ಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

ಮುಂಬೈ: ಬಾಲಿವುಡ್ ನ ಪ್ರಸಿದ್ಧ ಸಂಗೀತ ಸಂಯೋಜಕ ಜೋಡಿ ನದೀಮ್- ಶ್ರವಣ್ ಖ್ಯಾತಿಯ ಶ್ರವಣ್ ರಾಥೋಡ್ (66) ಅವರು ಕೊರೊನಾ ಸೋಂಕಿನಿಂದ ನಿಧನ ಹೊಂದಿದರು. ಮೂರು ದಿನಗಳ ಹಿಂದೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮುಂಬೈಯ ಎಸ್ ಎಲ್ ರಹೇಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಶ್ರವಣ್ ರಾಥೋಡ್ ಮೃತಪಟ್ಟಿರುವ ವಿಚಾರವನ್ನು ಚಿತ್ರ ನಿರ್ದೇಶಕ ಅನಿಲ್ ಶರ್ಮಾ ಎಂಬುವರು ತಮ್ಮ ಟ್ವೀಟ್ ನಲ್ಲಿ […]