ಬಿಲ್ಲಾಡಿ ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಮಂಗಲಕ್ಕೆ ಪೇಜಾವರ ಶ್ರೀ ಭೇಟಿ
ಉಡುಪಿ: ಕುಂದಾಪುರ ತಾಲೂಕು ಬಿಲ್ಲಾಡಿ ಗ್ರಾಮದ ಸಮೃದ್ಧ ವನಸಿರಿಯ ನಡುವೆ ದಶಕಗಳ ಕಾಲದಿಂದ ಭೂಗತವಾಗಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಪ್ರಸಿದ್ಧ ಜ್ಯೋತಿಷಿ ಮಾಧವನ್ ಪೊದುವಾಳ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನ ಚಿಂತನೆಯ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಾರ ಭೇಟಿ ನೀಡಿದರು. ಗುರುಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ರಾಮಮಂತ್ರಕ್ಕಿಂತ ಅನ್ಯ ತಾರಕ ಮಂತ್ರ ಇಲ್ಲ ಎಂದು ಸ್ವಯಂ ರುದ್ರದೇವರು ತನ್ನ ಸತಿ ಪಾರ್ವತಿಗೆ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಬಿಲ್ಲಾಡಿಯಲ್ಲಿ ಶ್ರೀ […]
ಉಡುಪಿ: ಭುಜಂಗ ಪಾರ್ಕ್ ನ ಪಾರ್ಕಿಂಗ್ ಸ್ಥಳದಲ್ಲಿ ಇಟ್ಟಿದ್ದ ಪಲ್ಸರ್ ಬೈಕ್ ಕಳವು
ಉಡುಪಿ: ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿಯ ರಿಕ್ಷಾ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ KA-36-EW-4967 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ 150 ಸಿಸಿ ಬೈಕ್ ಕಳವು ನಡೆದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಯಚೂರು ಮೂಲದ ಉಡುಪಿ ಚಿಟ್ಪಾಡಿಯ ನಿವಾಸಿ ಬಸವರಾಜು ಕೆ. ಬೈಕ್ ಕಳೆದುಕೊಂಡ ವ್ಯಕ್ತಿ. ಇವರು ಫೆ. 24ರಂದು ಬೆಳಿಗ್ಗೆ 9 ಗಂಟೆಗೆ ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿಯ ರಿಕ್ಷಾ ನಿಲ್ದಾಣದ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ […]
ಕಾರ್ಕಳ: ನೇಣುಬಿಗಿದುಕೊಂಡು ಮೂಡುಮನೆಯ ನಿವಾಸಿ ಆತ್ಮಹತ್ಯೆ
ಕಾರ್ಕಳ: ಮನೆಯ ಮೇಲ್ಛಾವಣಿಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ದುರ್ಗ ಗ್ರಾಮದ ಮೂಡುಮನೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಕಾರ್ಕಳ ತಾಲೂಕು ದುರ್ಗ ಗ್ರಾಮದ ಮೂಡುಮನೆಯ ನಿವಾಸಿ ವಿಠಲ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಸುಮಾರು ಒಂದೂವರೆ ವರ್ಷದಿಂದ ಪಾರ್ಶ್ವ ವಾಯು ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮನನೊಂದು ಇಂದು ಬೆಳಿಗ್ಗೆ 8ರಿಂದ 9.30ರ ಅವಧಿಯಲ್ಲಿ ಮನೆಯ ಜಗುಲಿಯ ಮೇಲ್ಚಾವಣಿಗೆ ಹಾಕಿದ ಮರದ ಪಕ್ಕಾಸಿಗೆ ಹುರಿ ಹಗ್ಗದಿಂದ ಕುತ್ತಿಗೆಗೆ […]
ಉಡುಪಿ: ಬೆಲೆ ಏರಿಕೆ ಖಂಡಿಸಿ ಅಣಕು ಶವಯಾತ್ರೆ; ನಾಗರಿಕ ಸಮಿತಿಯಿಂದ ವಿಭಿನ್ನ ಪ್ರತಿಭಟನೆ
ಉಡುಪಿ: ಇಂಧನ, ಅಡಿಗೆ ಅನಿಲ ಸಹಿತ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಅಜ್ಜರಕಾಡು ಹುತಾತ್ಮರ ಸೈನಿಕ ಸ್ಮಾರಕದ ಬಳಿ ಗುರುವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಅಣಕು ಶವಯಾತ್ರೆ ಮಾಡುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ನಗರದ ಜೋಡುಕಟ್ಟೆಯಿಂದ ಪ್ರತಿಭಟನಾ ಸ್ಥಳದವರೆಗೆ ಅಣಕು ಶವಯಾತ್ರೆ ನಡೆಯಿತು. ಈ ವೇಳೆ ಮಾತನಾಡಿದ ಜಿಲ್ಲಾ ನಾಗರಿಕ ಸಮಿತಿ […]
ಗೋಡ್ಸೆ ಬೆಂಬಲಿಗ ಕಾಂಗ್ರೆಸ್ ಸೇರ್ಪಡೆ
ಭೋಪಾಲ್: ಈವರೆಗೆ ಗಾಂಧಿ ಹತ್ಯೆ ಮಾಡಿದ ಗೋಡ್ಸೆಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶದಲ್ಲಿ ಗೋಡ್ಸೆ ಬೆಂಬಲಿಗನನ್ನೇ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಗೋಡ್ಸೆ, ಆತನ ವಿಚಾರಧಾರೆಯ ಬೆಂಬಲಿಗನಾಗಿರುವ ಹಿಂದೂ ಮಹಾಸಭಾದ ಮಾಜಿ ಕಾರ್ಪೊರೇಟರ್ ಬಾಬುಲಾಲ್ ಚೌರಾಸಿಯಾ ಅವರನ್ನು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಾಬು ಲಾಲ್ ಚೌರಾಸಿಯಾ, ಮಹಾತ್ಮಾ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯ ಕೋರ್ಟ್ ನಲ್ಲಿ ನೀಡಿದ್ದ ಕೊನೆಯ ಹೇಳಿಕೆಯನ್ನು 1 ಲಕ್ಷ ಮಂದಿಗೆ ತಲುಪಿಸುವುದಾಗಿ 15 […]