ಮಲ್ಪೆ: ಗಮನ ಸೆಳೆದ ತ್ರಿವರ್ಣ ಆರ್ಟ್ ಸೆಂಟರ್ ವಿದ್ಯಾರ್ಥಿಗಳ ಮರಳು ಶಿಲ್ಪ
ಉಡುಪಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಣಿಪಾಲ ತ್ರಿವರ್ಣ ಆರ್ಟ್ ಸೆಂಟರ್ ಸಂಸ್ಥೆಯ ಹಿರಿಯ ಮಹಿಳಾ ವಿದ್ಯಾರ್ಥಿಗಳ ಬ್ಯಾಚ್ ನ ಆಯ್ದ 10 ಕಲಾವಿದರು ವಿ ಆರ್ ದ ಪವರ್ ಸಂದೇಶದಡಿ ಇಂದು ಮಲ್ಪೆ ಕಡಲ ಕಿನಾರೆಯಲ್ಲಿ ಮಹಿಳೆಯರ ಪಾತ್ರ ಹಾಗೂ ವಿವಿಧ ವೃತ್ತಿಯಲ್ಲಿ ಸಮನ್ವಯತೆ ಶಕ್ತಿ ತೋರುವ ಮರಳು ಶಿಲ್ಪ ರಚಿಸಿ ಗಮನ ಸೆಳೆದರು.
ಅಲೆವೂರು: ವಿಜೇತ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಅಭಿನಂದನೆ
ಉಡುಪಿ: ಅಲೆವೂರು ಗ್ರಾಮ ಪಂಚಾಯಿತಿಯ ವಿಜೇತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭ ಭಾನುವಾರ ಅಲೆವೂರಿನ ವಿಠಲ ಸಭಾಭವನದಲ್ಲಿ ನಡೆಯಿತು. ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ನಮ್ಮ ತಂಡ ಉತ್ತಮವಾಗಿದ್ದಾಗ ಜನರಿಗೆ ನಮ್ಮ ಮೇಲೆ ವಿಶ್ವಾಸ ಹುಟ್ಟುತ್ತದೆ. ಈ ನಾಯಕ ಅಥವಾ ಈ ವ್ಯಕ್ತಿ ಮತ ಹಾಕಲು ಸಮರ್ಥರು ಎಂಬ ನಂಬಿಕೆ ಮತದಾರರಲ್ಲಿ ಮೂಡುತ್ತದೆ ಎಂದರು. ಕೆಲವು ಗ್ರಾಪಂಗಳಲ್ಲಿ ಬಹುಮತ ಇದ್ದರೂ ಕೂಡ ಹಣದ ಆಮಿಷ ಹಾಗೂ ಅಧಿಕಾರದ ದುರುಪಯೋಗದಿಂದ ಅಧಿಕಾರ […]
ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿ ಚಂದ್ರ ಕೆ. ಹೆಮ್ಮಾಡಿಗೆ 10 ವರ್ಷ ಜೈಲು ಶಿಕ್ಷೆ
ಉಡುಪಿ: ಕಳೆದ ಮೂರು ವರ್ಷಗಳ ಹಿಂದೆ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲಕರ ಮೇಲಿನ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದಡಿಯಲ್ಲಿ ಬಂಧಿತನಾಗಿದ್ದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಮೇಲೆ ದಾಖಲಾದ ಪ್ರತ್ಯೇಕ 21 ಪೋಕ್ಸೋ ಪ್ರಕರಣದ ಪೈಕಿ ಮೊದಲ ಒಂದು ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆರೋಪಿಯು ದೋಷಿ ತೀರ್ಪು ನೀಡಿದ್ದು, ಆತನಿಗೆ 10 ವರ್ಷ ಕಠಿಣ […]
ಪೆರ್ಣಂಕಿಲ: ಸತ್ಯಸಾರಮನಿ ದೈವಗಳ ಪಾತ್ರಿ ದರ್ಶನ, ಅಲೇರ ಪಂಜುರ್ಲಿ ಚಾಮುಂಡಿ- ಗುಳಿಗ ದೈವಗಳ ನೇಮೋತ್ಸವ
ಪೆರ್ಣಂಕಿಲ: ಇಲ್ಲಿನ ವರ್ವಾಡಿ ಬ್ರಹ್ಮಶ್ರೀ ಸತ್ಯಸಾರಮಾನಿ ದೈವಸ್ಥಾನ ಸಮುದಾಯ ಸೇವಾ ಸಂಘದ ಶ್ರೀ ಸತ್ಯಸಾರಮನಿ ದೈವಗಳ ಪಾತ್ರಿ ದರ್ಶನ ಹಾಗೂ ಅಲೇರ ಪಂಜುರ್ಲಿ ಚಾಮುಂಡಿ-ಗುಳಿಗ ದೈವಗಳ 19ನೇ ವರ್ಷದ ನೇಮೋತ್ಸವವು ವಿಜೃಂಭಣೆಯಿಂದ ನೆರವೇರಿತು. ನೇಮೋತ್ಸವದಲ್ಲಿ ಊರಿನ ಮುಖ್ಯಸ್ಥ ಸುಹಾಸ್ ಹೆಗ್ಡೆ ಹಾಗೂ ಊರ ಪರವೂರಿನ ಗಣ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಚಿತ್ರ: ಸುಹಾಸ್ ಹೆಗ್ಡೆ ಪೆರ್ಣಂಕಿಲ
ಸೂಡ: ಶೆಟ್ಟಿ ಕ್ರಿಕೆಟರ್ಸ್ ಸೂಡ ತಂಡದ ಮಡಿಲಿಗೆ ‘ಆದರ್ಶ ಟ್ರೋಫಿ-2021’
ಸೂಡ: ಆದರ್ಶ ಫ್ರೆಂಡ್ಸ್ ಮಕ್ಕೇರಿಬೈಲು ಸೂಡ ಸಂಘದ ನೇತೃತ್ವದಲ್ಲಿ ನಡೆದ 8ನೇ ವರ್ಷದ 40 ಗಜಗಳ ಕ್ರಿಕೆಟ್ ಟೂರ್ನ್ ಮೆಂಟ್ ನಲ್ಲಿ ಶರದ್ ಶೆಟ್ಟಿ ದುಬೈ ಮಾಲೀಕತ್ವದ ಶೆಟ್ಟಿ ಕ್ರಿಕೆಟರ್ಸ್ ಸೂಡ ತಂಡವು ಪ್ರಥಮ ಬಹುಮಾನವನ್ನು ಗೆದ್ದುಕೊಂಡಿತು. ಇರಂದಾಡಿ ಫ್ರೆಂಡ್ಸ್ ತಂಡವು ರನ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷೆಯನ್ನು ಕಾರ್ಕಳ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೇಮನಾಥ ಆಚಾರ್ಯ ಸಿದ್ದಿಗುರಿ, ಅನಿತಾ ಕಸ್ತಲೀನೋ ಕೊರಜೆ, ಸೂರಜ್ […]