ಉಡುಪಿ: ಇಂದು ಪರ್ಯಾಯ ಪಂಚ ಶತಮಾನೋತ್ಸವ; ಸಿಎಂ ಯಡಿಯೂರಪ್ಪನವರಿಂದ ‘ವಿಶ್ವಪಥ’ಕ್ಕೆ ಚಾಲನೆ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠ ವತಿಯಿಂದ ಪರ್ಯಾಯ ಪಂಚ ಶತಮಾನೋತ್ಸವ(500 ವರ್ಷ)ದ ಅಂಗವಾಗಿ ಇಂದು (ಜ.18) ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದು, ದೇವರ ದರ್ಶನಕ್ಕೆ ಭಕ್ತರಿಗಾಗಿ ನಿರ್ಮಿಸಲಾದ ನೂತನ ‘ವಿಶ್ವಪಥ’ ಸರತಿ ಸಾಲನ್ನು ಸಿಎಂ ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ. ಅಂದು ಸಂಜೆ 5 ಗಂಟೆಗೆ ಸಿಎಂ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿಶ್ವಪಥವನ್ನು ಉದ್ಘಾಟಿಸುವರು. ಸಂಜೆ 5.15ಕ್ಕೆ ದೇವರ ದರ್ಶನ ಪಡೆಯಲಿದ್ದು, ಇದೇ […]

ಪಡುಕೆರೆಯಲ್ಲಿ ಮರೀನಾ ಅಲ್ಲ, ಮೀನುಗಾರರ ಬದುಕಿನ ಮೇಲೆ ಸಮಾಧಿ ನಿರ್ಮಾಣಕ್ಕೆ ಪ್ರಯತ್ನ: ರಮೇಶ್ ಕಾಂಚನ್

ಉಡುಪಿ: ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮರೀನಾದಿಂದ ಮೀನುಗಾರರಿಗೆ ಯಾವುದೇ ಲಾಭ ಇಲ್ಲ. ಇದು ಮೀನುಗಾರರ ಬದುಕಿನ ಮೇಲೆ ಸಮಾಧಿ ನಿರ್ಮಿಸಲು ಪ್ರಯತ್ನ ನಡೆದಿದೆ ಎಂದು ನಗರಸಭಾ ಸದಸ್ಯ, ವಿಪಕ್ಷ ನಾಯಕ ರಮೇಶ್ ಕಾಂಚನ್ ಹೇಳಿದ್ದಾರೆ. ಬಹು ಕೋಟಿ ವೆಚ್ಚದ ಮರೀನಾ ಅಭಿವೃದ್ಧಿ ಯಿಂದ ಮಲ್ಪೆ, ಪಡುಕೆರೆ ಭಾಗದ ಮೀನುಗಾರರಿಗೆ ನಷ್ಟ ಬಿಟ್ಟರೆ ಯಾವುದೇ ಲಾಭ ಇಲ್ಲ. ಇಷ್ಟೊಂದು ಮುತುವರ್ಜಿಯಿಂದ ಮರೀನಾ ಅಭಿವೃದ್ಧಿ ಗೆ ಶಾಸಕರೇಕೆ ಮುಂದಾಗುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇಲ್ಲಿನ ಮರೀನಾ ದೇಶದ ದೊಡ್ಡ ಮರೀನಾ ಎಂದು […]

ಚೇರ್ಕಾಡಿ ದುರ್ಗಾಪರಮೇಶ್ವರೀ ಖಾಸಗಿ ಹಿ.ಪ್ರಾ.ಶಾಲೆ: ಪೋಷಕರ ಸಭೆ-ಸಮವಸ್ತ್ರ ವಿತರಣೆ

ಉಡುಪಿ: ಚೇರ್ಕಾಡಿ ದುರ್ಗಾಪರಮೇಶ್ವರೀ ಖಾಸಗಿ ಹಿ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ ಮತ್ತು ಸಮವಸ್ತ್ರ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರೀತಮ್ ಅಡಿಗ ವಹಿಸಿ, ಶಾಲೆಗೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ಸಂಚಾಲಕಿ ರಜನಿ ಸುರೇಶ್ ಶೆಟ್ಟಿ ಮತ್ತು ಪೋಷಕರ ಪರವಾಗಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಚೇರ್ಕಾಡಿ ಪಂಚಾಯತ್ ವತಿಯಿಂದ ನೀಡಲಾದ ಉಚಿತ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗೌರವ ಶಿಕ್ಷಕಿಯರು ಭಾಗವಹಿಸಿದ್ದರು. ಮುಖ್ಯೋಪಾದ್ಯಾಯಿನಿ ಆಶಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿದ್ಯಾಶ್ರೀ ವಂದಿಸಿದರು.

ಕಾರ್ಕಳ: ಇಂದಿನಿಂದ ಅತ್ತೂರು ಸಾಂತ್ ಮಾರಿ ಜಾತ್ರೆ ಆರಂಭ

ಕಾರ್ಕಳ: ಇತಿಹಾಸ ಪ್ರಸಿದ್ದ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ಸಾಂತ್ ಮಾರಿ ಜಾತ್ರೆಯು ಇಂದಿನಿಂದ (ಜ. 18) ರಿಂದ 28ರ ವರೆಗೆ ಕೋವಿಡ್ ಮಾರ್ಗಸೂಚಿಯಂತೆ ನೆರವೇರಲಿದೆ. ಭಾನುವಾರ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ನಡೆಯಿತು. ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು. ಧರ್ಮಗುರು ಜಾಜ್ ಡಿಸೋಜಾ ಪ್ರಾರ್ಥನೆ ನೆರವೇರಿಸಿದರು. ಜಿಪಂ ಸದಸ್ಯೆ ರೇಷ್ಮಾ ಶೆಟ್ಟಿ, ತಾಪಂ ಸದಸ್ಯ ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಸ್ವಾಗತಿಸಿದರು. ಕಾರ್ಯದರ್ಶಿ ಬೆನೆಡಿಕ್ಟಾ ನೊರೊನ್ಹಾ ವಂದಿಸಿದರು. ಪ್ರತಿ ವರ್ಷ […]