ಉಡುಪಿ: ವೀಕೆಂಡ್ ಕರ್ಪ್ಯೂ; ಏನಿದೆ.?, ಏನಿಲ್ಲ.?

ಉಡುಪಿ: ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಶನಿವಾರ ಹಾಗೂ ಭಾನುವಾರ ವೀಕೆಂಡ್ ಲಾಕ್ ಡೌನ್ ಜಾರಿಗೊಳಿಸಿದೆ. ಈ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಯಾವುದಕ್ಕೆಲ್ಲ‌ ಅವಕಾಶವಿದೆ.? ಯಾವುದಕ್ಕಿಲ್ಲ? ಎಂಬುವುದರ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಯಾವುದೆಲ್ಲ ಬಂದ್: ಸಿನೆಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಜಿಮ್ ಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಈಜುಕೊಳಗಳು, ಮನರಂಜನೆ / ಮನೋರಂಜನಾ ಉದ್ಯಾನಗಳು, ಕ್ಲಬ್, ಬಾರ್ ಗಳು, ಸಭಾಂಗಣಗಳು, ಅಸೆಂಬ್ಲಿ ಹಾಲ್‍ಗಳು […]

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಯಶ್‍ಪಾಲ್ ಸುವರ್ಣ ನೇಮಕ

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಯಶ್‍ಪಾಲ್ ಸುವರ್ಣ ಅವರು ನೇಮಕಗೊಂಡಿದ್ದಾರೆ. ಯಶ್‍ಪಾಲ್ ಸುವರ್ಣ ಅವರಿಗೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.

ಮಣಿಪಾಲ: ಜಲ್ಲಿ ಸಾಗಾಟದ ಟಿಪ್ಪರ್-ಕಾರು ಮಧ್ಯೆ ಡಿಕ್ಕಿ; ಟಿಪ್ಪರ್ ಚಾಲಕ ಗಂಭೀರ

ಮಣಿಪಾಲ: ಇಲ್ಲಿನ ಸಿಂಡಿಕೇಟ್ ಸರ್ಕಲ್ ಬಳಿ ಇಂದು ಮಧ್ಯಾಹ್ನ ಜಲ್ಲಿ ಸಾಗಾಟದ ಟಿಪ್ಪರ್ ಮತ್ತು ಕಾರು ಮಧ್ಯೆ ನಡೆದ ಅಪಘಾತದಲ್ಲಿ ಟಿಪ್ಪರ್ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಟಿಪ್ಪರ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಮಗುಚಿಬಿದ್ದಿದೆ. ಜಲ್ಲಿ ತುಂಬಿದ ಟಿಪ್ಪರ್ ಮಣಿಪಾಲದಿಂದ ಪೆರಂಪಳ್ಳಿ ಕಡೆಗೆ ಹೋಗುತ್ತಿದ್ದು, ಕಾರು ಉಡುಪಿಯಿಂದ ಮಣಿಪಾಲಕ್ಕೆ ಬರುತ್ತಿತ್ತು ಎನ್ನಲಾಗಿದೆ. ಟಿಪ್ಪರ್ ಸಿಂಡಿಕೇಟ್ ಸರ್ಕಲ್ ನಲ್ಲಿ ಯೂ ಟರ್ನ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ವೇಳೆ ಕಾರಿಗೂ […]

ಕೇಂದ್ರದಿಂದ ಕೋವಿಡ್ ರೋಗಿಗಳ ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ: ವಿವರ ಹೀಗಿದೆ.?

ನವದೆಹಲಿ: ಕೋವಿಡ್ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗುವ ಅನಿವಾರ್ಯತೆಯನ್ನು ಸಾಧ್ಯವಾದಷ್ಟೂ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ಆರಂಭಿಕ ಹಂತದ ಕೋವಿಡ್-19  ಸೋಂಕು ಇರುವ ರೋಗಿಗಳಿಗೆ ಚಿಕಿತ್ಸೆ, ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸ್ವಯಂ ಆರೈಕೆಗಾಗಿ ಪ್ರೋನಿಂಗ್ ವಿಧಾನವನ್ನು ಅನುಸರಿಸಲು ಸಲಹೆ ನೀಡಿದ್ದು, ಐಸೊಲೇಷನ್ ನಲ್ಲಿರುವ ರೋಗಿಗಳು ಈ ವಿಧಾನವನ್ನು ಅನುಸರಿಸಬಹುದೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರೋನಿಂಗ್ ವಿಧಾನ ಅನುಸರಿಸುವುದು ಹೇಗೆ? ಪ್ರೋನಿಂಗ್ ಚಿಕಿತ್ಸಾ ವಿಧಾನದಲ್ಲಿ ರೋಗಿಗಳನ್ನು, ಮೇಲ್ಕಂಡ ಚಿತ್ರದಲ್ಲಿ ತೋರಿಸಿರುವಂತೆ ಹೊಟ್ಟೆ ಕೆಳಭಾಗಕ್ಕೆ ಬರುವ ಭಂಗಿಯಲ್ಲಿ ಮಲಗಿಸಲಾಗುತ್ತದೆ. […]

ಕಾರ್ಕಳ: ಶಿವಂ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ನಲ್ಲಿ ವಿಶೇಷ ಆಫರ್ ಸೇಲ್, ಎಕ್ಸ್ ಚೇಂಜ್ ಆಫರ್

ಕಾರ್ಕಳ: ಇಲ್ಲಿನ ಮಾರ್ಕೆಟ್ ರೋಡ್ ನ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್ ನಲ್ಲಿ‌ರುವ ‘ಶಿವಂ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್’ ನ ನವೀಕೃತ ಶೋರೂಮ್ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಸೇಲ್ ಹಾಗೂ ಎಕ್ಸ್ ಚೇಂಜ್ ಆಫರ್ ಸೇಲ್ ಕೊಡುಗೆ ನೀಡಲಾಗಿದೆ. ಈ ವಿಶೇಷ ಆಫರ್ ಗಳು ಪ್ರಸಿದ್ಧ ಕಂಪೆನಿಗಳ ಆಯ್ದ ಉಪಕರಣಗಳಿಗೆ ಮಾತ್ರ ಲಭ್ಯವಿದೆ. ಗ್ರಾಹಕರು ಕೂಡಲೇ ಶೋರೂಮ್ ಗೆ ಭೇಟಿ ನೀಡಿ ಈ ವಿಶೇಷ ಆಫರ್ ನ ಲಾಭವನ್ನು ಪಡೆಯಬಹುದು. ಸಿಸಿ ಟಿವಿ, ಕೆಮರಾ, ಹೋಂ ಸೆಕ್ಯುರಿಟಿ […]