ಮೂರನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ‘ಜನಧ್ವನಿ ಪಾದಯಾತ್ರೆ’: ಸಾವಿರಾರು ಕಾರ್ಯಕರ್ತರು ಭಾಗಿ
ಉಡುಪಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ‘ಜನಧ್ವನಿ ಪಾದಯಾತ್ರೆ’ ಯು ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಉದ್ಯಾವರ ಬಲಾಯಿಪಾದೆ ಹೊರಟು ಸಂಜೆ ಬ್ರಹ್ಮಾವರಕ್ಕೆ ತಲುಪಲಿದೆ. ಕಲ್ಯಾಣಪುರ ಪೇಟೆಯಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆ ನಡೆಸಲಾಯಿತು. ಮುಖ್ಯ ಭಾಷಣಕಾರರಾಗಿ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಭಾಗವಹಿಸಿದ್ದರು. ಉದ್ಯವಾರದ ಬಲಾಯಿಪಾದೆಯಿಂದ ಸಾಗಿಬಂದ ಪಾದೆಯಾತ್ರೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, […]
ಕುಂದಾಪುರ: ದರಲೆ ತರಲು ಹೋದ ವ್ಯಕ್ತಿ ಹೊಳೆಯಲ್ಲಿ ಮುಳುಗಿ ಮೃತ್ಯು
ಕುಂದಾಪುರ: ಗದ್ದೆಯಲ್ಲಿ ದರಲೆ ತರಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಮುಡವಳ್ಳಿ ಎಂಬಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದ ಮುಡವಳ್ಳಿಯ ನಿವಾಸಿ ನಾಗು ಕುಲಾಲ್ (65) ಮೃತ ದುರ್ದೈವಿ. ಇವರು ಫೆ. 22ರಂದು ಮಧ್ಯಾಹ್ನದ ಸುಮಾರಿಗೆ ಮನೆಯ ಹತ್ತಿರದ ಗದ್ದೆಯಲ್ಲಿ ದರಲೆ ತರಲು ಹೋಗಿದ್ದರು. ಬಳಿಕ ಅವರು ಮನೆಗೆ ವಾಪಸ್ಸು ಬಂದಿರಲಿಲ್ಲ. ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಫೆ. 23ರ ಮಧ್ಯಾಹ್ನ 3 […]
ರಂಗಸ್ಥಳದ ಕಂಬಕ್ಕೆ ತಲೆ ಬಡಿದುಕೊಂಡ ಮಹಿಷಾಸುರ ಪಾತ್ರಧಾರಿ: ಆತಂಕದ ಸ್ಥಿತಿ ನಿರ್ಮಾಣ
ಕುಂದಾಪುರ: ಶ್ರೀ ದೇವೀ ಮಹಾತ್ಮೆ ಯಕ್ಷಗಾನ ನಡೆಯುತ್ತಿದ್ದ ವೇಳೆ ಮಹಿಷಾಸುರ ಪಾತ್ರಧಾರಿ ರಂಗಸ್ಥಳದ ಕಂಬಕ್ಕೆ ತಲೆ ಬಡಿದುಕೊಂಡಿದ್ದರಿಂದ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣ ಆದ ಘಟನೆ ಕುಂದಾಪುರದ ಚಿತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಪೆರ್ಡೂರು ಮೇಳದಿಂದ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತ್ತು. ಆದರೆ, ಮಹಿಷಾಸುರ ಪಾತ್ರದಲ್ಲಿ ಮಾರಣಕಟ್ಟೆ ಮೇಳದ ಯುವ ಕಲಾವಿದ ನಂದೀಶ್ ಮೊಗವೀರ ಜನ್ನಾಡಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಇವರು ಮಹಿಷಾಸುರ ವೇಷ ಅಬ್ಬರದ ಪ್ರವೇಶಕ್ಕೆ ಜತೆಗೆ ರಂಗಸ್ಥಳದ ಕಂಬಕ್ಕೆ ತಲೆ ಹೊಡೆದುಕೊಳ್ಳುವ […]
‘ಪೊಗರು’ ಸಿನಿಮಾ ವಿವಾದ ಸುಖಾಂತ್ಯ: ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ
ಬೆಂಗಳೂರು: ಬ್ರಾಹ್ಮಣ ಸಮುದಾಯದ ಕುರಿತು ವಿವಾದಾತ್ಮಕ ದೃಶ್ಯಗಳು ಇದ್ದ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾಕ್ಕೆ ಸಮುದಾಯದವರಿಂದ ತೀವ್ರ ಪ್ರತಿಭಟನೆಯ ಬಿಸಿತಟ್ಟಿತ್ತು. ಇದೀಗ ಬ್ರಾಹ್ಮಣ ಸಮುದಾಯದ ಒತ್ತಾಯದ ಮೇರೆಗೆ ಪೊಗರು ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ಈ ಮೂಲಕ ಪೊಗರು ಸಿನಿಮಾ ವಿವಾದ ಸುಖಾಂತ್ಯ ಕಂಡಿದೆ. ಸದ್ಯ ಪೊಗರು ಸಿನಿಮಾ ನೋಡಿದ ಬ್ರಾಹ್ಮಣ ಸಭಾದ ಸದಸ್ಯರು ವಿವಾದಾತ್ಮಕ ಸೀನ್ಗಳಿಗೆ ಕತ್ತರಿ ಹಾಕಿರುವುದನ್ನು ಗಮನಿಸಿದ್ದಾರೆ. ಈ ಹಿಂದೆ, ನಿರ್ದೇಶಕ ನಂದಕಿಶೋರ್ ಮತ್ತು ಸಮುದಾಯದ ಸದಸ್ಯರ ಮಧ್ಯೆ […]
ಶಾಸಕ ಕೆ. ರಘುಪತಿ ಭಟ್ ಅವರ ಜನ್ಮ ದಿನಾಚರಣೆ: ಇಂದು ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಉಡುಪಿ: ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಬಿಜೆಪಿ ಉಡುಪಿ ನಗರ ಇದರ ಆಶ್ರಯದಲ್ಲಿ ನಗರ ಬಿಜೆಪಿ ಎಲ್ಲಾ ಮೋರ್ಚಾಗಳ ಸಹಭಾಗಿತ್ವದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಣಿಪಾಲ ರಕ್ತ ನಿಧಿ ವಿಭಾಗದಲ್ಲಿ ಇಂದು (ಫೆ. 24) ಬೆಳಿಗ್ಗೆ 9ರಿಂದ 1 ಗಂಟೆ ವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.