ಕಾರ್ಕಳ: ಯುವತಿಯೊಂದಿಗೆ ಅನ್ಯಕೋಮಿನ ಬಸ್ ನಿರ್ವಾಹಕನ ಚಕ್ಕಂದ; ಹಿಂದೂ ಕಾರ್ಯಕರ್ತರಿಂದ ಥಳಿತ

ಕಾರ್ಕಳ: ಹಿಂದೂ ಯುವತಿಯೊಂದಿಗೆ ಚಕ್ಕಂದ ಮಾಡುತ್ತಿದ್ದ ಅನ್ಯ ಕೋಮಿನ ಖಾಸಗಿ ಬಸ್‌ ನಿರ್ವಾಹಕನೋರ್ವನಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಹಿಗ್ಗಾಮುಗ್ಗಾವಾಗಿ ಥಳಿಸಿದ ಘಟನೆ ಇಂದು ಕಾರ್ಕಳ ತಾಲೂಕಿನ ಕುಂಟಾಡಿ ಅಶೋಕ ನಗರದಲ್ಲಿ ನಡೆದಿದೆ. ಬಸ್‌ ನಿರ್ವಾಹಕ ಉಡುಪಿ ವಡ್ಡರ್ಸೆ ಎಂ.ಜಿ. ಕಾಲೋನಿ ನಿವಾಸಿ ಶಮೀರ್‌ ಪರಾಶ್‌ (20) ಎಂಬವನು ಥಳಿತಕ್ಕೊಳಗಾದ ಯುವಕ. ಈತ ಮೂಡುಬೆಳ್ಳೆಯಿಂದ ಕಾರ್ಕಳ ಬರುವ ಕೃಷ್ಣಪ್ರಸಾದ್ ಬಸ್ ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು. ಇದೇ ಬಸ್ ನಲ್ಲಿ ಹಿಂದೂ ಯುವತಿ ಕಾರ್ಕಳಕ್ಕೆ ಉದ್ಯೋಗಕ್ಕೆ ಬರುತ್ತಿದ್ದಳು. ಆಕೆಯೊಂದಿಗೆ […]

ಆಟೊ ರಿಕ್ಷಾ- ಮಿನಿ ಬಸ್ ಮಧ್ಯೆ ಡಿಕ್ಕಿ: ಆಟೊ ಚಾಲಕ ಮೃತ್ಯು

ಬೆಳ್ತಂಗಡಿ: ಆಟೊ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ತಾಲೂಕಿನ ಅಳದಂಗಡಿ ಸಮೀಪದ ಪಿಲ್ಯ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಶಿರ್ತಾಡಿಯ ಆಟೊರಿಕ್ಷಾ ಹಾಗೂ ಮಿನಿಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ರಿಕ್ಷಾ ಚಾಲಕ ಎರಡು ವಾಹನಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆ ಇಂದಿಗೂ ಪ್ರಸ್ತುತ: ವಿನಯ್ ಬಿದ್ರೆ

ಕಾರ್ಕಳ: ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವ ಸಮುದಾಯಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದ್ರೆ ಹೇಳಿದರು. ಬಿಜೆಪಿ ಯುವಮೋರ್ಚಾ ಕಾರ್ಕಳ ಇದರ ಆಶ್ರಯದಲ್ಲಿ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿಸಿ ಸನಾತನ ಧರ್ಮದ ಶ್ರೇಷ್ಠತೆಯನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಮಹಾನ್ ನಾಯಕ ಸ್ವಾಮಿ ವಿವೇಕಾನಂದರು. ಅವರ ಚಿಂತನೆ, ಮೌಲ್ಯಗಳನ್ನು ಇಂದಿನ ಯುವಕರು ರೂಢಿಸಿಕೊಳ್ಳುವುದು ಅವಶ್ಯಕ. ಇದರಿಂದ […]

ಕೆರೆಗೆ ಬಿದ್ದ ಕಾರು: ತಾಯಿ, ಮಗಳು ಮೃತ್ಯು

ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿದ ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಮೃತಪಟ್ಟ ದಾರುಣ ಘಟನೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಬಳಿಯಲ್ಲಿ ನಡೆದಿದೆ. ಮಡಿಕೇರಿ ಅರಣ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್​, ಪತ್ನಿ ಬಬಿತಾ ಮತ್ತು ಮಗಳು ಪಲ್ಲವಿ ಕಾರಿನಲ್ಲಿ ಸುಂಟಿಕೊಪ್ಪದಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಬಾಳೆಕಾಡು ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ವೆಂಕಟೇಶ್​ ಅವರು ಈಜಿಕೊಂಡು ದಡ ಸೇರಿದ್ದಾರೆ. ಆದರೆ, ಪತ್ನಿ ಬಬಿತಾ […]

ಟೆಂಪೋ ಟ್ರಾವೆಲರ್- ಟಿಪ್ಪರ್ ಮಧ್ಯೆ ಭೀಕರ ಅಪಘಾತ: 11 ಮಂದಿ ದುರ್ಮರಣ

ಧಾರವಾಡ: ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ 11 ಮಂದಿ ಮೃತಪಟ್ಟ ಘಟನೆ ಧಾರವಾಡ ತಾಲ್ಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ನಸುಕಿನಲ್ಲಿ ಸಂಭವಿಸಿದೆ. ಟೆಂಪೋ ಟ್ರಾವೆಲರ್ ದಾವಣಗೆರೆಯಿಂದ ಗೋವಾಗೆ ತೆರಳುತ್ತಿದ್ದ ವೇಳೆ ಟಿಪ್ಪರ್‌ವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 10 ಮಹಿಳೆಯರು ಸೇರಿ ಒಟ್ಟು 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಿಂದಾಗಿ ಟೆಂಪೋ ಟ್ರಾವೆಲರ್‌ ಹಾಗೂ ಟಿಪ್ಪರ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಾಯಗೊಂಡವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ […]