ಜಾತ್ರೆಗಳಿಗೆ ನಿರ್ಬಂಧ, ಮದುವೆಗೆ ಪಾಸ್ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದ್ದು, ಹೀಗಾಗಿ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ಜಾತ್ರೆಗಳು ನಡೆದರೆ, ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆ ಆಗುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಕೋವಿಡ್ ಪರಿಸ್ಥಿತಿ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜೊತೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೊರೊನಾ ನಿಯಂತ್ರಿಸಲು ಸರ್ಕಾರ ಘೋಷಿಸಿರುವ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ಕಡ್ಡಾಯವಾಗಿ ಜಾರಿಗೊಳಿಸಬೇಕು. […]
ಬಹುಕೋಟಿ ಮೇವು ಹಗರಣ: ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಗೆ ಜಾಮೀನು ಮಂಜೂರು
ನವದೆಹಲಿ: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಒಳಗಾಗಿದ್ದ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಗೆ ಕಡೆಗೂ ಜಾಮೀನು ಮಂಜೂರಾಗಿದೆ. ಜಾರ್ಖಂಡ್ ಹೈಕೋರ್ಟ್ ಶನಿವಾರ(ಏ.17) ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಜಾರ್ಖಂಡ್(ಹಿಂದಿನ ಬಿಹಾರ) ನಗರದಲ್ಲಿನ ಖಜಾನೆಯಿಂದ 3.13 ಕೋಟಿ ರೂಪಾಯಿ ತೆಗೆದ ಪ್ರಕರಣದಲ್ಲಿ ಲಾಲು ಪ್ರಸಾದ್ ದೋಷಿಯಾಗಿದ್ದರು. ಇದೇ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದರು. 2021ರ ಫೆಬ್ರುವರಿ 19ರಂದು ಲಾಲುಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಕಾನೂನು ಬಾಹಿರವಾಗಿ ಡುಮ್ಕಾ […]
ಕಾರ್ಕಳ: ಕೊಟ್ಟಿಗೆಯಲ್ಲಿ ಕಟ್ಟಿದ್ದ ದನ ಕಳವು
ಕಾರ್ಕಳ: ಇಲ್ಲಿನ ಕುಂಟಲ್ಪಾಡಿ ನಿವಾಸಿ ಸುನೀಲ್ ಕೊಟ್ಯಾನ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಡೆದಿದೆ. ಸುನೀಲ್ ಕೃಷಿಕರಾಗಿದ್ದು, ಕೃಷಿಯ ಜತೆಗೆ ಹೈನುಗಾರಿಕೆಯನ್ನು ನಡೆಸುತ್ತಿದ್ದರು. 6 ದನಗಳನ್ನು ಖರೀದಿಸಿ ಸಾಕಿಕೊಂಡಿದ್ದರು. ಎಂದಿನಂತೆ ಎ.12ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಆದರೆ, ಮರುದಿನ ಬೆಳಿಗ್ಗೆ ಹಾಲು ಕರೆಯಲು ಬಂದಾಗ ಐದು ದನಗಳು ಮಾತ್ರ ಇದ್ದು, ಒಂದು ದನ ಕಳವಾಗಿರುವುದು ಗೊತ್ತಾಗಿದೆ. ಘಟನೆ ನಡೆದ ನಾಲ್ಕೈದು ದಿನಗಳ ಬಳಿಕ ಅಂದರೆ ಎ.16ರಂದು ಮೂವರು ವ್ಯಕ್ತಿಗಳು […]
ಛೇ ನನ್ನದು ಅನಿವಾರ್ಯತೆಯ ಬದುಕು ಎಂದು ಕೊರಗದಿರಿ: ಮನಸ್ಸು ಮಾಡಿದರೆ ಅನಿವಾರ್ಯತೆಯ ಬದುಕಲ್ಲೇ ಹೊಸತೇನೋ ಸಿಗುತ್ತೆ!
» ಮಂಜುಳಾ.ಜಿ.ತೆಕ್ಕಟ್ಟೆ ಎಲ್ಲರಿಗೂ ಒಂದು ಕನಸು, ತುಡಿತ ಇದೆ.ಬದುಕನ್ನು ಖುಷಿಯಿಂದ ಬದುಕಬೇಕೆಂದು. ಏಕೆಂದರೆ ಇರುವುದು ಒಂದೇ ಬದುಕು. ಒಮ್ಮೆ ಕೈ ಜಾರಿ ಹೋದರೆ ಮರಳಿ ಬಾರದು ಎಂಬ ಕಟುವಾಸ್ತವ ನಮ್ಮೆಲ್ಲರಿಗೂ ಗೊತ್ತು. ನಿತ್ಯವೂ ಬದುಕಿನ ಕುರಿತು ನಮ್ಮದೇ ಕನಸು ಕಾಣುತ್ತಾ ನಾವು ಬದುಕುತ್ತೇವೆ. ಆದರೂ ವೈರುದ್ಯ! ಎಂದರೆ ನಾವು ಕಂಡಂತೆ ಬದುಕು ನೀಲಿ ನಕ್ಷೆ ಪ್ರಕಾರ ನೂರಕ್ಕೆ ನೂರು ಪ್ರತಿಶತ ಹಾಗೆ ನಡೆಯುವುದಿಲ್ಲ. ಅಚಾನಕ್ ತಿರುವುಗಳು ಸಾಕಷ್ಟು ಬರುತ್ತವೆ. ನಾವು ಅಂದುಕೊಂಡಿರುವುದಕ್ಕಿಂತ ಬೇರೇನೇ ಇನ್ನೇನೋ ನಾವು ಅಂದುಕೊಂಡೇ […]
ತಮಿಳಿನ ಖ್ಯಾತ ಹಾಸ್ಯನಟ ನಟ ವಿವೇಕ್ ನಿಧನ
ಚೆನ್ನೈ: ತಮಿಳಿನ ಖ್ಯಾತ ಹಾಸ್ಯನಟ ನಟ ವಿವೇಕ್ (59) ಶನಿವಾರ ನಿಧನ ಹೊಂದಿದರು. ಶುಕ್ರವಾರ ಅವರಿಗೆ ಹೃದಯ ಸ್ತಂಭನವಾಗಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೃದಯದ ರಕ್ತನಾಳಗಳಲ್ಲಿ ಶೇ 100ರಷ್ಟು ಅಡ್ಡಗಟ್ಟುವಿಕೆ ಉಂಟಾಗಿ ಹೃದಯ ಸ್ತಂಭನವಾಗಿತ್ತು. ಕೃತಕವಾಗಿ ರಕ್ತವನ್ನು ಪಂಪ್ ಮಾಡುವ ವ್ಯವಸ್ಥೆ ಅಳವಡಿಸಲಾಗಿತ್ತು. ಅವರಿಗೆ ಆಂಜಿಯೊಗ್ರಾಮ್ ಮತ್ತು ಆಂಜಿಯೊಪ್ಲಾಸ್ಟಿ ಚಿಕಿತ್ಸೆ ನಡೆಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿವೇಕ್ ಅವರು ರಜನಿಕಾಂತ್, […]