ತುಳು ಭಾಷೆಗೆ ಅಧಿಕೃತ ಮಾನ್ಯತೆ: ಟ್ವಿಟರ್ ಅಭಿಯಾನಕ್ಕೆ ಭಾರಿ ಬೆಂಬಲ

ಮಂಗಳೂರು: ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜೈ ತುಳುನಾಡು ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರು ಭಾನುವಾರ ಆರಂಭಿಸಿದ ಟ್ವಿಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಹಮ್ಮಿಕೊಂಡಿರುವ ಟ್ವೀಟ್ ಅಭಿಯಾನಕ್ಕೆ ಸಾವಿರಾರು ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ತುಳುಭಾಷೆಯ ಸ್ಥಾನಮಾನಕ್ಕಾಗಿ […]

ಆಪತ್ಕಾಲದ “ದೇವ ಮಂದಿರ” ಮೈಮುನಾ ಫೌಂಡೇಶನ್: ನೆಲೆಯಿಲ್ಲದವರಿಗೆ ಸ್ಪೂರ್ತಿ ಸೆಲೆಯಾದ ಆಪದ್ಭಾಂಧವ ಆಸೀಫ್ ಕತೆ ಇದು

ಭ ಗವಂತನ ಸೃಷ್ಟಿಯಲ್ಲಿರುವವರೆಲ್ಲ ಆತನ ಬಂಧುಗಳೇ, ಯಾರು ಅವರುಗಳ ಸೇವೆ ಮಾಡುತ್ತಾರೋ, ಅವರು ದೇವರಿಗೆ ಹತ್ತಿರವಾದವರು” ಎನ್ನುತ್ತದೆ ವೇದವಾಣಿ. ಇದು ನೂರಕ್ಕೆ ನೂರರಷ್ಟು ಸತ್ಯ. ಇದನ್ನೇ ಸ್ವಾಮಿ ವಿವೇಕಾನಂದರು “ಎಲ್ಲರೂ ಭಗವಂತನ ರೂಪಗಳೇ” ಎನ್ನುತ್ತಾರೆ. ಆ ರೂಪಗಳು ನಮ್ಮ ಕಣ್ಣಮುಂದೆ ಬೇರೆ ಬೇರೆಯಾಗಿ ಕಂಡು ಬರುತ್ತವೆ. ದೀನರಂತೆ, ಹುಚ್ಚರಂತೆ, ರೋಗಿಯಂತೆ, ಆಶಕ್ತರಂತೆ, ದುರ್ಬಲರಂತೆ, ನಿರ್ಬಲರಂತೆ, ದುಃಖಿಗಳಂತೆ, ದಿವ್ಯಾಂಗಿಗಳಂತೆ ಭಿಕ್ಷುಕರಂತೆ, ಹೀಗೆ ಲೋಕದ ಸಂತೆಯೊಳಗೆ ಅನೇಕರು ನಾನ ತರದವರಿದ್ದಾರೆ. ಈ ರೀತಿ ನರಳುತ್ತಿರುವವರು ಸಾವಿರಾರು ಜನ ಕಣ್ಣಮುಂದೆ ಇದ್ದಾರೆ. […]

ಕೈರಬೆಟ್ಟು, ಕಲ್ಯಾ ಊರ ಜನರಿಗೆ ನೆರವಾದ ಕೈರಬೆಟ್ಟು, ಕಲ್ಕಾರ್ ಯುವಕರು: ದೈನಂದಿನ ಬಳಕೆ ಸಾಮಾಗ್ರಿ ವಿತರಣೆ

ಕಾರ್ಕಳ:  ಕೈರಬೆಟ್ಟು ವಾರ್ಡಿನಲ್ಲಿ ಕೈರಬೆಟ್ಟು, ಕಲ್ಕಾರ್ ಯುವಕರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಕೈರಬಿಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 250 ಮನೆಗಳಿಗೆ ದೈನಂದಿನ ಬಳಕೆಗೆ ಬೇಕಾದ ಸಾಮಗ್ರಿ ಹಾಗೂ ಆಹಾರ ಧಾನ್ಯಗಳ ನೆರವು ನೀಡಲಾಯಿತು. ಕಲ್ಯ ಗ್ರಾಮದ ಕುಂಟಾಡಿ ಹಾಗೂ ಹಾಳೆಕಟ್ಟೆ ವಾರ್ಡಿಗೂ ದೈನಂದಿನ ಬಳಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸೇವಾ ಅಭಿಯಾನದಲ್ಲಿ ಊರಿನ ಸೇವಾ ಕಾರ್ಯಕರ್ತರು, ಯುವಕರು ಭಾಗವಹಿಸಿದ್ದರು.

ಚುರುಕುಗೊಂಡ ಮುಂಗಾರು: ಕರಾವಳಿ ಜಿಲ್ಲೆಗಳಲ್ಲಿ ಜೂನ್ 17ರ ವರೆಗೆ ಭಾರಿ ಮಳೆ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಹಾಗೂ ಭಾನುವಾರ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಶನಿವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಕಾರ್ಕಳ ತಾಲ್ಲೂಕಿನ ವಿವಿಧೆಡೆ ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳ, ಜೊಯಿಡಾ, ದಾಂಡೇಲಿ, ಯಲ್ಲಾಪುರ, ಸಿದ್ದಾಪುರ ಕಡೆ ಉತ್ತಮ ಮಳೆಯಾಯಿತು. 17ರವರೆಗೆ ಭಾರಿ ಮಳೆ ಸಾಧ್ಯತೆ: ಮುಂಗಾರು ಹಾಗೂ ಪೂರ್ವ ಅರಬ್ಬಿ ಸಮುದ್ರ–ಬಂಗಾಳ […]

ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ದಾರಿದೀಪ ಕುಂದಾಪುರದ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು

ಕುಂದಾಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿದೀಪವಾಗಲೆಂದೇ  ರೂಪು ತಳೆದ ಸಂಸ್ಥೆ ಕುಂದಾಪುರದ  ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು.ಈ ಕಾಲೇಜು ಇದೀಗ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ.‌ ‘ಸಮಾಜದ ಕಟ್ಟಕಡೆಯ ಮಕ್ಕಳೂ ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ .ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ  ಸಂಸ್ಥೆಯು 2021-22ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.‌ ವಿದ್ಯಾರ್ಥಿಗಳು ತಮ್ಮ ಸುಂದರ […]