ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯ ಅಮಾನತಿನ ಕುರಿತು ಸಮಗ್ರ ತನಿಖೆ ನಡೆಸಿ: ಕ್ಯಾಂಪಸ್ ಫ್ರಂಟ್ ಉಡುಪಿ ಆಗ್ರಹ
ಉಡುಪಿ: ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳ ಅವರ ಅಮಾನತು ಆದೇಶದ ಹಿಂದೆ ಷಡ್ಯಂತ್ರ ಅಡಗಿದ್ದು, ಈ ಬಗ್ಗೆ ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಡಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಅಕ್ರಮ್ ಒತ್ತಾಯಿಸಿದ್ದಾರೆ. ಮಂಜುಳ ಅವರನ್ನು ಏಪ್ರಿಲ್ 7 ರಂದು ಕರ್ತವ್ಯದಲ್ಲಿ ನಿರ್ಲಕ್ಷ್ಯದ ಕಾರಣದಿಂದ ಅಮಾನತು ಮಾಡಲಾಗಿದೆ. ಆದರೆ, ಅವರು ತಮ್ಮ ಅಮಾನತಿನ ಕುರಿತು ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸಿ, ಇದೊಂದು ತನ್ನ […]
ಇಂದಿನಿಂದ ಐಪಿಎಲ್ ಸಂಭ್ರಮ ಶುರು: ಮುಂಬೈ ಮತ್ತು ಆರ್ ಸಿಬಿ ಮಧ್ಯೆ ಮೊದಲ ಪಂದ್ಯ
ಬೆಂಗಳೂರು: ಇಂದಿನಿಂದ ‘ಐಪಿಎಲ್ 2021’ ಸಂಭ್ರಮ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡ ಮುಂಬಯಿ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿದೆ. ವಿರಾಟ್ ಕೊಹ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಮುಂಬೈ ತಂಡದ ನಾಯಕನಾಗಿದ್ದಾರೆ. ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಆರ್ಸಿಬಿಯಿಂದ ಕಣಕ್ಕಿಳಿಯಲಿದ್ದಾರೆ. ಜತೆಗೆ ದೇವದತ್ತ ಪಡಿಕ್ಕಲ್, ಎ ಬಿ ಡಿವಿಲಿಯರ್ಸ್, ಯಜುವೇಂದ್ರ ಚಹಲ್ ಕೂಡ ಆರ್ಸಿಬಿ ಬೆಂಬಲಕ್ಕಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ […]
ಏ.11ರಿಂದ ಲಸಿಕೆ ಉತ್ಸವ
ನವದೆಹಲಿ: ಕೋವಿಡ್–19 ಲಸಿಕೆ ಅಭಿಯಾನದ ಭಾಗವಾಗಿ ಏಪ್ರಿಲ್ 11ರಿಂದ 14ರ ವರೆಗೂ ‘ಲಸಿಕೆ ಉತ್ಸವ’ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಾವು ಲಸಿಕೆಯ ಕಡೆಗೆ ಸಾಗುತ್ತ ಕೋವಿಡ್–19 ಪರೀಕ್ಷೆಯನ್ನು ಮರೆತಿರುವುದು ಇಂದಿನ ಸಮಸ್ಯೆಗೆ ಕಾರಣ. ಲಸಿಕಾ ಅಭಿಯಾನದ ಜತೆಗೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕಿದೆ ಎಂದರು. ಜ್ಯೋತಿಬಾ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ದಿನವಾದ ಏಪ್ರಿಲ್ 11 ಮತ್ತು ಏಪ್ರಿಲ್ 14ರ […]