ಉಡುಪಿ: ನಾಳೆ ರೈತರ ಚಳವಳಿ ಬೆಂಬಲಿಸಿ ಕಾಲ್ನಡಿಗೆ ಜಾಥ
ಉಡುಪಿ: ರೈತ ವಿರೋಧಿ ಕರಾಳ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ದೇಶವ್ಯಾಪಿ ನಡೆಸುತ್ತಿರುವ ಚಳವಳಿಗೆ ಬೆಂಬಲವಾಗಿ ಉಡುಪಿಯ ಸಾಮಾಹಿಕ ಸಂಘಟನೆಗಳ ಐಕ್ಯ ವೇದಿಕೆಯ ನೇತೃತ್ವದಲ್ಲಿ ನಾಳೆ (ಜ. 26) ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಜಾಥವು ಅಂದು ಮಧ್ಯಾಹ್ನ 3.30ಕ್ಕೆ ಉಡುಪಿಯ ಬೋರ್ಡ್ ಹೈಸ್ಕೂಲ್ ನಿಂದ ಆರಂಭಗೊಂಡು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಸಮಾಪ್ತಿಗೊಳ್ಳಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸುಂದರ್ ಮಾಸ್ತರ್, ಶ್ಯಾಮ್ ರಾಜ್ ಬಿರ್ತಿ ಹಾಗೂ ಜಿಲ್ಲಾ ಮಸ್ಲಿಮ್ ಒಕ್ಕೂಟದ ಹುಸೇನ್ […]
ಸಮಾಜದ ಶೋಷಿತರ, ದೀನದಲಿತರ ಸೇವೆಯಲ್ಲಿ ತೊಡಗಿಕೊಳ್ಳಿ: ಕುಂಬ್ಳೆಕಾರ್
ಉಡುಪಿ: ಸಹಕಾರ ಭಾರತಿ ಉಡುಪಿ ತಾಲೂಕು ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ದಿನೇಶ್ ಹೆಗ್ಡೆ ಆತ್ರಾಡಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಉಡುಪಿ ನಿರ್ಮಾಣ ಸೌಹಾರ್ದ ಸಹಕಾರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ವಿಭಾಗ ಸಂಘಟನಾ ಪ್ರಮುಖ ಕುಂಬ್ಳೆಕಾರ್ ಮೋಹನ್ ಕುಮಾರ್, ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಪ್ರಯುಕ್ತ ಪರಾಕ್ರಮ ದಿನಾಚರಣೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರ ಸಾವರ್ಕರ್ ಅವರ ದೇಶ ಭಕ್ತಿಯ ಬಗ್ಗೆ ತಿಳಿಸಿದರು. ಮುಂದಿನ ನವ ಪೀಳಿಗೆಗೆ […]
ಪರ್ಪಲೆಗಿರಿ: ಫೆ. 14ಕ್ಕೆ ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ನೇಮೋತ್ಸವ
ಅತ್ತೂರು: ಇಲ್ಲಿನ ಪರ್ಪಲೆಗಿರಿಯಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ಸಪರಿವಾರ ದೈವಗಳ ಸನ್ನಿಧಾನದ ಜೀರ್ಣೋದ್ಧಾರದ ಅಂಗವಾಗಿ ಫೆಬ್ರವರಿ 14ರಂದು ಕಲ್ಕುಡ-ಕಲ್ಲುರ್ಟಿ- ತೂಕತ್ತರಿ ದೈವಗಳ ನೇಮೋತ್ಸವ, ಅಷ್ಟೋತ್ತರ ಶತನಾರಿಕೇಳ ಮಹಾಗಣಪತಿ ಯಾಗ, ಸಂಜೀವಿನಿ ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನಡೆಯಲಿದೆ. ಅಂದು ಬಿಳಿಗ್ಗೆ 8ರಿಂದ ಮಹಾಗಣಪತಿ ಯಾಗ, ಮಹಾಮೃತ್ಯುಂಜಯ ಯಾಗ ಹಾಗೂ ರುದ್ರ ಹೋಮ ನೆರವೇರಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8ಗಂಟೆಗೆ ಕಲ್ಕುಡ-ಕಲ್ಲುರ್ಟಿ-ತೂಕತ್ತರಿ ದೈವಗಳ ನೇಮೋತ್ಸವ ಜರುಗಲಿದೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಕಳ […]
ಮತ್ತೆ ಸಚಿವ ಖಾತೆ ಬದಲಾವಣೆ: ಅಸಮಾಧಾನಗೊಂಡ ಮಾಧುಸ್ವಾಮಿ, ಆನಂದಸಿಂಗ್ ರಾಜೀನಾಮೆಗೆ ಚಿಂತನೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ಕೆಲವು ಸಚಿವರ ಖಾತೆಗಳನ್ನು ಪುನಃ ಬದಲಾವಣೆ ಮಾಡಿದ ಬೆನ್ನಲ್ಲೆ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ಆನಂದಸಿಂಗ್ ಅಸಮಾಧಾನ ಹೊರಹಾಕಿದ್ದು, ಇಬ್ಬರು ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಖಾತೆ ತೆಗೆದುಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಡಾ. ಕೆ. ಸುಧಾಕರ್ ಅವರನ್ನು ಸಮಾಧಾನ ಪಡಿಸಲು ಮತ್ತೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸಿಎಂ ಮರಳಿ ನೀಡಿದ್ದಾರೆ. ಮಾಧುಸ್ವಾಮಿ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂದಕ್ಕೆ ಪಡೆದರೆ, ಆನಂದ್ ಸಿಂಗ್ ಅವರಿಂದ ಪರಿಸರ […]
ನನ್ನನ್ನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಕೆಳಗಿಳಿಸಬಹುದು.?
ಪಟ್ನಾ: ಬಿಹಾರದ ಜನನಾಯಕ ಕರ್ಪೂರಿ ಠಾಕೂರ್ ರೀತಿಯಲ್ಲಿ ನನ್ನನ್ನು ಸಹ ಮಧ್ಯದಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ. ಬಿಹಾರ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರ ಜಯಂತ್ಯೋತ್ಸವ ಪ್ರಯುಕ್ತ ಜೆಡಿಯು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿತೀಶ್ ಮಾತನಾಡಿದರು. ಕರ್ಪೂರಿ ಠಾಕೂರ್ ಸಹ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿದ್ದರು. ಅದರ ಹೊರತಾಗಿಯೂ ಅವರನ್ನು ಎರಡೇ ವರ್ಷಗಳಲ್ಲಿ ಸಿಎಂ ಪದವಿಯಿಂದ ಕೆಳಗಿಳಿಸಲಾಗಿತ್ತು. ಅದೇ ರೀತಿ ನಾನು ಸಹ […]