ಕಾಪು: ಟಿವಿಎಸ್ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ: ಸವಾರ ಗಂಭೀರ

ಉಡುಪಿ: ಟಿವಿಎಸ್ ದ್ವಿಚಕ್ರ ವಾಹನಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರ ವಿದ್ಯಾನಿಕೇತನ ಶಾಲೆಯ ಬಳಿ ಶುಕ್ರವಾರ ಸಂಭವಿಸಿದೆ. ಕಾಪುವಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ಸವಾರನಿಗೆ ಕೇರಳದಿಂದ ಕೊಲ್ಲೂರು ಕಡೆ ಸಾಗುತ್ತಿದ್ದ ಟೂರಿಸ್ಟ್ ಟೆಂಪೋ ಡಿಕ್ಕಿ ಹೊಡೆದಿದೆ. ಇದರಿಂದ ಸವಾರ ಟಿವಿಎಸ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಿಲ್ಲುವಂತೆ ಕಾಣುತ್ತಿಲ್ಲ. ಸತತವಾಗಿ ನಾಲ್ಕನೇ ದಿನವೂ ದಾಖಲೆ ಪ್ರಮಾಣದಲ್ಲಿ ಬೆಲೆ ಹೆಚ್ಚಳವಾಗಿದ್ದು, ಇದರಿಂದ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ರಾಜ್ಯದ ತೈಲ  ರಿಟೈಲರ್ಸ್ ಗಳ  ಪ್ರಕಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 31 ಪೈಸೆ ಹಾಗೂ ಡೀಸೆಲ್  ದರದಲ್ಲಿ 35 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಕಾಲಿಕ ದಾಖಲೆ ಎಂಬಂತೆ ಲೀಟರ್ ಪೆಟ್ರೋಲ್ ದರ 88.14 ಪೈಸೆಯಾದರೆ, ಮುಂಬೈಯಲ್ಲಿ 94. 64 ಪೈಸೆಯಾಗಿದೆ. […]

ಫೆ. 13ರಂದು ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರು ಪೆರಂಪಳ್ಳಿ ದೇವಳಕ್ಕೆ ಭೇಟಿ

ಉಡುಪಿ: ಇಲ್ಲಿನ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ಫೆ. 13ರ ಸಂಜೆ 3 .30ಕ್ಕೆ ಶ್ರೀ ವ್ಯಾಸರಾಜರ ಯತಿ ಪರಂಪರೆಯ ಶ್ರೀ ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವರು. ಬಳಿಕ ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿದ್ದಾರೆ.

ಕಾರ್ಕಳ: ಫೆ. 14ಕ್ಕೆ ಕಲ್ಕುಡ- ಕಲ್ಲುರ್ಟಿ- ತೂಕತ್ತರಿ ದೈವದ ನೇಮೋತ್ಸವ

ಕಾರ್ಕಳ: ಅತ್ತೂರು ಪರ್ಪಲೆಗಿರಿಯಲ್ಲಿ ಶ್ರೀ ಕಲ್ಕುಡ-ಕಲ್ಲುರ್ಟಿ-ತೂಕತ್ತರಿ ದೈವದ ನೇಮೋತ್ಸವ ಫೆ. 14ರಂದು ನಡೆಯಲಿದೆ. ಅಂದು ಬೆಳಿಗ್ಗೆ 7.30ಕ್ಕೆ ಮಹಾಮೃತ್ಯುಂಜಯ ಹೋಮ, ಶತ ನಾರಿಕೇಳ ಹೋಮ ಮತ್ತು ರುದ್ರ ಹೋಮಕ್ಕೆ ಸಂಕಲ್ಪ, 8 ಗಂಟೆಗೆ ದೈವಗಳ ಪ್ರತಿಷ್ಠಾ ವಿಧಿ ಆರಂಭವಾಗಲಿದೆ. 9ಗಂಟೆಗೆ ಪ್ರಧಾನ ಸಾನಿಧ್ಯ ಸಂಕಲ್ಪಿತ ಪ್ರಾಕೃತಿಕ ಜಲಶಿಲೆಗಳ ಭವ್ಯ ಶೋಭಾಯಾತ್ರೆ, 10.30ಕ್ಕೆ ಶ್ರೀ ಕಲ್ಕುಡ ಕಲ್ಲುರ್ಟಿ ತೂಕತ್ತರಿ ದೈವಗಳ ಬಾಲಾಲಯ ಪ್ರತಿಷ್ಠೆ ನೆರವೇರಲಿದೆ. ಬೆಳಿಗ್ಗೆ 11.30ಕ್ಕೆ ರುದ್ರಹೋಮ, ಶತ ನಾರಿಕೇಳ ಹೋಮ ಮತ್ತು ಮಹಾಮೃತ್ಯುಂಜಯ ಯಾಗದ ಪೂರ್ಣಾಹುತಿ […]