ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ಹೀಗಾಗಿ ನಗರದ ಆದರ್ಶ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಆದರ್ಶ ಆಸ್ಪತ್ರೆಯಲ್ಲಿ 14 ದಿನಗಳ ಕೋವಿಡ್ ಚಿಕಿತ್ಸೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದೇನೆ. ಕೋವಿಡ್ ವರದಿ ನೆಗೆಟಿವ್ ಬಂದಿದ್ದು, ನಿರಾಳವೆನಿಸಿದೆ. ನಾಳೆಯಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತೇನೆ. ನನಗೆ ಚಿಕಿತ್ಸೆ ನೀಡಿ ಬೇಗ ಗುಣಮುಖರಾಗುವಂತೆ ಮಾಡಿದ ಡಾ. ಚಂದ್ರಶೇಖರ್ ಮತ್ತು […]

ಉಡುಪಿ ನಗರಸಭೆ ಬಳಿಯ ಹಾಜಿ ಬುಡಾನ್ ಶುಶ್ರೂಷಾಲಯ ಆವರಣದಲ್ಲಿ ತಾಜ್ಯಗಳ ರಾಶಿ; ವಿಲೇವಾರಿಗೆ ಆಗ್ರಹ

ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ನಗರಸಭೆ ಕಚೇರಿ ಬಳಿ ಇರುವ ಹಾಜಿ ಬುಡಾನ್ ಶುಶ್ರೂಷಾಲಯ ಕಟ್ಟಡದ ಕಂಪೌಂಡ್ ಒಳಗಿರುವ, ಮೇಲ್ಸೆತುವೆಗೆ ಹೋಗುವ ಸ್ಥಳದಲ್ಲಿ ಸಾರ್ವಜನಿಕರು ಕಸ ತಾಜ್ಯಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಇಲ್ಲಿ ಮದ್ಯದ ಬಾಟಲಿಗಳು, ಪ್ರಾಣಿಗಳ ಕಳೇಬರಗಳು, ಆಹಾರ ತಾಜ್ಯಗಳನ್ನು ಎಸೆಯಲಾಗುತ್ತಿದೆ. ಕಂಪೌಂಡ್ ಪಕ್ಕದಲ್ಲಿ ಪಾದಚಾರಿ ರಸ್ತೆ ಹಾದುಹೋಗತ್ತಿದ್ದು, ಇಲ್ಲಿ ಹರಡುತ್ತಿರುವ ವಾಸನೆಯಿಂದ ಸಾರ್ವಜನಿಕರು ಸಂಚರಿಸಲು ಅಸಾಧ್ಯ ಪರಿಸ್ಥಿತಿ ಎದುರಾಗಿದೆ. ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗಿದೆ. ನಗರಾಡಳಿತವು ಇಲ್ಲಿ ಸಂಗ್ರಹಗೊಂಡಿರುವ ಕಸ ತಾಜ್ಯಗಳನ್ನು ವಿಲೇವಾರಿಗೊಳಿಸಿ, ಮತ್ತೆ ತಾಜ್ಯಗಳನ್ನು […]