ತಮಿಳುನಾಡಿನ ಕಂಚಿ ಕಾಮಕೋಟಿ ಪೀಠ: ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನ
ಚೆನ್ನೈ: ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಇಂದು ನಿಧಿ ಸಂಗ್ರಹ ಅಭಿಯಾನ ನಡೆಯಿತು. ಕಂಚಿ ಕಾಮಕೋಟಿ ಮಠದ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಸದಸ್ಯರು ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಕೋಶಾಧಿಕಾರಿ ಗೋವಿಂದಗಿರಿ ಮಹಾರಾಜ್, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಚಿ ಮಠದ ಭಕ್ತ ಉದ್ಯಮಿ ಮೋಹನ್ ಮಂದಿರ ನಿರ್ಮಾಣಕ್ಕೆ ₹5 […]
ಕರಂಬಳ್ಳಿ ವೆಂಕಟರಮಣ ದೇವರಿಗೆ ವಿಶೇಷ ಅಲಂಕಾರ
ಉಡುಪಿ: ಇಲ್ಲಿನ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವದ ಅಂಗವಾಗಿ ಅರ್ಚಕ ನವೀನ್ ಐತಾಳ ಅವರು ವೆಂಕಟರಮಣ ದೇವರಿಗೆ ವಿಶೇಷ ಅಲಂಕಾರ ಮಾಡಿದರು.
ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ: ಬಾಲಕಿಯ ಚಿಕ್ಕಮ್ಮ ಸಹಿತ 17 ಮಂದಿಯ ವಿರುದ್ಧ ದೂರು ದಾಖಲು
ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯ ಮೇಲೆ 17 ಮಂದಿ ನಿರಂತರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ 17 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಸ್ಮೈಲ್ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್ ಆನೆಗುಂದ, ವಿಕಾಸ್ ಹೊಳಿಕೊಪ್ಪ, ಮಣಿಕಂಠ ಹೊಳಿಕೊಪ್ಪ, ಸಂಪತ್ ನೆಮ್ಮಾರ್, ಅಶ್ವಥ್ ಗೌಡ ಶೃಂಗೇರಿ, ರಾಜೇಶ್ ಆನೆಗುಂದ, ಅಮಿತ್ ಆನೆಗುಂದ, ಸಂತೋಷ ಕುರುಬಗೆರೆ, ದೀಕ್ಷಿತ್ ಹೆಗ್ಗದ್ದೆ, ಸಂತೋಷ್ ಹೆರೂರು, ನಿರಂಜನ್ ಕಿಗ್ಗ, […]
ಗೆಳೆಯರ ಬಳಗ ಕಾಜಾರಗುತ್ತು ವತಿಯಿಂದ ಬಡ ವಿಶಿಷ್ಟ ಚೇತನ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವು
ಹಿರಿಯಡಕ: ಗೆಳೆಯರ ಬಳಗ ಕಾಜಾರಗುತ್ತು ಕಳೆದ ಐದು ವರ್ಷಗಳಿಂದ ಅಶಕ್ತರಿಗೆ ನೆರವಾಗುತ್ತಿದೆ. ಇಂತಹ ಕಾರ್ಯ ಮುಂದಿನ ದಿನಗಳಲ್ಲೂ ಸಂಘದಿಂದ ನೆರವೇರಲಿ ಎಂದು ಕಾಜಾರಗುತ್ತು ಸ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವೇಂದ್ರ ನಾಯಕ್ ಮುತ್ತೂರು ಹೇಳಿದರು. ಅವರು ಇಂದು ಗೆಳೆಯರ ಬಳಗ ಕಾಜಾರಗುತ್ತು ವತಿಯಿಂದ ಬಡ ವಿಶಿಷ್ಟ ಚೇತನ ಮಕ್ಕಳ ವೈದ್ಯಕೀಯ ನೆರವಿಗಾಗಿ ಹಾಗೂ ಶಾಲಾಭಿವೃದ್ಧಿ ನಿಧಿಗಾಗಿ ನಡೆಸುವ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದರು. ಈ ಸಂದರ್ಭದಲ್ಲಿ ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ […]
ಕೇಂದ್ರ ಬಜೆಟ್: ಯಾವುದು ಅಗ್ಗ?, ಯಾವುದು ದುಬಾರಿ.?; ಇಲ್ಲಿದೆ ವಿವರ
ದೆಹಲಿ: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದರು. ಕೃಷಿ ಸೆಸ್, ಸುಂಕ ಹೆಚ್ಚಳ ಜಾರಿಯಾಗುತ್ತಿರುವುದರಿಂದ ಹಲವು ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಲಿದೆ. ಈ ಸಾಲಿನ ಬಜೆಟ್‌ನಲ್ಲಿ ಬೆಲೆ ಇಳಿಕೆಗಿಂತ ದುಬಾರಿಯಾಗಿರುವ ವಸ್ತುಗಳ ಪಟ್ಟಿಯೇ ದೊಡ್ಡದಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 2.5 ಏರಿಕೆಯಾಗಿದ್ದು, ಲೀಟರ್ ಡೀಸೆಲ್ ಬೆಲೆ ₹ 4 ಏರಿಕೆ ಆಗಿದೆ. ಮದ್ಯದ ಮೇಲೆ ಶೇ 100, ಕಚ್ಚಾ ತಾಳೆಎಣ್ಣೆ ಮೇಲೆ ಶೇ 17.5 […]