ಹೆಬ್ರಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾದ ಕಾರು
ಉಡುಪಿ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರೊಂದು ಸಂಪೂರ್ಣ ಸುಟ್ಟು ಹೋದ ಘಟನೆ ಹೆಬ್ರಿ ತಾಲ್ಲೂಕಿನ ಮುದ್ರಾಡಿಯ ಸೋಮೇಶ್ವರ ರಸ್ತೆ ಬಳಿ ಇಂದು ನಸುಕಿನಲ್ಲಿ ನಡೆದಿದೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಕಾರು ಹಾವೇರಿ ಜಿಲ್ಲೆಯ ನೋಂದಣಿ ಸಂಖ್ಯೆ ಹೊಂದಿದ್ದು, ರಮೇಶ್ ಎಂಬವರಿಗೆ ಸೇರಿದ ಕಾರು ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ, ದಪೆದಾರ್ ರೂಪೇಶ್, ಸಿಬ್ಬಂದಿಗಳಾದ ಜಯ ಮೂಲ್ಯ , ಮನೋಹರ್ […]
ಉದ್ಯಾವರ: ಕಪ್ಪೆಚಿಪ್ಪು ಹೆಕ್ಕಲು ಹೋಗಿದ್ದ ಯುವಕ ಶವವಾಗಿ ಪತ್ತೆ
ಉಡುಪಿ: ಉದ್ಯಾವರ ಪಿತ್ರೋಡಿ ಪಾಪನಾಶಿನಿ ನದಿಯಲ್ಲಿ ಕಪ್ಪೆಚಿಪ್ಪು (ಮರುವಾಯಿ) ಹೆಕ್ಕಲು ಹೋಗಿ ಕಣ್ಮರೆಯಾಗಿದ್ದ ಯುವಕ, ಮಂಗಳವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಬಂಟಕಲ್ಲಿನ ಸುಮಂತ್ (22) ಎಂದು ಗುರುತಿಸಲಾಗಿದೆ. ಈತ ಸಂಬಂಧಿ ಸಂತೋಷ್ ಕುಮಾರ್ ಜತೆ ನಿನ್ನೆ ಸಂಜೆ ಕಪ್ಪೆಚಿಪ್ಪು ಹೆಕ್ಕಲು ನದಿಗೆ ಹೋಗಿದ್ದನು. ಪಿತ್ರೋಡಿ ಸಮೀಪ ಪಾಪನಾಶಿನಿ ಹೊಳೆಗೆ ಇಬ್ಬರು ಇಳಿದಿದ್ದು, ಸಂತೋಷ್ ಕುಮಾರ್ ನೀರಿನ ಸೆಳೆತದಿಂದ ಬಚಾವಾಗಿದ್ದರು. ಆದರೆ ಸುಮಂತ್ ಕಣ್ಮರೆಯಾಗಿದ್ದರು. ಇಂದು ಬೆಳಿಗ್ಗೆ ಸುಮಂತ್ ಶವ ಪತ್ತೆಯಾಗಿದ್ದು, ಸ್ಥಳೀಯ ಈಜು ತಜ್ಞರು ಶವವನ್ನು […]
ಶ್ರೀಕ್ಷೇತ್ರ ಪೆರ್ಡೂರು: ಇಂದು ವೈಭವದ ಜಾತ್ರಾ ಮಹೋತ್ಸವ
ಪೆರ್ಡೂರು: ಶ್ರೀಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾ ಮಹೋತ್ಸವವು ದೇವರ ಸನ್ನಿಧಿಯಲ್ಲಿ ಇಂದು ವೈಭವದಿಂದ ನಡೆಯಲಿದೆ. ಇಂದು ಬೆಳಿಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ರಥಹೋಮ, ರಥಸಂಪ್ರೋಕ್ಷಣೆ, ಕೊಡಿಪೂಜೆ, ಮಹಾಪೂಜೆ, ಬೆಳಿಗ್ಗೆ 11.30ಕ್ಕೆ ರಥಾರೋಹಣ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ 6ಗಂಟೆಗೆ ವೈಭವದ ಶ್ರೀಮನ್ಮಹಾರಥೋತ್ಸವ ಜರಗಲಿದೆ. ರಾತ್ರಿ ದೀವಟಿಗೆ ಸೇವೆ, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾರೋಹಣ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ಶ್ರೀಭೂತಬಲಿ, ಕವಾಟಬಂಧನ, ಶಯನೋಲಗ […]