ನಾನು ರಾಮನ ಭಕ್ತ, ನನ್ನ ಹೆಸರಿನಲ್ಲೇ ರಾಮ ಇದ್ದಾನೆ: ಟೀಕಾಕಾರರಿಗೆ ಸಿದ್ದರಾಮಯ್ಯ ಟಾಂಗ್
ಉಡುಪಿ: ನನ್ನನ್ನು ರಾಮನ ವಿರೋಧಿ ಎನ್ನುತ್ತಾರೆ. ಆದರೆ ನನ್ನ ಹೆಸರಿನಲ್ಲಿಯೇ ರಾಮ ಇದ್ದಾನೆ. ಮಹಾತ್ಮ ಗಾಂಧಿಯಂತೆ ನಾನು ರಾಮ ಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧೀಜಿಯ ಆದರ್ಶ. ಗಾಂಧೀಜಿಯನ್ನು ಕೊಂದ ಸಂಘ ಪರಿವಾರದವರು ರಾಮಭಕ್ತರಾಗಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾಕಾರರಿಗೆ ತಿರುಗೇಟು ನೀಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ ಜನಧ್ವನಿ ಪಾದಯಾತ್ರೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಡಿಯೂರಪ್ಪರಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ಕರ್ನಾಟಕದ ಇತಿಹಾಸದಲ್ಲೇ ಯಾರು ಕಂಡಿಲ್ಲ. ಈ […]
ಶ್ರೀ ಭಂಡಾರಕೇರಿ ಮಠ: ಇಬ್ಬರು ಪೂರ್ವಯತಿಗಳ ವೃಂದಾವನ ಶೋಧ, ಪುನಃಪ್ರತಿಷ್ಠೆ
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠಗಳಲ್ಲಿ ಒಂದಾಗಿರುವ ಶ್ರೀ ಭಂಡಾರಕೇರಿ ಮಠದ ಶ್ರೀ ಸತ್ಯತೀರ್ಥ ಯತಿಪರಂಪರೆಯ ಇಬ್ಬರು ಪೂರ್ವಯತಿಗಳ ಮೂಲ ವೃಂದಾವನವು ಶೋಧಿಸಲ್ಪಟ್ಟಿದ್ದು, ಅವುಗಳ ಪುನರ್ ನಿರ್ಮಾಣ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವವು ಶ್ರೀಮಠದ ಈಗಣ ಯತಿಗಳಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ನೇತೃತ್ವ, ಜೋತಿರ್ವಿದ್ವಾನ್ ಇರ್ವತ್ತೂರು ಗೋಪಾಲ ಜೋಯಿಸರ ಮಾರ್ಗದರ್ಶನ, ವಿದ್ವಾನ್ ಕೃಷ್ಣ ಕುಮಾರ ಆಚಾರ್ಯರ ಅಧ್ವರ್ಯುತನದಲ್ಲಿ ಸೋಮವಾರ ನೆರವೇರಿತು. ಶ್ರೀ ಮಠದಲ್ಲಿ ಇತ್ತೀಚೆಗೆ ನಡೆದ ಆರೂಢ ಪ್ರಶ್ನೆಯ ಸಂದರ್ಭದಲ್ಲಿ ಪೂರ್ವಯತಿದ್ವರ ವೃಂದಾವನ ಭೂಗತವಾಗಿರುವುದು ಅರಿವಿಗೆ ಬಂದಿತ್ತು. […]
ಪವರ್ ಲಿಫ್ಟಿಂಗ್ ಚಾಂಪಿಯಶಿಷ್: ವಿಶ್ವನಾಥ್ ಭಾಸ್ಕರ್ ಗಾಣಿಗಗೆ ಮೂರು ಚಿನ್ನದ ಪದಕ
ಉಡುಪಿ: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಫೆ.17ರಿಂದ 21ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯಶಿಷ್-2021 ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರು 93 ಕೆ.ಜಿ ದೇಹತೂಕ ವಿಭಾಗದಲ್ಲಿ 3 ಚಿನ್ನದ ಪದಕ ಗಳಿಸಿದ್ದಾರೆ. ಅವರು ಸ್ಕ್ವಾಟ್ ನಲ್ಲಿ 327.5 ಕೆಜಿ, ಬೆಂಚ್ ಪ್ರೆಸ್ ನಲ್ಲಿ 180 ಕೆಜಿ, ಡೆಡ್ ಲಿಫ್ಟ್ ವಿಭಾಗದಲ್ಲಿ 320 ಕೆಜಿ ಭಾರ ಎತ್ತುವ ಮೂಲಕ ಒಟ್ಟು 827.5 ಕೆಜಿ ಭಾರ ಎತ್ತುವ ಮೂಲಕ […]
ಮೀಸಲಾತಿ ಕೇಳುವುದು ತಪ್ಪಲ್ಲ: ಸಿದ್ದರಾಮಯ್ಯ
ಉಡುಪಿ: ಮೀಸಲಾತಿ ಕೇಳುವುದು ತಪ್ಪಲ್ಲ. ಸಂವಿಧಾನದಡಿಯಲ್ಲಿ ಯಾರು ಮೀಸಲಾತಿ ಪಡೆಯಲು ಅರ್ಹರಿದ್ದಾರೆಯೋ, ಅವರಿಗೆಲ್ಲ ಮೀಸಲಾತಿ ಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಡುಬಿದ್ರಿ ಪೇಟೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಜನಧ್ವನಿ ಪಾದಯಾತ್ರೆ’ಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮೀಸಲಾತಿ ಕೊಡುವ ಬಗ್ಗೆ ಪರಿಶೀಲನೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಯಾರು ಹಿಂದುಳಿದ ವರ್ಗಕ್ಕೆ ಸೇರಬೇಕು. ಯಾರು ಸೇರಬಾರದು ಎಂಬುವುದನ್ನು ಪರಿಶೀಲಿಸಿ […]
ರಾಮಮಂದಿರಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ನೀಡಿದ್ದಾರೆ: ಸಹಕಾರ ಸಚಿವ ಸೋಮಶೇಖರ್
ಮೈಸೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ದೇಣಿಗೆ ನೀಡಿದ್ದಾರೆ. ಆದರೆ ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ಸಾಗುತ್ತಿರುವುದರಿಂದ ಅವರಿಗೆ, ಯಾವುದೇ ರೀತಿ ಆರೋಪ ಮಾಡಲು ಆಗುತ್ತಿಲ್ಲ. ಹಾಗಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಸುಗಮವಾಗಿ, ದಕ್ಷವಾಗಿ ಹೋಗುತ್ತಿದೆ. ಹೀಗಾಗಿ ಸಿದ್ದರಾಮಯ್ಯನವರಿಗೆ ಮಾತನಾಡಲೂ ಏನೂ ಉಳಿದಿಲ್ಲ. ಅದಕ್ಕೆ […]