ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಮೇಲೆ ತಲವಾರು ದಾಳಿ

ಸುರತ್ಕಲ್: ಬಿಜೆಪಿ ಕಾರ್ಯಕರ್ತನಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಜ್ ಎಂಬಾತನ ಮೇಲೆ ಇಂದು ಸಂಜೆ ತಂಡವೊಂದು ತಲವಾರು ದಾಳಿ ನಡೆಸಿದೆ. ಸುರತ್ಕಲ್‌ ಕಾಟಿಪಳ್ಳ ಎರಡನೇ ಬ್ಲಾಕ್ ಎಂಬಲ್ಲಿ ಶಕೀಬ್ ಯಾನೆ ಶಬ್ಬು ಸೇರಿದಂತೆ ಇತರೆ ಐದಾರು ಮಂದಿ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಾಟಿಪಳ್ಳ ಪುಳಿತ್ತೂರು ನಾಗಬನದ ಬಳಿಯ ಲೇ ಔಟ್ ಸಮೀಪ ಸಾಗುತ್ತಿದ್ದ ಪಿಂಕಿ ನವಾಜ್ ನನ್ನು ತಂಡ ಬೆನ್ಬಟ್ಟಿ ತಲವಾರು ದಾಳಿ ನಡೆಸಿದೆ. ಶಕೀಬ್ ನೇತೃತ್ವದ ತಂಡ ದಾಳಿ ನಡೆಸಿರುವುದನ್ನು ಪಿಂಕಿ […]

ಉಡುಪಿ: ನಾಳೆ ಬಿಜೆಪಿ ಕಚೇರಿಯಲ್ಲಿ ಸಮರ್ಪಣಾ ದಿನ ಪುಷ್ಪಾರ್ಷನೆ- ನಿಧಿ ಅರ್ಪಣೆ

ಉಡುಪಿ: ರಾಜಕೀಯ ಕ್ಷೇತ್ರದಲ್ಲಿ ಸಚ್ಚಾರಿತ್ರ್ಯ, ದೇಶಭಕ್ತಿ, ಧ್ಯೇಯವಾದ, ಏಕಾತ್ಮ ಮಾನವತಾವಾದ ಹಾಗೂ ಉನ್ನತ ರಾಜಕೀಯ ಮೌಲ್ಯಗಳಿಗೆ ಮೇಲ್ಪಂಕ್ತಿಯಾಗಿ ಇಂದಿಗೂ ಪ್ರೇರಣೆ ನೀಡುತ್ತಿರುವ ಭಾರತೀಯ ಜನಸಂಘದ ಸ್ಥಾಪಕರಲ್ಲಿ ಓರ್ವರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಬಲಿದಾನ ದಿನ ಫೆಬ್ರವರಿ 11ರಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ‘ಸಮರ್ಪಣಾ ದಿನವಾಗಿ’ ಆಚರಿಸಲಾಗುವುದು. ಅದರಂತೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಾಳೆ (ಗುರುವಾರ) ಬೆಳಿಗ್ಗೆ 10 ಗಂಟೆಗೆ ಪಂಡಿತ್ ಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಬಿಜೆಪಿ ಚಟುವಟಿಕೆಗೆ ‘ಸಮರ್ಪಣಾ ನಿಧಿ’ ಅರ್ಪಣೆ ಹಾಗೂ ಉಪನ್ಯಾಸ […]

ಐಸಿಸಿ ಟೆಸ್ಟ್ ಶ್ರೇಯಾಂಕ: ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಕುಸಿತ

ಚೆನ್ನೈ: ಭಾರತ ಚೆನ್ನೈ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 227 ರನ್ ಗಳ ಸೋಲು ಕಂಡ ಬಳಿಕ ಪರಿಷ್ಕೃತ ಐಸಿಸಿ ಟೆಸ್ಟ್ ಶ್ರೇಯಾಂಕ ಫೆ.10 ರಂದು ಪ್ರಕಟವಾಗಿದ್ದು, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಸ್ಥಾನ ಕುಸಿತ ಕಂಡಿದೆ. ಭಾರತದ ಬೌಲರ್ ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪ್ರಿತ್ ಬುಮ್ರ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಸುಧಾರಣೆ ಕಂಡಿದ್ದಾರೆ. ಕೊಹ್ಲಿ 5 ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ್ ಪೂಜಾರಾ 7 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಬೌಲರ್ ಗಳ […]

ಕಾರ್ಕಳ: ಮಹಿಳೆಯಿಂದ ಲಕ್ಷಾಂತರ ರೂಪಾಯಿ ದೋಚಿದ ಖದೀಮ

ಕಾರ್ಕಳ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಖದೀಮನೊಬ್ಬ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಜಯಮ್ಮ (64) ವಂಚನೆಗೆ ಒಳಗಾದವರು. ಇವರಿಗೆ ಬ್ರೋಕರ್ ಒಬ್ಬರ ಮೂಲಕ 2019ರಲ್ಲಿ ಮಂಗಳೂರು ಕೊಟೆಕ್ಯಾರ್ ನಿವಾಸಿ ಅಬ್ದುಲ್ ಖಾದರ್ ಎಂಬಾತನ ಪರಿಚಯವಾಗಿತ್ತು. ಈತ ಜಯಮ್ಮನವರ ಇಬ್ಬರು ಮಕ್ಕಳಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ₹9.60 ಲಕ್ಷ ಹಣವನ್ನು ಬ್ಯಾಂಕ್ ಖಾತೆ ವರ್ಗಾವಣೆ ಮಾಡಿಸಿಕೊಂಡಿದ್ದನು. ಅಲ್ಲದೆ, ₹ 5 ಲಕ್ಷ ಹಣವನ್ನು ನೇರವಾಗಿ ಪಡೆದುಕೊಂಡಿದ್ದನು.ಆದರೆ, ಈವರೆಗೂ ಮಕ್ಕಳಿಗೆ ಉದ್ಯೋಗ […]

ಸಾವಿರ ಕೋಟಿಯ ಗಡಿ ತಲುಪಿದ ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ

ಉಡುಪಿ: ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹವು ಸಾವಿರ ಕೋಟಿ ರೂ.ಗಳ ಗಡಿ ತಲುಪಿದೆ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕಾಗಿ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಕೈಗೊಂಡ ಸಂಚಾರದಿಂದ ಅತೀವ ಸಂತಸವಾಗಿದೆ. ಎಲ್ಲ ವರ್ಗದ ಜನ ತುಂಬು ಉತ್ಸಾಹದಿಂದ ದೇಣಿಗೆ ನೀಡುತ್ತಿರುವುದು ಹಿಂದು ಸಮಾಜದ ಸಂಘಟನಾತ್ಮ ದೃಷ್ಟಿಯಿಂದ ಒಂದು ಮಹತ್ವದ ಬೆಳವಣಿಗೆಯಾಗಿದೆ ಎಂದರು. ಜಾತಿಯಾಧಾರಿತ ಮೀಸಲಾತಿಗಾಗಿ ಹೋರಾಟ ಸರಿಯಲ್ಲ. ಆರ್ಥಿಕತೆಯ ಆಧಾರದಲ್ಲಿ ಹಿಂದುಳಿದವರಿಗೆ ನ್ಯಾಯ ಸಿಗಲು […]