ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ ಬಿಜೆಪಿ ಸೇರ್ಪಡೆ
ಉಡುಪಿ: ಪೆರ್ಡೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಜಯಗಳಿಸಿ ಪಂಚಾಯತ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ದೇವು ಪೂಜಾರಿ ಅವರು ಇಂದು ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಶಾಸಕ ಲಾಲಾಜಿ ಆರ್ ಮೆಂಡನ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಪಕ್ಷದ ಧ್ವಜ ನೀಡಿ ದೇವು ಪೂಜಾರಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಧಾನ ಕಾರ್ಯದರ್ಶಿ ಅನಿಲ್ […]
ಮಂದಾರ್ತಿ ಜಾತ್ರೆಗೆ ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆ
ಬ್ರಹ್ಮಾವರ: ಇಲ್ಲಿನ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಜಾತ್ರೆಗೆಂದು ಬಂದಿದ್ದ ಇಬ್ಬರು ಮಹಿಳೆಯರು ಕಾಣೆಯಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಾತ್ರೆಯಲ್ಲಿ ನಾಪತ್ತೆಯಾದವರನ್ನು ಪ್ರಸ್ತುತ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನೆಲೆಸಿರುವ ಬ್ರಹ್ಮಾವರ ಬೈಕಾಡಿಯ ಮೂಲದ ಜ್ಯೋತಿ (30) ಹಾಗೂ ಹಿರೇಕೋಡಿ ಗ್ರಾಮದ ಪ್ರಿಯಾಂಕ (24) ಎಂದು ಗುರುತಿಸಲಾಗಿದೆ. ಜ್ಯೋತಿ ಅವರನ್ನು ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಿವಾಸಿ ಬಂಡು ಅಪ್ಪಾಸಾಬ ದಾನ ವಾಡೆ (30) […]
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ: ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಪೊಲ್ಯ ಆಯ್ಕೆ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2021-23ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಅಲೆವೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜೇಶ್ ಶೆಟ್ಟಿ ಅಲೆವೂರು ಉಡುಪಿ ಅಜ್ಜರಕಾಡಿನ ಐಎಂಎ ಭವನದಲ್ಲಿ ಫೆ.16ರಂದು ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಪಕ್ರಿಯೆ ನಡೆಸಲಾಯಿತು. ನಝೀರ್ ಪೊಲ್ಯ ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಪೊಲ್ಯ, ಉಪಾಧ್ಯಕ್ಷರುಗಳಾಗಿ ಆರ್.ಬಿ.ಜಗದೀಶ್, ವಿನಯ್ ಪಾಯಸ್, ಬಾಲಕೃಷ್ಣ ಪೂಜಾರಿ, ಕೋಶಾಧಿಕಾರಿಯಾಗಿ ಉಮೇಶ್ ಮಾರ್ಪಳ್ಳಿ, ಸಹ ಕಾರ್ಯದರ್ಶಿಯಾಗಿ ರಾಜೇಶ್ ಗಾಣಿಗ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಎರ್ಮಾಳ್, ಕಾರ್ಯಕಾರಿ ಸಮಿತಿ […]
ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿ ತಿಥಿಯಂದು ಪ್ರತ್ಯಕ್ಷ: ತಿಥಿಯ ಸಿದ್ಧತೆಯಲ್ಲಿದ್ದ ಮನೆಯವರಿಗೆ ಶಾಕ್
ಬೆಳ್ತಂಗಡಿ: ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿಯೊಬ್ಬರು ತಿಥಿಯ ದಿನದಂದು ಪ್ರತ್ಯಕ್ಷಗೊಂಡ ವಿಚಿತ್ರ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಶ್ರೀನಿವಾಸ್ ದೇವಾಡಿಗ (50 ) ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಮನೆಯವರು ಎಷ್ಟು ಹುಡುಕಾಟ ನಡೆಸಿದರೂ ಶ್ರೀನಿವಾಸ್ ದೇವಾಡಿಗ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮನೆಯವರು ದೂರು ದಾಖಲಿಸಿದ್ದರು. ಫೆ. 6ರಂದು ಬೆಳ್ತಂಗಡಿಯ ಕಳಿಯ ಗ್ರಾಮದ ಗುಡ್ಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಅಲ್ಲದೆ ಮೃತದೇಹವು ಸಂಪೂರ್ಣ ಕೊಳೆತ […]
80 ಬಡಗಬೆಟ್ಟು ಗ್ರಾಪಂ: ಅಧ್ಯಕ್ಷರಾಗಿ ಮಾಧವಿ ಎಸ್. ಆಚಾರ್ಯ, ಉಪಾಧ್ಯಕ್ಷರಾಗಿ ನಿರುಪಮಾ ಎಸ್. ಹೆಗ್ಡೆ ಆಯ್ಕೆ
ಉಡುಪಿ: 80 ಬಡಗಬೆಟ್ಟು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಮಾಧವಿ ಎಸ್. ಆಚಾರ್ಯ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ನಿರುಪಮಾ ಎಸ್. ಹೆಗ್ಡೆ ಅವರು ಅವಿರೋಧವಾಗಿ ಆಯ್ಕೆಯಾದರು.