ಉಡುಪಿ: ಜೋತಿಷ್ಯ ಹೇಳುವ ನೆಪದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಮಹಿಳೆ
ಉಡುಪಿ: ಜೋತಿಷ್ಯ ಹೇಳುವ ನೆಪದಲ್ಲಿ ಮನೆಗೆ ಬಂದ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿರುವ ಘಟನೆ ಇಂದು ಬೆಳಿಗ್ಗೆ ನಿಟ್ಟೂರು ರಾಜೀವನಗರ ಎಂಬಲ್ಲಿ ನಡೆದಿದೆ. ರಾಜೀವನಗರದ ನಿವಾಸಿ ಲಕ್ಷ್ಮಿ(55) ಎಂಬವರು ಚಿನ್ನಾಭರಣ ಹಾಗೂ ನಗದು ಕಳೆದುಕೊಂಡವರು. ಇವರ ಮನೆಗೆ ಸುಮಾರು 30 ವರ್ಷದ ಪ್ರಾಯದ ಅಪರಿಚಿತ ಮಹಿಳೆ ಬಂದು ಜೋತಿಷ್ಯ ಹೇಳುವುದಾಗಿ ನಂಬಿಸಿದಳು. ಅಲ್ಲದೆ, ನಿಮ್ಮ ಮನೆಗೆ ಮಾಟ ಮಾಡಿದ್ದಾರೆ. ಅದರ ಪರಿಹಾರಕ್ಕೆ ಲಕ್ಷ್ಮಿ ಪೂಜೆ ಮಾಡಿಸುತ್ತೇನೆ ಎಂದು ಹೇಳಿದ ಆಕೆ, […]
ಜಾರಕಿಹೊಳಿ ಸಿಡಿ ಬಹಿರಂಗದ ಬೆನ್ನಲ್ಲೇ ಕೋರ್ಟ್ ಮೊರೆ ಹೋದ ಆರು ಪ್ರಭಾವಿ ಸಚಿವರು: ಮಾನಹಾನಿಕರ ಸುದ್ದಿ ತಡೆಗೆ ಮನವಿ
ಬೆಂಗಳೂರು: ಮಾನಹಾನಿಕರ ಸುದ್ದಿ ಸ್ಫೋಟದ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಆರು ಪ್ರಭಾವಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಎಸ್, ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು ಎಂದು ವಿನಂತಿಸಿ ನಗರದ ಬಹುತೇಕ ಪ್ರಮುಖ ಮಾಧ್ಯಮಗಳನ್ನು (ಟಿವಿ ಮತ್ತು ದಿನಪತ್ರಿಕೆಗಳು ಸೇರಿ) ಪ್ರತಿವಾದಿಗಳನ್ನಾಗಿಸಿ, ರಾಜ್ಯದ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ ಮತ್ತು ಭೈರತಿ ಬಸವರಾಜ್ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಚಿವರು […]
ಕಾರ್ಕಳ: ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಾಳ ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಕಾರ್ಕಳ: ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪರಿಬೆಟ್ಟು ನಿವಾಸಿ ಮಿತ್ರಾಜ್ (35) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. ಕುಟುಂಬದೊಂದಿಗೆ ವಾಸವಾಗಿದ್ದ ಅವರು, ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ಇದರಿಂದಲೇ ಮಾನಸಿಕ ರೋಗಕ್ಕೆ ಒಳಗಾಗಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪತಿಯ ವರ್ತನೆಗೆ ಬೇಸತ್ತು ಪತ್ನಿ ನಾಗರತ್ನ ಆರು ತಿಂಗಳ ಹಿಂದೆಯೇ ತವರು […]
ಬ್ರಹ್ಮಾವರ: ಬೈಕಾಡಿಯ ಯುವತಿ ನಾಪತ್ತೆ
ಉಡುಪಿ: ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಮ್ಯಶ್ರೀ (17) ಎಂಬ ಯುವತಿ ಮಾರ್ಚ್ 1 ರಿಂದ ನಾಪತ್ತೆಯಾಗಿದ್ದಾರೆ. ಯುವತಿ 4 ಅಡಿ 7 ಇಂಚು ಎತ್ತರವಿದ್ದು, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2561044, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2561966 ಅನ್ನು ಸಂಪರ್ಕಿಸುವಂತೆ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ
ಉಡುಪಿ: ಮೂಡನಿಡಂಬೂರು ನಿವಾಸಿ ಎಡ್ವರ್ಡ್ ಸೋನ್ಸ್ ನಾಪತ್ತೆ
ಉಡುಪಿ: ಜಿಲ್ಲೆಯ ಮೂಡನಿಡಂಬೂರು ಗ್ರಾಮದ ಬನ್ನಂಜೆ ಟವರ್‌ನ ಫ್ಲ್ಯಾಟ್ ನಂ: 302 ರಲ್ಲಿ ವಾಸವಿದ್ದ ಎಡ್ವರ್ಡ್ ಸೋನ್ಸ (56) ಎಂಬ ವ್ಯಕ್ತಿಯು ಮಾರ್ಚ್ 3 ರಿಂದ ನಾಪತ್ತೆಯಾಗಿದ್ದಾರೆ. ಇವರು 5 ಅಡಿ 7 ಇಂಚು ಎತ್ತರವಿದ್ದು, ದಪ್ಪ ಶರೀರ, ಬಿಳಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳು ತಿಳಿಸಿದ್ದಾರೆ