ರಕ್ತಕ್ಕೆ ಯಾವುದೇ ಜಾತಿಯಿಲ್ಲ, ರಕ್ತದಾನ ಮಾಡಿ ಜೀವ ಉಳಿಸಿ: ಡಾ. ವೀಣಾ.

ಉಡುಪಿ: ರಕ್ತಕ್ಕೆ ಯಾವುದೇ ಜಾತಿ ಇಲ್ಲ, ಅದು ಜೀವ ಉಳಿಸುವ ಅಮೃತ ಎಂದು ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ವೈದ್ಯಾಧಿಕಾರಿ ಡಾ| ವೀಣಾ ಹೇಳಿದರು. ನಿಟ್ಟೆ ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯೂತ್ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಲಯನ್ಸ್ ಕ್ಲಬ್ ಬೆಳ್ಮಣ್, ಲಯನ್ಸ್, ಲಿಯೊ, ಲಯನ್ಸ್ ಕ್ಲಬ್ ಹರ್ಷ ಹಿರಿಯಡ್ಕ, ನಿಟ್ಟೆ ಗಾಜ್ರಿಯಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರಕ್ತನಿಧಿ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ […]

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರವನ್ನು ಸತತವಾಗಿ ಟೀಕೆ ಮಾಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದ ಯತ್ನಾಳ್ ಪದೇ ಪದೇ ಸಿಎಂ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು. ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಲಾಗುತ್ತದೆ, ಉತ್ತರ ಕರ್ನಾಟಕದವರು ಮುಂದಿನ ಸಿಎಂ ಆಗುತ್ತಾರೆ ಎಂಬಿತ್ಯಾದಿ ಹೇಳಿಕೆ ನೀಡಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಈ […]

ದ್ವೇಷ ಹರಡುವ, ನಕಲಿ ಸುದ್ದಿ ತಡೆಗೆ ಅರ್ಜಿ: ಕೇಂದ್ರ ಸರ್ಕಾರ, ಟ್ವೀಟರ್ ಗೆ ಸುಪ್ರೀಂ ಕೋರ್ಟ್ ನೋಟಿಸ್

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಳ್ಳು ಸುದ್ದಿ, ದ್ವೇಷ ಹರಡುವುದು ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹರಡಲಾಗುತ್ತಿದೆ. ಇದನ್ನು ತಡೆಗಟ್ಟಲು ಸೂಕ್ತ ವ್ಯವಸ್ಥೆ ಜಾರಿಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ಕೇಳಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ಗೆ ನೊಟೀಸ್ ಜಾರಿ ಮಾಡಿದೆ. ನ್ಯಾ.ಎಸ್ಎ ಬೋಬ್ಡೆ ಹಾಗೂ ನ್ಯಾ. ಎಎಸ್ ಬೋಪಣ್ಣ ಹಾಗೂ ನ್ಯಾ. ವಿ ರಾಮ ಸುಬ್ರಹ್ಮಣಿಯನ್ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ಕಮ್ಯುನಿಕೇಷನ್ ಇಂಡಿಯಾ […]

ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆ’ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರಂಭಿಸಲಾದ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಶುಕ್ರವಾರ ರಾಜ್ಯಸಭೆಯಲ್ಲಿ ಗ್ರಾಹಕ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ದನ್ವೆ ರೌಸಾಹೇಬ್ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ. ಈ ಯೋಜನೆಯನ್ನು ಕೊರೊನಾ ಅವಧಿಗೆ ಮಾತ್ರ ಮೀಸಲಾಗಿರುವುದರಿಂದ ಅದನ್ನು ಮೀರಿ ಮುಂದುವರಿಯುವ ಯಾವುದೇ ಯೋಜನೆಗಳಿಲ್ಲ ಎಂದು ಅವರು ಹೇಳಿದರು.

ಕ್ರೈಸ್ತ, ಇಸ್ಲಾಮ್ ಗೆ ಮತಾಂತರವಾಗುವ ದಲಿತರಿಗೆ ಮೀಸಲಾತಿ ಇಲ್ಲ: ರವಿಶಂಕರ್ ಪ್ರಸಾದ್

ನವದೆಹಲಿ: ಕ್ರೈಸ್ತ, ಇಸ್ಲಾಮ್ ಗಳಿಗೆ ಮತಾಂತರವಾಗುವ ದಲಿತರಿಗೆ ಮೀಸಲಾತಿಯಡಿಯಲ್ಲಿ ಇರುವ ಯಾವ ಸೌಲಭ್ಯವೂ ಸಿಗುವುದಿಲ್ಲ. ಹಾಗೆ ಅವರು ಮೀಸಲು ಕ್ಷೇತ್ರಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಹಿಂದೂ, ಸಿಖ್, ಬೌದ್ಧ ಮತಗಳನ್ನು ಅನುಸರಿಸುವ ದಲಿತರನ್ನು ಹೊರತುಪಡಿಸಿ, ಕ್ರೈಸ್ತ, ಮುಸಲ್ಮಾನರಾಗಿ ಮತಾಂತರ ಹೊಂದುವ ದಲಿತರಿಗೆ ಮೀಸಲಾತಿಯ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ ಪ್ಯಾರಾ […]