ಈದು ಶ್ರೀ ವನದುರ್ಗಾ ದೇವಸ್ಥಾನದ ವರ್ಧಂತ್ಯುತ್ಸವ, ಶ್ರೀ ಪಂಚದುರ್ಗಾ ಮಂತ್ರ ಹೋಮ ಸಂಪನ್ನ

ಕಾರ್ಕಳ: ಈದು ಶ್ರೀ ವನದುರ್ಗಾ ದೇವಸ್ಥಾನ ಇದರ ವರ್ಧಂತ್ಯುತ್ಸವ ಹಾಗೂ ಶ್ರೀ ಪಂಚದುರ್ಗಾ ಮಂತ್ರ ಹೋಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಗಣಹೋಮ, ಶ್ರೀ ಪಂಚದುರ್ಗಾ ಮಂತ್ರ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೊಸ್ಮಾರು ಶ್ರೀ ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ, ಈ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ಬಾರಿ ಪ್ರಚಲಿತಕ್ಕೆ ಬರುತ್ತಿರುವ ಶೃದ್ಧಾ ಭಕ್ತಿಯ ಕೇಂದ್ರವಾಗಿದ್ದು, ಮುಂದಿನ […]

ಆಳಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ: ಮೂವರು ಸಾವು; ಆರು ಮಂದಿ ನಾಪತ್ತೆ

ಮಂಗಳೂರು: ಬೋಟ್ ದುರಂತ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದು, ಆರು ಮಂದಿ ಮೀನುಗಾರರು ಕಣ್ಮರೆಯಾಗಿರುವ ಘಟನೆ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಐವರು ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಮೀನುಗಾರಿಕಾ ಬೋಟ್ ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ ನಿಂದ ಹೊರಟಿತ್ತು. ಇದರಲ್ಲಿ ತಮಿಳುನಾಡು ಮತ್ತು ಬಂಗಾಳ ಮೂಲದ ಕಾರ್ಮಿಕರಿದ್ದರು ಎನ್ನಲಾಗಿದೆ. ಈ ಕರಾವಳಿ ಪಡೆಯ ಮೂರು ಹಡಗು ಮತ್ತು ಏರ್ ಕ್ರಾಫ್ಟ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಬ್ರಹ್ಮಾವರ: ಸಿಡಿಲು‌ ಬಡಿದು ಮನೆಗೆ ಹಾನಿ; ಮಹಿಳೆಗೆ ಗಾಯ

ಉಡುಪಿ: ಬ್ರಹ್ಮಾವರ ತಾಲೂಕಿನ ನೈಲಾಡಿ ಬೂದಾಡಿ ಮನೆಯೊಂದರ ಮೇಲೆ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಸಿಡಿಲು ಅಪ್ಪಳಿಸಿದ್ದು, ಇದರ ಪರಿಣಾಮ ಮನೆಯ ಮೇಲ್ಛಾವಣಿ, ವಿದ್ಯುತ್ ತಂತಿ ಸುಟ್ಟು, ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೂದಾಡಿ ಮನೆಯ ನಾಗರತ್ನ ಭುಜಂಗ ಶೆಟ್ಟಿ ಅವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ.‌ನಷ್ಟ ಉಂಟಾಗಿದೆ‌. ಮನೆಯಲ್ಲಿ ಎರಡು ಸಣ್ಣ ಮಕ್ಕಳು ಸಹಿತ ಆರು ಮಂದಿ ಮಲಗಿದ್ದು, ಮಹಿಳೆಯೊಬ್ಬರಿಗೆ ವಿದ್ಯುತ್ ಕಿಡಿ ಬಿದ್ದು ಸಣ್ಣ ಗಾಯವಾಗಿದೆ. ಉಳಿದಂತೆ ಯಾರಿಗೂ ಹಾನಿಯಾಗಿಲ್ಲ. ಮನೆ […]