ಸಹಕಾರ ಭಾರತಿ ಗ್ರಾಮ ವಿಕಾಸದ ಕಡೆಗೆ ಹೆಚ್ಚಿನ ಒತ್ತು ನೀಡಲಿ: ಜಿತೇಂದ್ರ ಪ್ರತಾಪನಗರ
ಬ್ರಹ್ಮಾವರ: ಗ್ರಾಮೀಣ ಪ್ರದೇಶ ಭಾರತೀಯ ಸಂಸ್ಕೃತಿಯ ಬುನಾದಿ. ಸಹಕಾರಿ ಸಂಘವು ಒಂದು ಗ್ರಾಮವನ್ನು ದತ್ತು ಪಡೆದುಕೊಂಡು ಪರಿಪೂರ್ಣ ಗ್ರಾಮವಿಕಾಸ ಯೋಜನೆಯಡಿ ಕೆಲಸ ಮಾಡಿದರೆ ಈ ದೇಶ ರಾಮರಾಜ್ಯ ಆಗಲು ಸಾಧ್ಯ. ಈ ದಿಸೆಯಲ್ಲಿ ಸಹಕಾರ ಭಾರತಿ ಗ್ರಾಮ ವಿಕಾಸದ ಕಡೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಗ್ರಾಮ ವಿಕಾಸ ವಿಭಾಗ ಪ್ರಮುಖ್ ಜಿತೇಂದ್ರ ಪ್ರತಾಪನಗರ ಹೇಳಿದರು. ಸಹಕಾರ ಭಾರತಿ ಬ್ರಹ್ಮಾವರ ತಾಲೂಕು ಇದರ ವತಿಯಿಂದ ಸೈಬ್ರಾಕಟ್ಟೆಯ ಹೋಟೆಲ್ ಸ್ವಾಗತ ಸಭಾಂಗಣದಲ್ಲಿ ಭಾನುವಾರ ನಡೆದ ಸಹಕಾರ ಭಾರತಿಯ […]
ಅತ್ತೂರು ವಾರ್ಷಿಕ ಮಹೋತ್ಸವ: ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ
ಕಾರ್ಕಳ: ಕೋವಿಡ್ 19 ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಈ ಬಾರಿಯ ಅತ್ತೂರು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವದಲ್ಲಿ ಅಂಗಡಿ-ಮುಂಗಟ್ಟು, ಜಾತ್ರೆ-ಸಂತೆಗಳಿಗೆ ಅವಕಾಶ ನೀಡಿಲ್ಲ. ಆದರೂ ಪ್ರತಿವರ್ಷದಂತೆ ಕ್ಷೇತ್ರದಲ್ಲಿ ಜನಸಂದಣಿ ಇಲ್ಲದಿದ್ದರೂ ಗಣನೀಯ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಸಂತೆಯಲ್ಲಿ ತಿರುಗಾಡುವುದಕ್ಕೆ ಅಲ್ಲ, ಸಂತರಿಗಾಗಿ ಅತ್ತೂರು ಪುಣ್ಯಕ್ಷೇತ್ರ ಬಂದಿದ್ದೇವೆ ಎಂಬ ಮಾತುಗಳು ಭಕ್ತಾದಿಗಳಿಂದ ಸಾಮಾನ್ಯವಾಗಿ ಕೇಳಿಬರುತ್ತಿವೆ. ಜ. 18ರಿಂದ ಆರಂಭಗೊಂಡಿರುವ ಅತ್ತೂರು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವದ ಆರನೇ ದಿನವಾದ ಭಾನುವಾರ ಐದು ಬಲಿಪೂಜೆ ನೆರವೇರಿದ್ದು, […]
ಅತ್ತೂರು ವಾರ್ಷಿಕ ಮಹೋತ್ಸವದ ಎಂಟನೇ ದಿನ: ಎಲ್ಲರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಿ- ಬಿಷಪ್ ಅಲೋಷಿಯಸ್ ಪಾವ್ಲ್
ಅತ್ತೂರು: ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಅಪರಿಚಿತ ಮನುಷ್ಯನನ್ನು ಎತ್ತಿ, ಉಪಚರಿಸಿ ಶುಶ್ರೂಷೆ ಮಾಡುವ ಸೇವಕನಂತೆ ನಾವು ಕೂಡ ಧರ್ಮ, ಗಡಿ ಹಾಗೂ ಸಂಸ್ಕೃತಿಯ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜಾ ಅಭಿಪ್ರಾಯಪಟ್ಟರು. ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದ ಎಂಟನೇ ದಿನವಾದ ಸೋಮವಾರ ಪ್ರಮುಖ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎಂಟನೇ ದಿನವಾದ ಸೋಮವಾರದಂದು ನಿಗದಿತ ಐದು ಬಲಿಪೂಜೆಗಳು […]
ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆ
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ರಾಮಯ್ಯ 2020ರ ಜುಲೈನಲ್ಲಿ ಕೂಡ ಆತ್ಮಹತ್ಯೆ ಯತ್ನ ಮಾಡಿದ್ದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ನಟ ಸುದೀಪ್ ಕೂಡ ಸಾಂತ್ವನದ ಮಾತುಗಳನ್ನಾಡಿದ್ದರು. ಕಳೆದ ಒಂದು ವಾರದಿಂದಲೂ ವೃದ್ಧಾಶ್ರಮದಲ್ಲಿ ವಾಸವಾಗಿದ್ದರು. ಇಂದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಶ್ರೀ ರಾಮಯ್ಯ ಬಿಗ್ಬಾಸ್ […]
ಮೂಢನಂಬಿಕೆ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ಪ್ರಾಂಶುಪಾಲ ದಂಪತಿ
ಮದನಪಲ್ಲಿ: ಮೂಢನಂಬಿಕೆಯ ಕೂಪಕ್ಕೆ ಜೋತುಬಿದ್ದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ದಂಪತಿಗಳು ತಾವು ಹೆತ್ತು ಸಾಕಿದ ಇಬ್ಬರು ಹೆಣ್ಣುಮಕ್ಕಳನ್ನು ಬಲಿಕೊಟ್ಟ ಅಮಾನವೀಯ ಕೃತ್ಯ ಆಂಧ್ರಪ್ರದೇಶದ ಮದನಪಲ್ಲಿ ಹೊರವಲಯದಲ್ಲಿರುವ ಶಿವ ನಗರದ ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಶಿವನಗರದ ಶ್ರೀ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಿವಾಸಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಎಂಬುವವರೇ ಈ ನೀಚಾ ಕೃತ್ಯ ಎಸಗಿದ ದಂಪತಿ. ಇಬ್ಬರೂ ಉನ್ನತ ಶಿಕ್ಷಣ ಪಡೆದವರಾಗಿದ್ದು, ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲೆಯಾಗಿದ್ದರೆ ಪುರುಷೋತ್ತಮ್ ಸರ್ಕಾರಿ […]