ಕೋವಿಡ್ ಪರಿಹಾರ ಪ್ಯಾಕೇಜ್ ನಲ್ಲಿ ಮೀನುಗಾರರ ಕಡೆಗಣನೆ: ರಾಜ್ಯ ಬಿಜೆಪಿ ಸರಕಾರದಿಂದ ಮೀನುಗಾರರಿಗೆ ಮಹಾದ್ರೋಹ; ರಮೇಶ್ ಕಾಂಚನ್
ಉಡುಪಿ: ಕರಾವಳಿ ಭಾಗದ ಮೀನುಗಾರರನ್ನು ಪ್ರತಿ ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್ ನಂತೆ ಬಳಸಿಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಕೊರೊನಾ ಸಂಕಷ್ಟ ಕಾಲದಲ್ಲಿ ಮೀನುಗಾರರನ್ನು ಮರೆತುಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಉಡುಪಿ ನಗರಸಭಾ ಪ್ರತಿಪಕ್ಷದ ನಾಯಕರಾದ ರಮೇಶ್ ಕಾಂಚನ್ ಹೇಳಿದ್ದಾರೆ. ಕೋವಿಡ್ ಲಾಕ್ ಡೌನ್ ನಿಂದ ರಾಜ್ಯದ ಎಲ್ಲಾ ಜನರಂತೆ ಮೀನುಗಾರರು ಕೂಡ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಮತ್ಸ್ಯ ಕ್ಷಾಮದಿಂದ ಮೀನುಗಾರರು ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದೀಗ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ […]
ಬ್ಲ್ಯಾಕ್ ಫಂಗಸ್ ಗಾಳಿ ಮೂಲಕವೂ ಹರಡುತ್ತೆ: ಏಮ್ಸ್ ವೈದ್ಯರ ಹೇಳಿಕೆ
ನವದೆಹಲಿ: ಕೊರೊನಾ ಬಳಿಕ ದೇಶದಲ್ಲಿ ಭೀತಿ ಹುಟ್ಟಿಸಿರುವ ಕಪ್ಪು ಶಿಲೀಂಧ್ರ (ಮ್ಯೂಕರ್ ಮೈಕ್ರೋಸಿಸ್)ವು ಗಾಳಿಯ ಮೂಲಕವೂ ಹರಡುತ್ತದೆ ಎಂದು ನವದೆಹಲಿಯ ಏಮ್ಸ್ ಆಸ್ಪತ್ರೆಯ ಪ್ರೊಫೆಸರ್ ಡಾ. ನಿಖಿಲ್ ಟಂಡನ್ ಹೇಳಿದ್ದಾರೆ. ಈ ಶಿಲೀಂಧ್ರ ಆರೋಗ್ಯವಂತ ವ್ಯಕ್ತಿಯ ದೇಹ ಹೊಕ್ಕರೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಕಪ್ಪು ಶಿಲೀಂಧ್ರವು ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದರೆ, ಆ ಸಾಧ್ಯತೆಗಳು ತುಂಬಾ ಕಡಿಮೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿರುತ್ತದೆ ಎಂದು […]
ಸಹಕಾರಿ ಸಂಸ್ಥೆಯ ನೌಕರರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿ; ಕೋವಿಡ್ ಲಸಿಕೆ, ವಿಮಾ ಭದ್ರತೆ ಒದಗಿಸಿ: ಬೋಳ ಸದಾಶಿವ ಶೆಟ್ಟಿ ಆಗ್ರಹ
ಉಡುಪಿ: ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರ, ಕ್ರೆಡಿಟ್, ಸೌಹಾರ್ದ ಹಾಗೂ ಎಲ್ಲಾ ಸಹಕಾರಿ ಸಂಘಗಳ ಸಿಬ್ಬಂದಿ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಹೀಗಾಗಿ ಎಲ್ಲ ಸಹಕಾರಿ ಸಿಬ್ಬಂದಿಗಳಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡುವುದರ ಜತೆಗೆ ವಿಮಾ ಭದ್ರತೆ ಒದಗಿಸಬೇಕು. ಎಲ್ಲಾ ಸಹಕಾರಿ ಸಿಬ್ಬಂದಿಗಳನ್ನು ಕೋವಿಡ್ -19 ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಬೇಕು ಎಂದು ಉಡುಪಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹಾಗೂ ಸಹಕಾರ ಭಾರತೀಯ ಸಂಘಟನಾ ಕಾರ್ಯದರ್ಶಿ […]