ಉಡುಪಿ: ಇಂದಿನಿಂದ ಎಂಜಿಎಂ ಕಾಲೇಜಿನಲ್ಲಿ ‘ಎಂಜಿಎಂ ಪುಸ್ತಕೋತ್ಸವ’

ಉಡುಪಿ: ಓದುವವರ ಸಂಖ್ಯೆ ಕಮ್ಮಿಯಾಗಿದೆ. ಅದ್ರಲ್ಲೂ ಪುಸ್ತಕ ಕೊಂಡು ಓದುವವರಿಲ್ಲ ಅನ್ನೊ ಅಪವಾದ ಇದೆ. ವಿದ್ಯಾರ್ಥಿಗಳಲ್ಲಿ ಆ ಹವ್ಯಾಸವೇ ಇಲ್ಲ ಎಂಬ ದೂರು ಎಲ್ಲೆಡೆ ಕೇಳಿ ಬರುತ್ತದೆ. ಅದನ್ನು ಸುಳ್ಳಾಗಿಸುವ ಮತ್ತು ಪುಸ್ತಕ ಸಂಸ್ಕೃತಿಯನ್ನು ಸೃಷ್ಟಿಸುವ ಸಲುವಾಗಿ ಉಡುಪಿಯ ಎಂ.ಜಿ.ಎಂ ಕಾಲೇಜು ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಮಾರ್ಚ್ 5 ಮತ್ತು 6ರಂದು ಬೆಳಿಗ್ಗೆ 9 ರಿಂದ ರಾತ್ರಿ 8ರ ವರೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ‘ಎಂ.ಜಿ.ಎಂ ಪುಸ್ತಕೋತ್ಸವ’ವನ್ನು ಆಯೋಜಿಸಿದೆ. […]

ಉಡುಪಿ: ಬನ್ನಂಜೆ ನಿವಾಸಿ ನೇಣಿಗೆ ಶರಣು

ಉಡುಪಿ: ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ  ಅಂಬಲಪಾಡಿ ಗ್ರಾಮದ ಬನ್ನಂಜೆ ಎಂಬಲ್ಲಿ ನಡೆದಿದೆ. ಅಂಬಲಪಾಡಿ ಗ್ರಾಮದ ಬನ್ನಂಜೆ ನಿವಾಸಿ ಗುಲಾಬಿ ಶೆಡ್ತಿ ಅವರ ಹರೀಶ್ ಶೆಟ್ಟಿ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮಂಡ್ಯದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಒಂದುವರೆ ತಿಂಗಳ ಹಿಂದೆ ಮಂಡ್ಯದಿಂದ ಉಡುಪಿ ಮನೆಗೆ ಬಂದಿದ್ದರು. ಮಾ. 3ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಮರುದಿನ ಮಾ. 4ರಂದು ಬೆಳಿಗ್ಗೆ 4ಗಂಟೆಗೆ ತಾಯಿ ಗುಲಾಬಿ ಶೆಡ್ತಿ ಎದ್ದು […]