ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮ ದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಬಿ ಪ್ರವರ್ಗ 4 ಮತ್ತು ಸಿ ಪ್ರವರ್ಗದ 76 ಅಧಿಸೂಚಿತ ಸಂಸ್ಥೆಗಳು, ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಿ ಪ್ರವರ್ಗದ ದೇವಸ್ಥಾನಗಳು – ಉಡುಪಿ ತಾಲೂಕಿನ ಉದ್ಯಾವರದ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಪಿತ್ರೋಡಿ ಶ್ರೀ […]

ಹುತಾತ್ಮರಾದ ವೀರ ಯೋಧರ ಬಲಿದಾನ ವ್ಯರ್ಥವಾಗದು: ಕುಯಿಲಾಡಿ

ಉಡುಪಿ: ನಕ್ಸಲ್ ಪಿಡುಗನ್ನು ಬೇರು ಸಹಿತ ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗದು. ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಗೃಹ ಸಚಿವ ಅಮಿತ್ ಷಾ ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಜರಗಿಸುವ ಮೂಲಕ ಸೈನಿಕರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಂಕಲ್ಪಗೈದಿದ್ದಾರೆ. ಇಡೀ ದೇಶ ಇಂದು ಹುತಾತ್ಮ ಸೈನಿಕರ ಕುಟುಂಬದ ಜೊತೆಗಿದೆ. ಕೇಂದ್ರ ಸರ್ಕಾರದ ನಿರ್ದಿಷ್ಟ ಕಠಿಣ ಕ್ರಮಗಳಿಂದ ನಕ್ಸಲ್ ವಾದ ದೇಶದಿಂದ […]

ರಾಜಕೀಯ ಮೀಸಲಾತಿಯಲ್ಲಿ ಬಹು ವಂಚಿತರು; ಶೇೂಷಿತರು ‘ಪರಿಶಿಷ್ಟ ಪಂಗಡದ ಪುರುಷರು’!

ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಮೀಸಲಾತಿ ಬೇಕೆಂಬ ಕೂಗು ಒಂದೆಡೆಯಾದರೆ, ಈ ಮೀಸಲಾತಿಯೇ ನಮ್ಮನ್ನು ಶೇೂಷಿಸುತ್ತಿದೆ ಎಂಬ ಕೂಗು ಇನ್ನೊಂದೆಡೆ. ಇದು ಆಶ್ಚರ್ಯವಾದರೂ ಸತ್ಯ. ಇದರ ಸಂಪೂರ್ಣ ಚಿತ್ರಣ ತಮ್ಮ ಮುಂದಿಡುವ ಪ್ರಯತ್ನ ಇಲ್ಲಿದೆ ಓದಿದ ಅನಂತರ ತಮಗೆ ಮೀಸಲಾತಿ ಬೇಕಾ? ಬೇಡವಾ? ಅನ್ನುವುದನ್ನು ಮತ್ತೆ ಆಲೇೂಚನೆ ಮಾಡಿ ತಿಳಿಸಿ. ಮೀಸಲಾತಿಯ ಮುಖ್ಯ ಉದ್ದೇಶವೇ ಸಾಮಾಜಿಕ ನ್ಯಾಯ; ಲಿಂಗ ನ್ಯಾಯ; ಆರ್ಥಿಕ ನ್ಯಾಯ; ರಾಜಕೀಯ ನ್ಯಾಯ ಒದಗಿಸುವುದೇ ಆಗಿರುತ್ತದೆ. ಕರಾವಳಿಯ ಪ್ರಮುಖ ಜಿಲ್ಲೆಗಳಾದ ಉಡುಪಿ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ […]

ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಪತ್ತೆ: ಚುನಾವಣಾ ಅಧಿಕಾರಿ ಅಮಾನತು

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ 3ನೇ ಹಂತದ ಮತದಾನ ನಡೆಯುತ್ತಿದ್ದು, ಈ ಮಧ್ಯೆ ತೃಣಮೂಲ ಕಾಂಗ್ರೆಸ್ ನಾಯಕನ ಮನೆಯಲ್ಲಿ ಇವಿಎಂ ಪತ್ತೆಯಾಗಿರುವುದು ಬಹಳಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೌರಾ ಜಿಲ್ಲೆಯ ಉತ್ತರ ಉಲುಬೇರಿಯಾದಲ್ಲಿ ಗೌತಮ್ ಘೋಷ್ ಎಂಬ ಟಿಎಂಸಿ ನಾಯಕನ ಮನೆಯಲ್ಲಿ ನಾಲ್ಕು ಇವಿಎಂ, ವಿವಿಪಿಎಟಿ ಗಳು ಪತ್ತೆಯಾಗಿದೆ. ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ಆಯೋಗದ ಅಧಿಕಾರಿ ತಪನ್ ಸರ್ಕಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಅಧಿಕಾರಿ ತಪನ್ ಸರ್ಕಾರ್ ಟಿಎಂಸಿ ನಾಯಕ ಗೌತಮ್ ಘೋಷ್ ಮನೆಯಲ್ಲಿ ಮಲಗಿದ್ದನು. […]

ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಗ್ರಾಮಸ್ಥರಿಂದ ಮನವಿ

ಕಾರ್ಕಳ: ಇಲ್ಲಿನ ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ ಹಾಗೂ ಜಾತ್ರೆ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುನಿಲ್ ಕೆ.ಆರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರುಷೋತ್ತಮ ರಾವ್, ಅಶೋಕ್ ಕುಮಾರ್ ಜೈನ್, ಶ್ರೀಧರ ಗೌಡ, ಚೇತನ್ ಪೇರಲ್ಕೆ, ಪ್ರಶಾಂತ್ ಚಿತ್ತಾರ, ಗಂಗಾಧರ ಗೌಡ ಹಾಗೂ ಗ್ರಾಮದ ಪ್ರಮುಖರು ಇದ್ದರು.