ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಜಿಲ್ಲಾ ಕಚೇರಿ ಉದ್ಘಾಟನೆ
ಉಡುಪಿ: ಉಪಕಾರ ಮಾಡಿದರಿಗೆ ಪ್ರತ್ಯುಪಕಾರ ಮಾಡದಿದ್ದರೆ ನಾವು ಅಪರಾಧಿಗಳಾಗುತ್ತೇವೆ. ಇದು ಜನ್ಮಾಂತರದಲ್ಲೂ ಕಷ್ಟಕ್ಕೆ ನಾಂದಿಯಾಗುತ್ತದೆ. ಸಂಗೊಳ್ಳಿ ರಾಯಣ್ಣನಂತಹ ತ್ಯಾಗಜೀವಿಗಳ ಸ್ಮರಣೆಯಿಂದ ಯುವಜನರಲ್ಲಿ ದೇಶಪ್ರೇಮ ಜಾಗೃತವಾಗಲು ಸಾಧ್ಯ ಎಂದು ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಆದಿಉಡುಪಿ ರೀಗಲ್ ನೆಕ್ಸ್ಟ್ ಕಟ್ಟಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಜಿಲ್ಲಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, […]
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ರಾಜೀನಾಮೆ
ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ರಾಜೀನಾಮೆ ನೀಡಿದ್ದಾರೆ. ತನ್ನ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಮಾಡಿರುವ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಬಾಂಬೆ ಹೈಕೋರ್ಟ್ ಇಂದು ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ನಿರ್ದೇಶನ ನೀಡಿದ ಬೆನ್ನಲ್ಲೇ ಸಚಿವ ದೇಶ್‌ಮುಖ್ ರಾಜೀನಾಮೆ ನೀಡಿದ್ದಾರೆ. ಸಚಿವ ದೇಶಮುಖ್ ಅವರು ಮುಂಬೈನಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು ₹ 100 ಕೋಟಿ ಸಂಗ್ರಹಿಸುವಂತೆ […]
ಕಾರ್ಕಳ: ಬ್ಯಾಗ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; ₹80 ಲಕ್ಷ ಮೌಲ್ಯದ ನಷ್ಟ
ಕಾರ್ಕಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬ್ಯಾಗ್ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ಸುಮಾರು ₹80 ಲಕ್ಷ ಮೌಲ್ಯದ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ. ನಿಟ್ಟೆ ಗ್ರಾಮದ ಗುಂಡ್ಯಡ್ಕ ಬಳಿಯ ರಶ್ಮಿ ಭಟ್ ಕುಕ್ಕುಂದೂರು ಒಡೆತನದ ಪ್ರತೀಕ್ಷಾ ಪ್ಯಾಕೇಜಿಂಗ್ ಇಂಡಸ್ಟ್ರಿ ನಲ್ಲಿ ಇಂದು ಮುಂಜಾನೆ 4 ಗಂಟೆಗೆ ಈ ಬೆಂಕಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಯಾಕ್ಟರಿ ಸಂಪೂರ್ಣ ಸುಟ್ಟುಹೋಗಿದೆ. 3 ಪ್ರಿಂಟಿಂಗ್ ಮೆಷಿನ್, 13 ಹೊಲಿಗೆ ಯಂತ್ರ ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ […]
ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ಆಡಳಿತವನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸಿ: ಗ್ರಾಮಸ್ಥರ ಆಗ್ರಹ
ಕಾರ್ಕಳ: ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ಆಡಳಿತವನ್ನು ಆಡಳಿತ ಅಧಿಕಾರಿಗೆ ಹಸ್ತಾಂತರಿಸಲು ಹಾಗೂ ಕಾಲಾವಧಿ ಜಾತ್ರೋತ್ಸವವನ್ನು ನೆರವೇರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಂದು ದೈವಸ್ಥಾನದ ವಠಾರದಲ್ಲಿ ಧರಣಿ ನಡೆಸಿದರು. ದೈವಸ್ಥಾನದ ವಠಾರದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಶೀಘ್ರವೇ ಕಾಲಾವಧಿ ಜಾತ್ರೋತ್ಸವವನ್ನು ನೆರವೇರಿಸಬೇಕು ಎಂದು ಆಗ್ರಹಿಸಿದರು.
ಅಸಹಾಯಕರಿಗೆ, ಅಲೆಮಾರಿಗಳಿಗೂ ಕೋವಿಡ್ ಲಸಿಕೆ ಸಿಗುವಂತಾಗಲಿ: ನಾಗರಿಕ ಸಮಿತಿ ಆಗ್ರಹ
ಉಡುಪಿ: ಕೊರೊನಾ ವ್ಯಾಧಿ ದೇಶದಿಂದ ಮುಕ್ತಗೊಳಿಸಲು ಕೋವಿಡ್ ಲಸಿಕೆ ಅಭಿಯಾನವು ಸರಕಾರದಿಂದ ಆರಂಭಗೊಂಡಿದೆ. ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು, ಲಸಿಕೆ ಪಡೆಯಬೇಕಾದ ವ್ಯಕ್ತಿ ಆಧಾರ್ ಚೀಟಿಯನ್ನು ತೊರ್ಪಡಿಸುವ ನಿಯಮ ಇದೆ. ನಿಯಮದಂತೆ ಲಸಿಕೆ ಪಡೆಯಲು ಅರ್ಹರಿರುವರು ಆಧಾರ್ ಚೀಟಿಯನ್ನು ಲಸಿಕಾ ಕೇಂದ್ರಗಳಲ್ಲಿ ತೋರ್ಪಡಿಸಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ವಲಸೆ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು, ಚಿಂದಿ ಆರಿಸುವವರು, ಭಿಕ್ಷುಕರು, ಬಸ್ಸು ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ಅಸಹಾಯಕರು, ಹಾಗೂ ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿರುವರು, ಇವರಲ್ಲಿ […]