ಪೇಜಾವರ ಶ್ರೀಗಳ ಮನವಿಗೆ ಸರಕಾರ ಸ್ಪಂದನೆ; ಗೋಮಾಳ ಭೂಮಿ ಗೋಶಾಲೆಗಳಿಗೆ ನೀಡಲು ಅಸ್ತು

ಉಡುಪಿ: ರಾಜ್ಯದಲ್ಲಿನ ಗೋಮಾಳ ಭೂಮಿಗಳನ್ನು ಆಯಾ ಜಿಲ್ಲೆಗಳಲ್ಲಿನ ನೊಂದಾಯಿತಾ ಗೋಶಾಲೆಗಳ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ನಿಯಮಾವಳಿಗಳೊಂದಿಗೆ ನೀಡುವ ಕುರಿತಂತೆ ಕಂದಾಯ ಸಚಿವ ಆರ್. ಅಶೋಕ್ ಸಮ್ಮತಿ ಸೂಚಿಸಿದ್ದಾರೆ. ಈ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮಗೆ ಸಲ್ಲಿಸಿದ ಪತ್ರವನ್ನು ಸೋಮವಾರ ಉಡುಪಿಯಲ್ಲಿ ಸ್ವೀಕರಿಸಿ, ಸಮ್ಮತಿ ನೀಡಿದರು. ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಿರುವುದರಿಂದ ಗೋ ರಕ್ಷಣೆಯ ಕಾರ್ಯಗಳಿಗೂ ಸರಕಾರ ಹೆಚ್ಚು ಗಮನ ಹರಿಸಬೇಕಾಗಿದೆ. ಗೋಮಾಳ ಭೂಮಿಗಳು ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅತಿಕ್ರಮಣಗೊಂಡಿವೆ. […]