ಉಡುಪಿ: ಮಾಸ್ಕ್ ಧರಿಸದವರಿಂದ ಒಂದೇ ದಿನ ₹ 41 ಸಾವಿರ ದಂಡ ವಸೂಲು

ಉಡುಪಿ: ಕೋವಿಡ್ ಎರಡನೆ ಅಲೆ ನಿಯಂತ್ರಿಸಲು ಕಠಿಣ ಕ್ರಮಕ್ಕೆ ಉಡುಪಿ ಜಿಲ್ಲಾಡಳಿತ ಮುಂದಾಗಿದ್ದು, ಮಾ. 23ರಂದು ಒಂದೇ ದಿನ ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಂದ ಒಟ್ಟು ₹ 41 ಸಾವಿರ ದಂಡ ವಸೂಲಿ ಮಾಡಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ₹ 4 ಸಾವಿರ, ಪಂಚಾಯತ್ ವ್ಯಾಪ್ತಿಯಲ್ಲಿ ₹ 5,300, ಅಬಕಾರಿ ಇಲಾಖೆಯಿಂದ ₹ 2,400, ಕಂದಾಯ ಇಲಾಖೆಯಿಂದ ₹ 9,900 ಹಾಗೂ ಪೊಲೀಸ್ ಇಲಾಖೆಯಿಂದ ₹19,400 ದಂಡ ವಸೂಲಿ ಮಾಡಲಾಗಿದೆ. […]

ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ: ಸುಧಾಕರ್ ಗೆ ಟಾಂಗ್ ನೀಡಿದ ಡಿಕೆಶಿ

ಬೆಂಗಳೂರು: ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಲ್ಲಾ 224 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆ ನಡೆಸಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದ ಅವರು, ಸುಧಾಕರ್ ರಾಜ್ಯದ ಜನರಿಗೆ ನುಡಿಮುತ್ತಗಳನ್ನು ಉದುರಿಸಿದ್ದಾರೆ. ತನಿಖೆ ನಡೆಯಲಿ ಬಿಡಿ, ಬಹಳ ಸಂತೋಷ ಎಂದರು. ಇನ್ನೂ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ನೂರಕ್ಕೆ ನೂರರಷ್ಚು ನಾನು ಏಕ ಪತ್ನಿ ವ್ರತಸ್ಥ ಎಂದು […]

ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ: ಕುಮಾರಸ್ವಾಮಿ

ಬೆಂಗಳೂರು: ಭೂಮಿ ಮೇಲೆ ಜನಿಸಿರುವ ಪ್ರತಿಯೊಂದು ಜೀವಿಗೂ ಸಹಜ ಪ್ರಕ್ರಿಯೆ ಇದೆ. ನಾನು ಈ ಹಿಂದೆ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಅಧಿವೇಶನದಲ್ಲಿ ಕೂಡ ಹೇಳಿಕೊಂಡಿದ್ದೇನೆ. ಎಲ್ಲರ ಮನೆ ದೋಸೆನೂ ತೂತೇ, ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಚಿವ ಸುಧಾಕರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದೇನೆ. ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಾ. ಇಲ್ಲಿ ಯಾರು ಹರಿಶ್ಚಂದ್ರರಲ್ಲ. ನೀವು ಸತ್ಯವಂತರಾದರೇ ನೀವು […]

ವರ್ಷದಲ್ಲಿ ಮೊದಲ ಬಾರಿಗೆ ತೈಲ ದರದಲ್ಲಿ ಇಳಿಕೆ

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಮೊದಲ ಬಾರಿಗೆ ತೈಲ ಬೆಲೆಯಲ್ಲಿ ಇಳಿಕೆಯಾಗಿದ್ದು, ಪೆಟ್ರೋಲ್‌ ದರ ಲೀಟರ್‌ಗೆ 18 ಪೈಸೆ ಮತ್ತು ಡೀಸೆಲ್‌ ದರ ಲೀಟರ್‌ಗೆ 17 ಪೈಸೆ ಕಡಿಮೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಬುಧವಾರ ಕಡಿಮೆಯಾಗಿದೆ. ದೆಹಲಿಯಲ್ಲಿ ಈ ಮುಂಚೆ ಪೆಟ್ರೋಲ್‌ ದರ ಲೀಟರ್‌ಗೆ ₹91.17 ಇತ್ತು. ಆದರೆ, ಬುಧವಾರ ₹90.99ಕ್ಕೆ ಇಳಿದಿದೆ. ಡೀಸೆಲ್‌ ದರ ಈ ಹಿಂದೆ ಲೀಟರ್‌ಗೆ ₹81.47 ಇತ್ತು. ಈಗ ಲೀಟರ್‌ಗೆ ₹ 81.30 […]

ಈ ಸಿಂಪಲ್ ಜ್ಯೂಸ್ ಕುಡಿದ್ರೆ ಆರೋಗ್ಯವಾಗಿರ್ತೀರಿ: “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”ಇದು ಹೊಸ ಅಂಕಣ

ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ  ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣದ ಮೊದಲ ಕಂತು ಹೂವಿನ ಎಲೆಗಳಿಂದಲೂ ಆರೋಗ್ಯಯುತ ತಿಂಡಿ ತಿನಿಸುಗಳನ್ನು ಮಾಡಬಹುದು. ನಿಮ್ಮ ಮನೆಯಲ್ಲಿಯೇ ನೀವು ದಾಸವಾಳ ಹೂವನ್ನು ನೋಡಿರುತ್ತೀರಿ. ಅದರ ಅಂದ ಚೆಂದ ನೋಡಿ ಖುಷಿಪಟ್ಟಿರುತ್ತೀರಿ. ಅದರ ಎಲೆಯಿಂದ ಒಂದೊಳ್ಳೆ ಆರೋಗ್ಯಯುತ ಜ್ಯೂಸ್ […]