ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಆರೋಪಿಯ ಬಂಧನ

ಮಂಗಳೂರು: ಇಲ್ಲಿನ ಖಾಸಗಿ‌ ಆಸ್ಪತ್ರೆಯೊಂದರ ಶೌಚಾಲಯದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಕಾಮುಕನೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮದನಿನಗರ ನಿವಾಸಿ ಅಬ್ದುಲ್ ಮುನೀರ್ (40) ಬಂಧಿತ ಆರೋಪಿ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆ, ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಆರೋಪಿ ಮುನೀರ್‌ ತನ್ನ ಮೊಬೈಲ್‌ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದನು. ಇದನ್ನು ಗಮನಿಸಿದ ಮಹಿಳೆಯು ಹೊರಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಬಳಿಕ ಮಹಿಳೆ ಜ. 20ರಂದು ಉಳ್ಳಾಲ ಪೊಲೀಸ್‌ […]

ಫೆ. 14-19: ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ತೃತೀಯ ವಾರ್ಷಿಕ ವರ್ಧಂತ್ಯುತ್ಸವ

ಉಡುಪಿ: ದೇವಾಡಿಗ ಸಮಾಜದ ಕುಲದೇವಿ ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ತೃತೀಯ ವಾರ್ಷಿಕ ವರ್ಧಂತ್ಯುತ್ಸವ ಫೆಬ್ರವರಿ 14ರಿಂದ 19ರ ವರೆಗೆ ದೇಗುಲದಲ್ಲಿ ನಡೆಯಲಿದೆ ಎಂದು ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ನಮ್ಮ ನಡಿಗೆ ಅಮ್ಮ ನೆಡೆಗೆ: ದೇವಾಡಿಗ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಕಲ ಸಂಕಷ್ಟ, ಗ್ರಹಚಾರ ದೋಷ ನಿವಾರಣೆಗಾಗಿ ಫೆ. 14ರಂದು ಬೆಳಿಗ್ಗೆ 5.45ಕ್ಕೆ ಉಡುಪಿ ದೇವಾಡಿಗರ […]

ಅತ್ತೂರು: ಪರ್ಪಲೆಗಿರಿ ಕಲ್ಕುಡ ನೇಮೋತ್ಸವಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂದ ಹಸಿರು ಹೊರೆಕಾಣಿಕೆ

ಕಾರ್ಕಳ: ಅತ್ತೂರು ಪರ್ಪಲೆಗಿರಿ ಕಲ್ಕುಡ ನೇಮೋತ್ಸವಕ್ಕೆ ನಿರೀಕ್ಷೆಗೂ ಮೀರಿ ಹಸಿರು ಹೊರೆಕಾಣಿಕೆ ಹರಿದುಬಂದಿದೆ. ಜಿಲ್ಲೆಯ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಮಾತ್ರ ಹಸಿರು ಹೊರೆಕಾಣಿಕೆ ಸಲ್ಲಿಸುವಂತೆ ಮನವಿ ಮಾಡಲಾಗಿತ್ತು. ಸಾರ್ವಜನಿಕವಾಗಿ ಮಾಹಿತಿ ನೀಡಿರಲಿಲ್ಲ. ಆದರೂ ಜಿಲ್ಲೆಯ ಜಾಗರಣ ವೇದಿಕೆ ಕಾರ್ಯಕರ್ತರಿಂದ ನಿರೀಕ್ಷೆಗೂ ಮೀರಿದ ಹೊರೆಕಾಣಿಕೆ ಸಲ್ಲಿಕೆ ಯಾಗಿದ್ದು, ಸಂತೋಷ ತಂದಿದೆ. ಇಂದು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಹೊರೆಕಾಣಿಕೆ ಬರುವ ಸಾಧ್ಯತೆ ಇದೆ.

ಮೀನುಗಾರರ ಬಾಕಿ ಡಿಸೇಲ್ ಸಬ್ಸಿಡಿ ₹ 70 ಕೋಟಿ ಶೀಘ್ರ ಬಿಡುಗಡೆ: ಸಚಿವ ಅಂಗಾರ

ಉಡುಪಿ: ಕಳೆದ ಮೂರು ತಿಂಗಳಿನಿಂದ ಮೀನುಗಾರರಿಗೆ ಬಾಕಿಯಿದ್ದ ಡಿಸೇಲ್ ಸಬ್ಸಿಡಿ ಬಾಕಿ ಮೊತ್ತ ₹70 ಕೋಟಿ ಬಿಡುಗಡೆಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು. ಉಡುಪಿ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾಡದೋಣಿ ಮೀನುಗಾರರಿಗೆ ಬಾಕಿಯಿದ್ದ 60 ಸಾವಿರ ಲೀಟರ್ ಸೀಮೆಎಣ್ಣೆ ಬಿಡುಗಡೆಯಾಗಿದೆ. ಇನ್ನು 4 ಲಕ್ಷ ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲು ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಿಸುವುದನ್ನು ಸ್ಥಗಿತಗೊಳಿಸಿದೆ. ಹಾಗಾಗಿ ಸೀಮೆಎಣ್ಣೆ ಇಲ್ಲದೆ ನಾಡದೋಣಿ […]

ಉಡುಪಿ: ನಾಯಿ ಕೊಂದ ಆರೋಪಿಯ ಬಂಧನ

ಮಲ್ಪೆ: ಏರ್ ಗನ್ ನಿಂದ ಶೂಟ್ ಮಾಡಿ ನಾಯಿಯನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೆಮ್ಮಣ್ಣುವಿನ ಬ್ರಾನ್ ಡಿಸೋಜ (50) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಬೆಳಿಗ್ಗೆ ಕೆಮ್ಮಣ್ಣು ಗುಂಡಪ್ಪ ಪೂಜಾರಿ ಎಂಬುವವರ ಸಾಕು ನಾಯಿಯನ್ನು ಏರ್ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದನು ಎಂದು ದೂರು ದಾಖಲಾಗಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಮಲ್ಪೆ ಪೊಲೀಸರು, ಆತನನ್ನು ಬಂಧನ ಮಾಡಿದ್ದಾರೆ.