ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆ: ಅಶಕ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ
ಕಾರ್ಕಳ: ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಬಡವು ಯೋಜನೆಯ 11ನೇ ಮತ್ತು 12ನೇ ಸೇವಾ ಕಾರ್ಯವು ನಡೆಯಿತು. ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮಠದಕರೆ ನಿವಾಸಿ ಮಗಳಿನೊಂದಿಗೆ ವಾಸಿಸುತ್ತಿರುವ ಅಶಕ್ತ ವೃದ್ಧೆ ಕಮಲರವರ ಕುಟುಂಬಕ್ಕೆ ಮತ್ತು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದ ದುಡಿಯಲು ಸಾಧ್ಯವಾಗದ ಅಶಕ್ತ ವೃದ್ಧ ದಂಪತಿಗಳಾದ ಬಾಬು ಮೂಲ್ಯ ಮತ್ತು ಠಾಕಮ್ಮ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮ ಉದಯ ಶೆಟ್ಟಿ, ಇನ್ನಾ ಗ್ರಾಮ ಪಂಚಾಯತ್ […]
ಮಾಸ್ಕ್ ಧರಿಸದವರ ವಿರುದ್ಧ ಪ್ರಕರಣ ದಾಖಲು: ಡಿಸಿ ಎಚ್ಚರಿಕೆ
ಉಡುಪಿ: ಕೋವಿಡ್ ಎರಡನೇ ಅಲೆಯು ಆರಂಭವಾಗಿದ್ದು, ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಜೊತೆಗೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಅವರು ಎರಡನೇ ಹಂತದ ಕೋವಿಡ್ ಲಸಿಕೆ ಪಡೆದು ಮಾತನಾಡಿದರು. ಸಾರ್ವಜನಿಕರು ಜಾಗೃತರಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಪಿಂಗ್ ಮಾಲ್‌ಗಳಲ್ಲಿ, ಅಂಗಡಿಗಳಿಗೆ ತೆರಳುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ […]