ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಂಕಿತಾ ದೇವಾಡಿಗಗೆ ಚಿನ್ನದ ಪದಕ

ಉಡುಪಿ: ಕೇರಳದ ಕ್ಯಾಲಿಕಟ್‌ನಲ್ಲಿ ನಡೆದ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಂಕಿತಾ ದೇವಾಡಿಗ 100 ಮೀಟರ್ ಓಟದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶರತ್ ಎಚ್.ಎಸ್. ಹಾಗೂ ಅಜ್ಜರಕಾಡು ಕ್ರೀಡಾಂಗಣದಲ್ಲಿ ಕೋಚ್ ಅಬ್ಬಾಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಶಶಾಂಕ್ ಬಿ. ಪ್ರಶುಲ್ ಪಿ. ಪೂಜಾರಿ ಶಾಂತಿನಿಕೇತನ ಶಾಲೆಯ ಶಶಾಂಕ್ ಬಿ. ಹಾಗೂ ಪ್ರಶುಲ್ ಪಿ. ಪೂಜಾರಿ ಹೈಜಂಪ್ ವಿಭಾಗದಲ್ಲಿ ಕ್ರಮವಾಗಿ […]

ಅನ್ಯ ಕೋಮಿನ ಯುವಕನ ಜೊತೆ ಹಿಂದೂ ಯುವತಿಯರ ಜಾಲಿ ರೈಡ್

ಬೆಳ್ತಂಗಡಿ: ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಮೂವರು ಹಿಂದೂ ವಿದ್ಯಾರ್ಥಿಗಳು ಮತ್ತು ಮೂವರು ಯುವಕರು ಹಾಗೂ ಒಬ್ಬ ಅನ್ಯ ಕೋಮಿನ ಯುವಕ ಬೆಳ್ತಂಗಡಿಯ ದಿಡುಪೆ ಸಮೀಪದ ಎರ್ಮಾಯಿ ಜಲಪಾತಕ್ಕೆ ಜಾಲಿ ರೈಡ್ ಹೋಗುತ್ತಿದ್ದ ಮಾಹಿತಿ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ವಿಚಾರಿಸಿದ ಘಟನೆ ನಡೆದಿದೆ. ಇವರು ಮೋಜು ಮಸ್ತಿ ಮಾಡುವ ಉದ್ದೇಶದಿಂದ ಮಂಗಳೂರಿನಿಂದ ಬೈಕ್ ನಲ್ಲಿ ಎರ್ಮಾಯಿ ಫಾಲ್ಸ್ ಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಪ. ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್

ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಪಶ್ಚಿಮ ಬಂಗಾಳ: ಎಂಟು ಹಂತದಲ್ಲಿ ಮತದಾನ ಮೊದಲ ಹಂತದಲ್ಲಿ 30 ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ಮತದಾನ 2ನೇ ಹಂತದಲ್ಲಿ 30 ಕ್ಷೇತ್ರಗಳಿಗೆ ಏಪ್ರಿಲ್ 1ರಂದು ಮತದಾನ 3ನೇ ಹಂತದಲ್ಲಿ 31 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಮತದಾನ 4ನೇ ಹಂತದಲ್ಲಿ 44 ಕ್ಷೇತ್ರಗಳಿಗೆ ಏಪ್ರಿಲ್ 10ರಂದು ಮತದಾನ 5ನೇ ಹಂತದಲ್ಲಿ 45 ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಮತದಾನ 6ನೇ ಹಂತದಲ್ಲಿ 43 […]

ಉಡುಪಿಯಲ್ಲಿ ಶ್ರೀಲಂಕಾ ಪ್ರಜೆಯ ಅಂತ್ಯಸಂಸ್ಕಾರ: ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತರು

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಶ್ರೀಲಂಕಾ ದೇಶದ ಪ್ರಜೆಯ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಮೃತರ ಸಂಬಂಧಿ ಮುರುಳಿಧರನ್ ಹಾಗೂ ಮಗಳು ಸಿಲ್ವಿನ್ ಅವರ ಸಮ್ಮುಖದಲ್ಲಿ ಉಡುಪಿಯ ಸಾಮಾಜಿಕ ಕಾರ್ಯಕರ್ತರ ಸಹಕಾರದಿಂದ ಶುಕ್ರವಾರ ನೆರವೇರಿಸಲಾಯಿತು. ಧಾರ್ಮಿಕ ಪ್ರಕ್ರಿಯೆಗಳು ಅರ್ಚಕ ಕೆ.ಜೆ. ವಿಠಲ ತಂತ್ರಿಗಳ ಪೌರೋಹಿತ್ಯದಲ್ಲಿ ನಡೆದವು. ಮೃತರ ಕುಟುಂಬಕ್ಕೆ ಸಾಮಾಜಿಕ ಕಾರ್ಯಕರ್ತರಾದ ಹರ್ಷವರ್ಧನ್ ಬ್ರಹ್ಮಾವರ, ಸುದರ್ಶನ್ ಬ್ರಹ್ಮಗಿರಿ, ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಅಣ್ಣಪ್ಪ ಸಂಪಿಗೆನಗರ ಅವರು ನೆರೆಯ ದೇಶದ ಬಂಧುಗಳ […]

ಕ್ರಿಕೆಟ್ ಗೆ ವಿದಾಯ ಘೋಷಿಸಿದ ಆರ್.‌ ವಿನಯ್ ಕುಮಾರ್

ಬೆಂಗಳೂರು: ಭಾರತ ತಂಡವನ್ನು‌ ಮೂರು ಮಾದರಿ ಕ್ರಿಕೆಟ್ ನಲ್ಲಿ ಪ್ರತಿನಿಧಿಸಿದ್ದ ಮಧ್ಯಮ ವೇಗಿ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್ ಕುಮಾರ್ ಇಂದು ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿನಯ್ ಕುಮಾರ್ ಭಾರತ ತಂಡದ ಪರ ಒಂದು ಟೆಸ್ಟ್, 31 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿನಯ್ ಒಟ್ಟು 49 ವಿಕೆಟ್ ಕಬಳಿಸಿದ್ದಾರೆ. 2004ರಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್ ಆರಂಭಿಸಿದ […]