ಚಿತ್ರರಂಗದ ಮನವಿಗೆ ಸ್ಪಂದಿಸಿದ ಸರ್ಕಾರ: ಥಿಯೇಟರ್ ಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಏಪ್ರಿಲ್ 7ರ ವರೆಗೆ ಥಿಯೇಟರ್ ಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಸರ್ಕಾರವು ಏ. 2ರಂದು ಜಾರಿಗೊಳಿಸಿದ ಹೊಸ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ಇದಕ್ಕೆ ಫಿಲ್ಮ್ ಚೇಂಬರ್ ಹಾಗೂ ಸ್ಯಾಂಡಲ್ ವುಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಏ. 1ರಂದು ಬಿಡುಗಡೆಯಾದ ನಟ ಪುನೀತ್ […]

ಮುದರಂಗಡಿ: ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ದಾರುಣ ಮೃತ್ಯು

ಶಿರ್ವ: ಆಟವಾಡುತ್ತಿದ್ದ ಮಗುವೊಂದು ಬಾವಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮುದರಂಗಡಿಯ ಪೇಟೆಯಲ್ಲಿ ಇಂದು ಸಂಜೆ ನಡೆದಿದೆ. ಮೃತ ಮಗುವನ್ನು ಅದಮಾರು ವಾಜಪೇಯಿ ನಗರದ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿಗಳ ಎರಡೂವರೆ ವರ್ಷದ ಪ್ರಿಯಾಂಕ ಎಂದು ಗುರುತಿಸಲಾಗಿದೆ. ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿ ಮಗುವಿನೊಂದಿಗೆ ಬಟ್ಟೆ ಖರೀದಿಗಾಗಿ ಮುದರಂಗಡಿ ಪೇಟೆಗೆ ಬಂದಿದ್ದರು. ಮಗು ಅಂಗಡಿಯಿಂದ ಹೊರಗೆ ಬಂದು ಆಟವಾಡುತ್ತಿದ್ದು, ಹಾಗೆ ಆಟವಾಡುತ್ತಾ ಅಲ್ಲೇ ರಸ್ತೆ ಬದಿಯಲ್ಲಿದ್ದ ಅಪೂರ್ಣ ಆವರಣ ಗೋಡೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದಿದೆ. ಮಗು ಕಾಣದಿದ್ದಾಗ […]

ಇಂದ್ರಾಣಿ ನದಿಗೆ ಕಲುಷಿತ ನೀರು: ಸಾಂಕ್ರಮಿಕ ರೋಗದ ಭೀತಿ

ಉಡುಪಿ: ನಗರದ ಕಲ್ಸಂಕ ಬಳಿ ಹಾದು ಹೋಗುವ ಇಂದ್ರಾಣಿ ನದಿಯಲ್ಲಿ ತ್ಯಾಜ್ಯ ತುಂಬಿದ ಕಲುಷಿತ ನೀರು ಬಿಡುತ್ತಿದ್ದು, ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದೆ. ಇದರಿಂದ ಸಾಂಕ್ರಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಪವಿತ್ರ ಇಂದ್ರಾಣಿ ನದಿಯ ಉಳುವಿಗಾಗಿ ಪರಿಸರವಾದಿಗಳು, ಸಂಘ ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಆದರೂ ಆಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಂಡಿಲ್ಲ. ಜಲ ಮೂಲವನ್ನು ರಕ್ಷಿಸಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿವೆ ಎಂದು ಅವರು ದೂರಿದ್ದಾರೆ. ತಕ್ಷಣ ನಗರಾಡಳಿತವು ಈ ವಿಷಕಾರಿ ತ್ಯಾಜ್ಯ ನೀರು […]

ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಪರಿಷ್ಕೃತ ನಿಯಮಗಳ ಜಾರಿ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್.!

ಉಡುಪಿ: ಕೋವಿಡ್ -19 ಸೋಂಕಿನ ತೀವ್ರತೆಯು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ನಿಟ್ಟಿನಲ್ಲಿ, ವಿವಿಧ ಸಾಮಾಜಿಕ/ ಧಾರ್ಮಿಕ ಸಮಾರಂಭ ಹಾಗೂ ರಾಜಕೀಯ ಸಭೆ/ ರ‍್ಯಾಲಿಗಳ ಸಂದರ್ಭದಲ್ಲಿ ಸೇರಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಿತಿಗೊಳಿಸಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸಲಾಗಿರುವ ಆಚರಣೆ/ ಸಮಾರಂಭ ಇತ್ಯಾದಿಗಳ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ನಿಯಮಗಳನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ವಿದ್ಯಾಗಮ ಸೇರಿದಂತೆ 1 ರಿಂದ 9 ನೇ ತರಗತಿ ವರೆಗೆಯಾವುದೇತರಗತಿ ನಡೆಸದಂತೆ ಸರ್ಕಾರ ಸೂಚಿಸಿದ್ದು, […]

ಭೀಕರ ಅಪಘಾತ: ನವವಿವಾಹಿತೆ ಮೃತ್ಯು

ಪುತ್ತೂರು: ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ಇಂದು ಕೋಳಿ ಸಾಗಾಟದ ಲಾರಿ ಹಾಗೂ ವ್ಯಾಗನರ್‌‌ ಕಾರು ನಡುವೆ ಭೀಕರ ಅಪಘಾತ ನಡೆದಿದ್ದು, ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನವವಿವಾಹಿತೆ ದಾರುಣವಾಗಿ ಮೃತಪಟ್ಟಿದ್ದಾರೆ. ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ನಿವಾಸಿ ಗೋಪಿಕ್‌‌ ಎಂಬವರ ಪತ್ನಿ ಧನುಷಾ (23) ಎಂದು ಮೃತ ದುರ್ದೈವಿ. ಇವರು ಫೆ.21ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ವಿವಾಹವಾಗಿದ್ದರು. ಇಂದು ನವದಂಪತಿ ತನ್ನ ದೊಡ್ಡಮ್ಮ ಹಾಗೂ ರೂಪಾ ವೇಣುಗೋಪಾಲ್‌‌ ಅವರೊಂದಿಗೆ ಎ.3ರಂದು ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮುಂಜಾನೆ […]