ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ
ಉಡುಪಿ: ಸಮಾಜದಲ್ಲಿ ಮಾತೆಯರ ಗೌರವಕ್ಕೆ ಚ್ಯುತಿ ಮಾಡುವಂತಹ ಪಾಶ್ಚಾತ್ಯ ಸಂಸ್ಕೃತಿಯಾದ ‘ವ್ಯಾಲೆಂಟೈನ್ ಡೇ’ ಆಚರಣೆಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆಯು ವಿರೋಧ ವ್ಯಕ್ತಪಡಿಸಿದೆ. ನಾವು ಪ್ರೇಮಿಗಳ ವಿರೋದಿಗಳಲ್ಲ. ಆದರೆ ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಸಾರ್ವಜನಿಕ ಸ್ಥಳ, ಹೋಟೆಲ್, ಪಾರ್ಕ್ ಗಳಲ್ಲಿ ಅಸಭ್ಯ ಹಾಗೂ ಅನೈತಿಕವಾಗಿ ವರ್ತಿಸಿ, ಸಾರ್ವಜನಿಕರಿಗೆ ಮುಜುಗರ ಹಾಗೂ ತೊಂದರೆ ಕೊಡುವುದು ಸರಿಯಲ್ಲ. ಹೆಣ್ಣುಮಕ್ಕಳನ್ನು ನೀಚವಾಗಿ ಕಾಣುವಂತಹ ಈ ದಿನವನ್ನು ಆಚರಿಸದೇ, ಭಾರತಮಾತೆಗಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸಹೋದರರಾದ ವೀರಸೈನಿಕರಿಗಾಗಿ ಫೆ. 14 ರಂದು ಹುತಾತ್ಮ […]
‘ವ್ಯಾಲೆಂಟೈನ್ಸ್ ಡೇ’ಗೆ ಬಜರಂಗದಳ ವಿರೋಧ: ಸುನಿಲ್ ಕೆ.ಆರ್.
ಉಡುಪಿ: ‘ಪ್ರೇಮಿಗಳ ದಿನಾಚರಣೆ’ (ವ್ಯಾಲೆಂಟೈನ್ಸ್ ಡೇ) ಎನ್ನುವುದು ಈ ನೆಲದ ಸಂಸ್ಕೃತಿಯನ್ನು ನಾಶ ಮಾಡುವ ಒಂದು ಕಾರ್ಯಕ್ರಮ. ಇದರ ಹಿಂದೆ ಮತಾಂತರ ಮಾಡುವ ಉದ್ದೇಶ ಅಡಗಿದೆ. ಈ ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಈ ದಿನ ಆಚರಣೆ ಮಾಡುವುದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಸಂಯೋಜಕ ಸುನಿಲ್ ಕೆ.ಆರ್. ತಿಳಿಸಿದ್ದಾರೆ. ಭಾರತ ದೇಶ ಒಂದು ದೇವಭೂಮಿ. ನಮ ಸಂಸ್ಕೃತಿ ಸಂಸ್ಕಾರಗಳಿಗೆ ಜಗತ್ತಿನಲ್ಲಿ ಮಹತ್ವವಿದ್ದು, ಸನಾತನ ಧರ್ಮ ಎಂಬ ಇತಿಹಾಸವೂ […]
ಇವರ ಕೈಲ್ಲರಳಿದ ಮಣ್ಣಿನ ಪಾತ್ರೆಗಳಿಗೆ ಭಾರೀ ಡಿಮ್ಯಾಂಡ್: ಈ ದಂಪತಿಯ ಮಣ್ಣಿನ ಪಾತ್ರೆಗಳನ್ನು ನೀವೂ ತಗೊಳ್ಳಿ
ಅಬ್ಬಾ..ಏನ್ ಬಿಸಿಲಪ್ಪಾ… ಎಷ್ಟು ನೀರ್ ಕುಡಿದ್ರೂ ಸಾಲಲ್ಲ ಅನ್ನೋ ಬೇಸಿಗೆಕಾಲವಿದು. ಹೌದು, ಬೇಸಿಗೆ ಬಂದೊಡನೆ ನೀರಿನ ದಾಹವೂ ಹೆಚ್ಚಾಗುತ್ತೆ. ಸಾವಿರಾರು ರೂಪಾಯಿ ಕೊಟ್ಟು ತೆಗೆದುಕೊಂಡಿರುವ ಪ್ರಿಡ್ಜ್ ಕೂಡ ಮಡಿಕೆಗಳ ಮುಂದೆ ಮಂಕಾಗುತ್ತೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಮಡಿಕೆಯಲ್ಲಿಟ್ಟ ತಂಪು ನೀರು ಕುಡಿದರೆ ಸಮಾಧಾನ ಅನ್ನಿಸುತ್ತೆ. ನಮಗೆ ಸಮಾಧಾನ ಕೊಡುವ ಆ ಮಡಕೆ ಕುಡಿಕೆಗಳ ಮಾಡುತ್ತಾ ಜೀವನ ಸಾಗಿಸುತ್ತಿರುವ ದಂಪತಿಯ ಒಂದು ಕಥೆ ಕೇಳಿ. ಯಜಮಾನನ ಹೆಸರು ಸುಂದರ ಮೂಲ್ಯ. ಅವರ ಪತ್ನಿಯ ಹೆಸರು ಜಲಜ ಮೂಲ್ಯ. […]
ಹಿರಿಯ ರಂಗಕರ್ಮಿ ಬಿ. ಜಯಶ್ರೀಗೆ ರಂಗಭೂಮಿ ಪ್ರಶಸ್ತಿ ಪ್ರದಾನ
ಉಡುಪಿ: ರಂಗಭೂಮಿ ಉಡುಪಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರಿಗೆ ರಂಗ ಸಾಮ್ರಾಜ್ಞೆ ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನಂತೆ ಈಗ ಸಂಸ್ಕೃತಿಯ ಕೊಡುಕೊಳ್ಳುವಿಕೆ ಆಗುತ್ತಿಲ್ಲ. ಅದು ಸಂಪೂರ್ಣ ಕುಂದಿದೆ. ಇದು ನನಗೆ ತುಂಬಾ ನೋವು ತಂದಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡುವುದು ಕೆಲವರಲ್ಲಿ ಕೆಟ್ಟದಾಗಿ ಕಾಣುತ್ತೇ. ನಾನು ತಪ್ಪು ಮಾಡಿದರೆ ಪ್ರೇಕ್ಷಕರು ನನ್ನ ತಪ್ಪು […]
ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೋಸಲೆ ವ್ಯಾಸರಾಜ ಮಠಾಧೀಶರ ಭೇಟಿ
ಉಡುಪಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಇಂದು ಉಡುಪಿ ಶಿವಳ್ಳಿ ಗ್ರಾಮದ ಅತ್ಯಂತ ಪ್ರಾಚೀನ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇಗುಲದ ವರ್ಷಾವಧಿ ಉತ್ಸವದ ಹಿನ್ನೆಲೆಯಲ್ಲಿ ಆಗಮಿಸಿದ ಶ್ರೀಗಳು ಮಹಾಲಿಂಗೇಶ್ವರ ದೇವರಿಗೆ ಮಂಗಳಾರತಿ ಬೆಳಗಿದರು. ಬಳಿಕ ಶ್ರೀ ದೇವಳದ ವತಿಯಿಂದ ಅರ್ಪಿಸಲಾದ ಗುರುಪೂಜೆಯನ್ನು ಸ್ವೀಕರಿಸಿ ಶುಭಾನುಗ್ರಹ ಸಂದೇಶ ನೀಡಿ ಹರಸಿದರು. ದೇವಳದ ವತಿಯಿಂದ ಶ್ರೀಗಳನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಲಾಯಿತು. ಆಡಳಿತ […]