ಸಂಸ್ಥೆಯ ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರ ಜನ್ಮದಿನದ ಪ್ರಯುಕ್ತ ಒಂದು ವಾರ ಕಾಲ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಸಂಸ್ಥೆ ಮಾಡಿದೆ. ಅಲ್ಲದೆ, ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ಅನ್ನದಾನ, ತರಕಾರಿ ಕಿಟ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳು ಮತ್ತು ಕೋವಿಡ್ 19 ಲಸಿಕೆ ಜಾಗೃತಿ ಮೂಡಿಸುವ […]
ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್
ಬ್ರಹ್ಮಾವರ: ವನಮಹೋತ್ಸವದ ಅಂಗವಾಗಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವು ಇಂದು ಕ್ಲಬ್ ನ ಆವರಣದಲ್ಲಿ ನಡೆಯಿತು. ಅನಿವಾಸಿ ಭಾರತಿ ಹಾಗೂ ಉದ್ಯಮಿ ಕೆಂಜೂರು ಶಶಿಧರ್ ಶೆಟ್ಟಿ ಬಹರೈನ್ ಅವರು ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಎಲ್ಲ ಜನರು ತಮ್ಮ ಮನೆಯ ಆವರಣಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಿ ಪರಿಸರ ಬೆಳೆಸಬೇಕು ಎಂದರು. ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಗಿಡಗಳನ್ನು ಕ್ಲಬ್ ನ […]
ಮಂಗಳೂರು-ಪೂನಾ, ಉಡುಪಿ-ಹೈದ್ರಾಬಾದ್ ಮಾರ್ಗದ ಬಸ್ ಸಂಚಾರ ಪುನರಾರಂಭ
ಉಡುಪಿ: ಪ್ರಸ್ತುತ ಕೋವಿಡ್-19 ಲಾಕ್‌ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕ.ರಾ.ರ.ಸ. ನಿಗಮದ ವತಿಯಿಂದ ಮಂಗಳೂರು-ಪೂನಾ ಮಾರ್ಗದಲ್ಲಿ ಅಂಬಾರಿ ಡ್ರೀಮ್‌ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 28 ರಿಂದ ಪುನರಾರಂಭ ಆಗಲಿದೆ. ಬಸ್ ಸಂಚಾರದ ವಿವರ: ಅಂಬಾರಿ ಡ್ರೀಮ್‌ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ನ 4 ಗಂಟೆಗೆ ಮಂಗಳೂರಿನಿಂದ ಹೊರಟು ಉಡುಪಿ, ಮಣಿಪಾಲ, ಕುಂದಾಪುರ, ಕುಮಟ, ಬೆಳಗಾವಿ, ಕರಾಡ, ಸತಾರ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಪೂನಾ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ […]
ಉಡುಪಿ: ಜುಲೈ 1ರಿಂದ ಸಿಟಿ, ಸರ್ವಿಸ್ ಬಸ್ ಸಂಚಾರ ಆರಂಭ; ಟಿಕೆಟ್ ದರ ಹೆಚ್ಚಳ
ಉಡುಪಿ: ಜಿಲ್ಲೆಯಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಸಿಟಿ ಹಾಗೂ ಸರ್ವೀಸ್ ಬಸ್ ಸಂಚಾರ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದ ಶಾಸಕರು, ಅಧಿಕಾರಿಗಳು, ಬಸ್ ಮಾಲೀಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ. ಶೇ. 25ರಷ್ಟು ಟಿಕೆಟ್ ದರ ಹೆಚ್ಚಳ: ಡೀಸೆಲ್ ದರ ಏರಿಕೆ ಹಾಗೂ ಶೇ. […]