ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ
ಬ್ರಿಸ್ಬೇನ್: ಆರಂಭಿಕ ಆಟಗಾರ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ಅರ್ಧಶತಕದ ನೆರವಿನಿಂದ ಬ್ರಿಸ್ಬೇನ್ ನ ಗಾಬ್ಬಾ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ನಲ್ಲಿ ಭಾರತ ತಂಡ ಮೂರು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 328 ರನ್ ಗುರಿ ಪಡೆದ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್ 91, ಚೇತೇಶ್ವರ ಪೂಜಾರ 56 […]
ಉಡುಪಿ ಬಿಗ್ ಬಜಾರ್: ಮಹಾ ಉಳಿತಾಯದ 6 ದಿನಗಳು
ಉಡುಪಿ: ಉಡುಪಿ ಬಿಗ್ ಬಜಾರ್ ನಲ್ಲಿ ‘ಮಹಾ ಉಳಿತಾಯದ ಆರು ದಿನಗಳು’ ನಡೆಯಲಿದ್ದು, ಜನವರಿ 26ರಿಂದ 31ರ ವರೆಗೆ ಈ ಆಫರ್ ದಿನಗಳು ಇರಲಿದೆ. ಈ ಆಫರ್ ನ ಲಾಭ ಪಡೆಯಲು ಗ್ರಾಹಕರು ಮುಂಚಿತವಾಗಿ ಅಂದರೆ ಜ. 23ರೊಳಗೆ ₹ 2500 ಆನ್ ಲೈನ್ ಮೂಲಕ (www.shop.bigbazaar.com) ಅಥವಾ ಪ್ಯೂಚರ್ ಪೇ ಆ್ಯಪ್ ಬಳಸಿ ಖರೀದಿ ಮಾಡಿದರೆ ₹1000 ಮೂರು ವೋಚರ್ ಗಳು ಸಿಗುತ್ತದೆ. (₹1000*3) ಇದು ಅಧಿಕ ಶೇ.20ರಷ್ಟು ಲಾಭದಾಯಕವಾಗಿರುತ್ತದೆ. ಇದನ್ನು ಬಿಗ್ ಬಜಾರ್ ನಲ್ಲಿ […]
ರಾಜ್ಯದಲ್ಲಿ ಶೀಘ್ರವೇ 6 ಸಾವಿರ ಪಶುವೈದ್ಯರ ನೇಮಕ: ಸಚಿವ ಪ್ರಭು ಚೌಹಾಣ್
ಉಡುಪಿ: ರಾಜ್ಯದಲ್ಲಿ ಶೀಘ್ರವೇ 6 ಸಾವಿರ ಪಶುವೈದ್ಯರ ನೇಮಕ ಮಾಡಲಾಗುವುದು. ಹಾಗೆ ತಾಲೂಕುವಾರು ಎರಡು ಗೋಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದರು. ಉಡುಪಿ ಪೇಜಾವರ ಮಠಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಗೋಹತ್ಯೆ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಹಾಗೂ ಗೋರಕ್ಷಣೆಯ ಉಪಕ್ರಮಗಳ ಕುರಿತು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳೊಂದಿಗ ಮಹತ್ವದ ಸಮಾಲೋಚನೆ ನಡೆಸಿದರು. ಗೋಮಾಳ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಗೋಶಾಲೆಗಳಿಗೆ ಪರಭಾರೆ ಮಾಡುವ ಬಗ್ಗೆ ಮತ್ತು ದೇವಳಗಳ ಹಾಗೂ […]