ಮನೆಯಂಗಳದಲ್ಲೇ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಕುಟುಂಬಸ್ಥರು
ಕುಂದಾಪುರ: ವ್ಯಕ್ತಿಯ ಶವವನ್ನು ಮನೆಯ ಅಂಗಳದಲ್ಲೇ ಶವ ಸಂಸ್ಕಾರ ಮಾಡಿದ ಘಟನೆ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡನ ಹೋಳೆ, ಉದಯ ನಗರದ ಮೂದೂರಿನಲ್ಲಿ ನಡೆದಿದೆ. ಮುದೂರಿನ ಕೈಲಾಸನ್ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಮೆ. ೧೧ ರಂದು ಸಾವನಪ್ಪಿದ್ದಾರೆ. ಕಡು ಬಡತನದಲ್ಲಿ ಜೀವನ ನಿರ್ವಹಿಸುತ್ತಿರುವ ಇವರಿಗೆ ಶವಸಂಸ್ಕಾರ ನಡೆಸಲು ಈ ಭಾಗದಲ್ಲಿ ಹಿಂದೂ ರುದ್ರಭೂಮಿ ಇಲ್ಲದೇ ತನ್ನ ಮನೆಯ ಅಂಗಳದಲ್ಲಿ ಶವವನ್ನು ಸುಟ್ಟು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಸಾರ್ವಜನಿಕರ ಆಕ್ರೋಶ: ಹಿಂದೂ ರುದ್ರ […]
ಗಂಗೊಳ್ಳಿ: ಪೊಲೀಸ್ ಸಿಬ್ಬಂದಿಗೆ ಸಿಗಂಧೂರೇಶ್ವರಿ ಡ್ಯಾನ್ಸ್ ಅಕಾಡೆಮಿಯಿಂದ ರೋಗನಿರೋಧಕ ಔಷಧಿ ವಿತರಣೆ
ಗಂಗೊಳ್ಳಿ ಮೇ12: ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನರಿಗೋಸ್ಕರ ತಮ್ಮ ಪರಿವಾರದಿಂದ ದೂರವಿದ್ದು ಕಾನೂನು ವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಸಾರ್ವಜನಿಕರಿಗೆ ಇನ್ನಷ್ಟು ಉತ್ತಮವಾದ ಸೇವೆಯನ್ನು ನೀಡಲಿ ಎಂದು ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಬಗ್ಗೆ ಕಾಳಜಿವಹಿಸಿ ಶ್ರೀ ಸಿಗಂಧೂರೇಶ್ವರಿ ಡಾನ್ಸ್ ಅಕಾಡೆಮಿ(ರಿ.) ಗಂಗೊಳ್ಳಿ ಇದರ ಸಂಚಾಲಕರಾದ ಗೋಪಾಲ್ ಚಂದನ್ ರವರು ಗಂಗೊಳ್ಳಿ ಠಾಣೆಯ ನೂತನ ಅಧಿಕಾರಿಗಳಾದ ಶ್ರೀಯುತ ನಂಜಾ ನಾಯ್ಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ ತಮ್ಮ ಮಗಳಾದ […]
ಶಾಸಕ ರಘುಪತಿ ಭಟ್ ಅವರ ಹಡಿಲು ಭೂಮಿ ಆಂದೋಲನಕ್ಕೆ ಅಪಸ್ವರ: ಕಾಂಗ್ರೆಸ್ ನಾಯಕರಿಂದ ರೈತ ವಿರೋಧಿ ಹೇಳಿಕೆ; ಮಹೇಶ್ ಠಾಕೂರ್ ತಿರುಗೇಟು
ಉಡುಪಿ: ಶಾಸಕ ಕೆ.ರಘುಪತಿ ಭಟ್ ಅವರು ತಮ್ಮ ಕ್ಷೇತ್ರದಲ್ಲಿ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಈ ಬಗ್ಗೆ ಯೋಜನೆಗಳನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದು, ಇಡೀ ರಾಜ್ಯದಲ್ಲಿಯೇ ಯಾವ ಶಾಸಕನೂ ಮಾಡದ ಅವರ ಈ ವಿನೂತನ ಹೆಜ್ಜೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರು ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ರವರು ಹೇಳಿಕೆ ನೀಡಿದ್ದಾರೆ. […]
18 ರಿಂದ 44 ವರ್ಷದೊಳಗಿನವರಿಗೆ ಸದ್ಯಕ್ಕಿಲ್ಲ ಲಸಿಕೆ
ಬೆಂಗಳೂರು: ಕೊರೊನಾ ಲಸಿಕೆ ಕೊರತೆ ಹಿನ್ನೆಲೆಯಲ್ಲಿ 18 ರಿಂದ 44 ವರ್ಷದೊಳಗಿನ ನಾಗರಿಕರಿಗೆ ಸದ್ಯಕ್ಕೆ ಕೋವಿಡ್ಗೆ ಸಂಬಂಧಿಸಿದ ಯಾವುದೇ ಲಸಿಕೆ ಸಿಗಲ್ಲ. ಲಸಿಕೆ ಅಭಾವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, 45 ವರ್ಷ ಮೇಲ್ಪಟ್ಟವರಿಗೆ ಈಗಿರುವ ಲಸಿಕೆಯನ್ನ ನೀಡಲು ನಿರ್ಧರಿಸಿದೆ. ಅದರಂತೆ ಎರಡನೇ ಡೋಸ್ ಪಡೆಯುವವರಿಗೆ ಈಗಿರುವ ವ್ಯಾಕ್ಸಿನ್ ಅನ್ನ ರಾಜ್ಯ ಸರ್ಕಾರ ಮೀಸಲಿಡಲಿದೆ. ಸಂಪೂರ್ಣವಾಗಿ ಲಸಿಕೆ ಬಂದ ಬಳಿಕವಷ್ಟೇ 18-44 ವರ್ಷದವರಿಗೆ ವ್ಯಾಕ್ಸಿನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ತಿಂಗಳ ಅಂತ್ಯಕ್ಕೂ ವ್ಯಾಕ್ಸಿನ್ ಬರುವುದು ಅನುಮಾನವಾಗಿದೆ. ಹೀಗಾಗಿ […]