ಸತತ ಮೂರನೇ ದಿನವೂ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ಏರಿಕೆ

ನವದೆಹಲಿ: ದೇಶದಲ್ಲಿ ಒಂದು ಕಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಮಧ್ಯೆ ದೇಶದ ಜನರಿಗೆ ತೈಲ‌ ಬೆಲೆ ಏರಿಕೆಯ ಶಾಕ್ ಉಂಟಾಗಿದೆ. ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 25 ಪೈಸೆ ಮತ್ತು ಡೀಸೆಲ್ 30 ಪೈಸೆ ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ತೈಲ ಬೆಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ದರ ಏರಿಸಿವೆ. ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹90.74ನಿಂದ ₹90.99ಕ್ಕೆ ಏರಿಕೆಯಾದರೆ, ಡೀಸೆಲ್ ದರ […]

ಮಳೆ ಬಂದು ನಿಂತ ಮೇಲೆ: ರಕ್ಷಾ ಪಾಲನ್ ಕ್ಲಿಕ್ಕಿಸಿದ ಚಿತ್ರ

ಮಳೆ ಬಂದು ನಿಂತ ಮೇಲೆ ಹೂ ಗಳ ಮೇಲೆ ಮೂಡುವ ಹನಿಗಳ ಚಿತ್ತಾರವನ್ನು ಸೆರೆ ಹಿಡಿದವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ರಕ್ಷಾ ಪಾಲನ್ (ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿ xpress ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ  whatsapp:7483419099 Email:newsudupixpress@gmail.com)

ಕೇರಳದಲ್ಲಿ ಕಂಪ್ಲೀಟ್ ಲಾಕ್ ಡೌನ್ ಘೋಷಣೆ

ಕೇರಳ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ರಾಜ್ಯದಲ್ಲಿ ಮೇ 8ರಿಂದ 16ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಸದ್ಯ ಕೇರಳದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಆದರೆ ದಿನೇ ದಿನೇ ಕೊರೊನಾ ಕೇಸ್ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲಿ‌ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಹಲ್ಲಿನ ಆರೈಕೆಯಲ್ಲಿ ಕೇರ್ ಲೆಸ್ ಮಾಡ್ಬೇಡಿ:ಇಲ್ಲಿದೆ ಹಲ್ಲಿನ ಆರೋಗ್ಯ ಕಾಪಾಡಲು ಬೊಂಬಾಟ್ ಟಿಪ್ಸ್

ಆರೋಗ್ಯಕರವಾದ, ಸುಂದರ, ಸ್ವಚ್ಛ ಹಲ್ಲುಗಳನ್ನು ಪಡೆಯುವುದು ಎಲ್ಲರ ಇಚ್ಛೆ. ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದ ತಕ್ಷಣ ಬ್ರಶ್ ಮಾಡುವುದು ರೂಢಿ. ಆದರೆ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದು ತುಂಬಾ ಮುಖ್ಯ. ರಾತ್ರಿ ಹೊತ್ತಲ್ಲಿ ನಾವು ಸೇವಿಸಿದ ಆಹಾರ ಹಲ್ಲಿನಲ್ಲಿ ಸಿಲುಕಿಕೊಂಡಾಗ ಬ್ಯಾಕ್ಟೀರಿಯಾಗಳು ಆಹಾರದ ಭಾಗಗಳನ್ನು ಸೇವಿಸಲು ಆರಂಭಿಸುತ್ತದೆ. ಇದರಿಂದ ಹಲ್ಲುಗಳು ಕೊಳೆಯಲು ಪ್ರಾರಂಭವಾಗುತ್ತದೆ, ಮಾತ್ರವಲ್ಲದೆ ಬಾಯಿಯ ದುರ್ವಾಸನೆ ಹೆಚ್ಚುತ್ತದೆ. ಇನ್ನು ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್ […]

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೈಚಾರಿಕ ಸಾಹಿತಿ ಡಾ. ಜಿ. ಭಾಸ್ಕರ್ ಮಯ್ಯ ನಿಧನ

ಉಡುಪಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ. ಜಿ. ಭಾಸ್ಕರ್ ಮಯ್ಯ (70) ಅವರು ಕೋವಿಡ್ ನಿಂದ ಇಂದು ನಿಧನ ಹೊಂದಿದರು. ಕಳೆದ 4 ದಿನಗಳಿಂದ ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪ್ರಣವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4.30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕರ್ನಾಟಕ ವೈಚಾರಿಕ ಸಾಹಿತ್ಯದ ಮೇರುಕೊಂಡಿಯೊಂದು ಇಂದು ಕಳಚಿಕೊಂಡಂತಾಗಿದೆ. ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ.ಭಾಸ್ಕರ್ […]