ಉಡುಪಿ: ವೈಕುಂಠ ಬಾಳಿಗ ಕಾನೂನು ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಪ್ರಕಾಶ್ ಕಣಿವೆ ಅವರಿಗೆ ಪ್ರದೀಪ ಪುರಸ್ಕಾರ

ಉಡುಪಿ: ಸುಜನ ಟ್ರಸ್ಟ್ ಬಸಾಪುರದ ಪ್ರತಿಷ್ಠಿತ ಪ್ರದೀಪ ಪುರಸ್ಕಾರಕ್ಕೆ ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲ ಡಾ. ಪ್ರಕಾಶ್ ಕಣಿವೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 20ರಂದು ಕೊಪ್ಪ ತಾಲೂಕಿನ ಬಿಲಗದ್ದೆ ಶಾಲಾ ಮೈದಾನದಲ್ಲಿ ಪ್ರದೀಪ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಣಿವೆ ಗ್ರಾಮದ ಡಾ. ಪ್ರಕಾಶ್ ಅವರು ಎರಡು ರಾಜ್ಯಗಳಲ್ಲಿ ಅಪಾರ ಶಿಷ್ಯರನ್ನು ಹೊಂದಿದ್ದಾರೆ. ಹಳ್ಳಿ ಶಿಕ್ಷಣವನ್ನು ಪಡೆದು ಶಿವಮೊಗ್ಗ ನ್ಯಾಷನಲ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದು, ಮೈಸೂರಿನ ಮಾನಸ […]

ಹಿರಿಯಡಕ: ನಾಳೆಯಿಂದ ಬಸ್ತಿ ಶ್ರೀ ಮೂಲ ವರ್ತೆ ಕಲ್ಕುಡ ದೈವಗಳ ಪುನಃ ಪ್ರತಿಷ್ಠಾ ಮತ್ತು ಕಲಶಾಭಿಷೇಕ

ಹಿರಿಯಡಕ: ಇಲ್ಲಿನ ಬೊಮ್ಮರಬೆಟ್ಟು ಬಸ್ತಿ ಶ್ರೀ ಮೂಲ ವರ್ತೆ ಕಲ್ಕುಡ ದೈವಗಳ ಪುನಃ ಪ್ರತಿಷ್ಠಾ ಮತ್ತು ಕಲಶಾಭಿಷೇಕ ಫೆಬ್ರವರಿ 15ರಿಂದ 17ರ ವರೆಗೆ ದೈವಸ್ಥಾನದ ಸನ್ನಿಧಿಯಲ್ಲಿ ನಡೆಯಲಿದೆ. ವೇದಮೂರ್ತಿ ಲಕ್ಷ್ಮೀಜನಾರ್ದನ ಭಟ್ ಮೂಡುಮಠ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಫೆ. 15ಕ್ಕೆ ಹಸಿರುಹೊರೆಕಾಣಿಕೆ: ಫೆ. 15ರಂದು ಸಂಜೆ 4ಗಂಟೆಗೆ ಹಿರಿಯಡಕ ಶ್ರೀ ಮಹಾತೋಬಾರ ವೀರಭದ್ರ ಸ್ವಾಮಿ ದೇವಸ್ಥಾನದಿಂದ ಹೊರಟು ಸಕಲ ಬಿರುದಾವಳಿ, ಸುಮಂಗಲಿಯರ ಪೂರ್ಣಕುಂಭಕಲಶ ವಾದ್ಯ, ವೇಷಭೂಷಣಗಳೊಂದಿಗೆ ‘ಹಸಿರುಹೊರೆಕಾಣಿಕೆ ಮೆರವಣಿಗೆ’ ಬಸ್ತಿ ಮೂಲ ವರ್ತೆ […]

ಬಸ್- ಟ್ರಕ್ ಮಧ್ಯೆ ಭೀಕರ ಅಪಘಾತ: 14 ಮಂದಿ ಸ್ಥಳದಲ್ಲೇ ಸಾವು

ಕರ್ನೂಲು: ಬಸ್ಸು ಮತ್ತು ಟ್ರಕ್ ಮಧ್ಯೆ ಢಿಕ್ಕಿ ಸಂಭವಿಸಿ 14 ಮಂದಿ ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ವೆಲ್ದುರ್ಥಿ ಮಂಡಲ್ ನ ಮಾದಾರ್ಪುರ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಸಂಭವಿಸಿದೆ. ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ಅಜ್ಮೀರ್ ದರ್ಗಾಕ್ಕೆ 18 ಮಂದಿ ಮಿನಿಬಸ್ಸಿನಲ್ಲಿ ಯಾತ್ರೆ ಹೊರಟಿದ್ದರು. ನಿಯಂತ್ರಣ ಕಳೆದುಕೊಂಡ ಬಸ್ಸು ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು ಮತ್ತೊಂದು ಬದಿಗೆ ಬಿದ್ದು ಎದುರಿನಿಂದ ಬರುತ್ತಿದ್ದ ಟ್ರಕ್ ಗೆ ಢಿಕ್ಕಿ ಹೊಡೆಯಿತು. ಬಸ್ಸು ಸಂಪೂರ್ಣ ಜಖಂ […]