ಮಣಿಪಾಲ: ನರಸಿಂಗೆ ದೇವಳದಲ್ಲಿ ಯಕ್ಷಗಾನ ತರಬೇತಿ ಶಾಲೆ ಉದ್ಘಾಟನೆ

ಉಡುಪಿ: ಮಣಿಪಾಲ ಶ್ರೀ ನರಸಿಂಹ ದೇವಸ್ಥಾನದಲ್ಲಿ ಬಡಗುತಿಟ್ಟಿನ ಯಕ್ಷಗಾನ ತಾಳ ನಾಟ್ಯ, ಕಲಿಕಾ ಶಾಲೆ ತರಗತಿಯನ್ನು ಭಾನುವಾರ ಉದ್ಘಾಟನೆಗೊಂಡಿತು. ಉಡುಪಿ ನಗರಸಭಾ ಅಧ್ಯಕ್ಷ್ಯ ಸುಮಿತ್ರ್ರಾ ಆರ್. ನಾಯಕ್ ಉದ್ಘಾಟಿಸಿ ಶುಭ ಕೋರಿದರು. ಸಭಾಧ್ಯಕ್ಷತೆ ವಹಿಸಿದ್ದ ದೇವಳದ ಮುಕ್ತೇಸರರಾದ ರಮೇಶ್ ಸಾಲ್ವಂಕಾರ್ ಮಾತನಾಡಿ, ಯಕ್ಷಗಾನ ಒಂದು ಪರಿಪೂರ್ಣ ಕಲೆ. ಇಲ್ಲಿ ಗಾಯನ, ವಾದನ, ನರ್ತನ, ವೇಷಭೂಷಣ, ಮಾತುಗಾರಿಗೆ, ಮುಖವರ್ಣಿಕೆ ಬಣ್ಣ ಎಲ್ಲವೂ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವ ಧೀಮಂತ ಕಲೆ ಎಂದು ಬಣ್ಣಿಸಿ ಆರಂಭೊತ್ಸವಕ್ಕೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ […]

ಉಡುಪಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಯುವಕನ ಮೃತದೇಹ ಪತ್ತೆ

ಉಡುಪಿ: ಇಲ್ಲಿನ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ದಂಡೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಪರಿಚಿತ ಯುವಕನೊಬ್ಬನ ಮೃತದೇಹ ಇಂದು ಪತ್ತೆಯಾಗಿದೆ. ಮೃತ ಯುವಕನನ್ನು ಕಾರ್ಕಳ ರಂಗನಪಲ್ಕೆಯ ನಿವಾಸಿ ಅಕ್ಷತ್ (28) ಎಂದು ಗುರುತಿಸಲಾಗಿದೆ. ಈತ ನಗರಸಭೆ ವಾರ್ಡುಗಳಲ್ಲಿ ಮನೆಯಿಂದ ಕಸ ಸಂಗ್ರಹಿಸುವ ಗುತ್ತಿಗೆದಾರರ ಬಳಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಎಂದು ತಿಳಿದುಬಂದಿದೆ. ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮೃತನ ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರು‌. ಬಳಿಕ ಯುವಕನ ಸಂಬಂಧಿಕರನ್ನು ಪತ್ತೆಹಚ್ಚಲು ಸಾಮಾಜಿಕ ಜಾಲತಾಣದಲ್ಲಿ […]

ಇಂಗ್ಲೆಂಡ್ 178ಕ್ಕೆ ಆಲೌಟ್: ಭಾರತಕ್ಕೆ 420 ರನ್ ಗುರಿ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (61ಕ್ಕೆ 6 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ್ದು, ಕೇವಲ 178 ರನ್‌ಗಳಿಗೆ ಆಲೌಟ್ ಆಗಿದೆ. ಆದರೂ ಭಾರತದ ಗೆಲುವಿಗೆ 420 ರನ್‌ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ಒಡ್ಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 241 ರನ್‌ಗಳ ಭಾರಿ ಮುನ್ನಡೆ ಸಾಧಿಸಿತ್ತು. ಭಾರತಕ್ಕೆ ಫಾಲೋಆನ್ ಹೇರದೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆಗೆ […]

ಪಿಕಪ್-ಸ್ಕೂಟರ್ ಡಿಕ್ಕಿ: ಸಿಂಧೂ ಸಾಫ್ಟ್ ಡ್ರಿಂಕ್ಸ್ ಮಾಲೀಕರ ಪುತ್ರ ಮೃತ್ಯು

ಪುತ್ತೂರು: ಮಹೀಂದ್ರಾ ಪಿಕಪ್ ಹಾಗೂ ಟಿವಿಎಸ್ ಜುಪಿಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ಮೊಟ್ಟೆತ್ತಡ್ಕ ಎಂಬಲ್ಲಿ ಸೋಮವಾರ ನಡೆದಿದೆ. ಸಾಮೆತ್ತಡ್ಕ ನಿವಾಸಿ ಸಿಂಧೂ ಸಾಫ್ಟ್ ಡ್ರಿಂಕ್ಸ್ ನ ಮಾಲೀಕ ಕರುಣಾಕರ್ ಅವರ ಪುತ್ರ ಪ್ರಸಾದ್ ಮೃತ ದುರ್ದೈವಿ. ಘಟನೆಯಲ್ಲಿ ಜುಪಿಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಪುತ್ತೂರು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ಫಾರ್ಚೂನ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್: ವಿವಿಧ ವೃತ್ತಿಪರ ಕೋರ್ಸ್ ಗಳ ಉದ್ಘಾಟನಾ ಸಮಾರಂಭ

ಬ್ರಹ್ಮಾವರ: ಬ್ರಹ್ಮಾವರದ ಮಧುವನ್ ಕಾಂಪ್ಲೆಕ್ಸ್ ನಲ್ಲಿರುವ ಫಾರ್ಚೂನ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ಸಂಸ್ಥೆಯಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗಳ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಾಪುರ ಕ್ಷೇಮಧಾಮ ಮತ್ತು ಆಯುಷ್ ಧಾಮದ ವ್ಯವಸ್ಥಾಪಕ ನಿರ್ದೇಶಕ ವಿನಯಚಂದ್ರ ಶೆಟ್ಟಿ ಅವರು, ವೈದ್ಯಕೀಯ ಮತ್ತು ಅರೆವೈದ್ಯಕೀಯ ಕಾರ್ಯಪಡೆಯ ಮಹತ್ವವನ್ನು ವಿವರಿಸಿದರು. ಕಾಲೇಜಿನ ಅಧ್ಯಕ್ಷ ಡಾ. ದಿವಿಕ್ ಶೆಟ್ಟಿ ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಪರ ಕೋರ್ಸ್ ಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ವ್ಯವಸ್ಥಾಪಕ ಟ್ರಸ್ಟಿ ತಾರನಾಥ್ […]