ಮನೆಯಲ್ಲೇ ರೆಡಿಯಾಗೋ ಈ ಜೀರಾ ಸೋಡ, ಒಮ್ಮೆ ಕುಡಿದು ನೋಡಾ!
ಚಳಿಗಾಲ ಮುಗಿಯುವ ಹೊತ್ತು, ಬೇಸಿಗೆ ಸೂರ್ಯನ ಬಿಸಿಯಾದ ಝಳ ಮೈಯ ಸುಡುತ್ತಿದ್ದರೆ ಜನರೆಲ್ಲಾ ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ . ಅದರಲ್ಲೂ ಕರಾವಳಿಯ ಬಿಸಿಲು ಮಾತ್ರ ಇನ್ನೂ ಹೆಚ್ಚಿನ ಉಷ್ಣತೆಗೆ ಕಾರಣವಾಗುತ್ತದೆ. ಕೋಲ್ಡ್ ,ಪೆಪ್ಸಿ, ಕೋಕ್ ನಂತಹ ಕಾಲದಲ್ಲಿ ಇಲ್ಲೊಂದು ಸ್ಥಳಿಯ ಮಟ್ಟದ ಉತ್ಪನ್ನವೊಂದು ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ. ಅದರ ಹೆಸರು ಅವನಿ ಸಾಫ್ಟ್ ಡ್ರಿಂಕ್ಸ್. ಮನೆಯಲ್ಲೇ ತಯಾರಿಸುವ ಜೀರಾ ಸೋಡವಿದು. ಉಡುಪಿ ಕೊಡವೂರು ರಸ್ತೆಯಲ್ಲಿರುವ ಮನೆಯಲ್ಲಿಯೆ ಕಳೆದ ಹದಿನೈದು ವರ್ಷಗಳಿಂದ ಅಮರನಾಥ್ ಅವರು ಪಾನೀಯ ಸಂಸ್ಥೆಯನ್ನು […]
ಫೆ. 14ರಿಂದ 21ರ ವರೆಗೆ ಕೊಡವೂರು ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಪುನಃ ಪ್ರತಿಷ್ಠೆ, ಬ್ರಹ್ಮ ಕುಂಭಾಬಿಷೇಕ
ಉಡುಪಿ: ಕೊಡವೂರು ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ನವೀಕೃತ ಗರ್ಭಗುಡಿ ಮತ್ತು ಸುತ್ತುಪೌಳಿ ಸಮರ್ಪಣಾ ಪೂರ್ವಕ ಸಪರಿವಾರ ಶ್ರೀ ಬ್ರಹ್ಮ, ಶ್ರೀ ವೀರಭದ್ರ ದೇವರುಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮ ಕುಂಭಾಬಿಷೇಕವು ಫೆಬ್ರವರಿ 14 ರಿಂದ 21ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಟಿ. ರಾಘವೇಂದ್ರ ರಾವ್ ಕೊಡವೂರು ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 14ರಂದು ಮಧ್ಯಾಹ್ನ 2.30ಕ್ಕೆ ಕೊಡವೂರು […]
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 227 ರನ್‌ಗಳ ಸೋಲು
ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 227 ರನ್‌ಗಳ ಸೋಲು ಕಂಡಿದೆ. ಇಂಗ್ಲೆಂಡ್ ನೀಡಿದ್ದ 420 ರನ್‌ಗಳ ಗುರಿ ಬೆನ್ನತ್ತಿದ ಕೊಹ್ಲಿ ಪಡೆ 192 ರನ್‌ಗಳಿಗೆ ಆಲೌಟ್ ಆಯಿತು. ಭಾರತ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿತ್ತು. ಐದನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹೊರತುಪಡಿಸಿ ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಅವರ 72, ಶುಭಮನ್ ಗಿಲ್ […]
ಉದ್ಯಾವರ: ಜಿಲ್ಲಾ ಮಟ್ಟದ ಭಜನಾ ಕಮ್ಮಟ; ಸಾಧಕರಿಗೆ ಸಮ್ಮಾನ
ಉಡುಪಿ: ಉದ್ಯಾವರ ಶ್ರೀ ವೀರವಿಠ್ಠಲ ದೇವಸ್ಥಾನ ಆಡಳಿತ ಮಂಡಳಿಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಾಯಾ ಕಾಮತ್ ಈಶ್ವರನಗರ ಮಣಿಪಾಲ ಸಂಯೋಜನೆಯೊಂದಿಗೆ ಉಡುಪಿ ಜಿಲ್ಲಾ ಮಟ್ಟದ ಭಜನಾ ಕಮ್ಮಟ ಭಾನುವಾರ ಉದ್ಯಾವರದ ಶ್ರೀ ವೀರ ವಿಠ್ಠಲ ದೇವಸ್ಥಾನದ ಶ್ರೀ ಸುಕೃತಿಂದ್ರ ಕಲಾಮಂಟಪದಲ್ಲಿ ನಡೆಯಿತು. ಗುರುತಿಲಕ ಎಂ.ಎಸ್. ಗಿರಿಧರ್ ಬೆಂಗಳೂರು ಅವರು ಭಜನಾ ಕಮ್ಮಟ ನಡೆಸಿಕೊಟ್ಟರು. ವೀರ ವಿಠ್ಠಲ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ನಾಗೇಶ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಯು. ವಿದ್ಯಾವಂತ, ಆಚಾರ್ಯ ಉಡುಪಿ, […]
ತಾಯಿಯನ್ನು ಉಳಿಸಿಕೊಳ್ಳಲು ಆಗುವುದಿಲ್ಲವೆಂದು ನೊಂದ ಮಗ ಆತ್ಮಹತ್ಯೆಗೆ ಶರಣು
ಬಂಟ್ವಾಳ: ತಾಯಿಯ ದಯನೀಯ ಸ್ಥಿತಿಯನ್ನು ಕಂಡು ವಿಚಲಿತನಾದ ಮಗ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ವರದಿಯಾಗಿದೆ. ಆನಂತಾಡಿ ಪಂತಡ್ಕ ನಿವಾಸಿ ನೀರಜ್ ಮೃತ ದುರ್ದೈವಿ. ನೀರಜ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯರು ಇವರನ್ನ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ತಾಯಿಯನ್ನು ಉಳಿಸೋದಕ್ಕೆ ಆಗೋದಿಲ್ಲ ಎಂದು ಮಾನಸಿಕವಾಗಿ ನೊಂದ ನೀರಜ್, ಸೋಮವಾರ ವಾಟ್ಸಾಪ್ ನಲ್ಲಿ ‘ ಓ ಯಮ ದೇವನೇ, ಹೆತ್ತ ತಾಯಿ ಸಾಯೋ […]