ಕುಂದಾಪುರ: ಅಪರೂಪದ ಪ್ರಬೇಧಕ್ಕೆ ಸೇರಿದ ನೀರುನಾಯಿ ಪತ್ತೆ
ಕುಂದಾಪುರ: ತಾಲ್ಲೂಕಿನ ಮೂಡ್ಲುಕಟ್ಟೆಯ ಹಿನ್ನೀರಿನ ಕಾಂಡ್ಲಾವನದಲ್ಲಿ ಅಪರೂಪದ ಪ್ರಬೇಧಕ್ಕೆ ಸೇರಿದ ನೀರು ನಾಯಿಗಳು ಕಾಣಿಸಿಕೊಂಡಿವೆ. ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮಥಾಯಿಸ್ ಡೆಸಾ ಅವರಿಗೆ ಈ ನೀರು ನಾಯಿಗಳು ಕಾಣಸಿಕ್ಕಿವೆ. ಇವು ಬಹಳಷ್ಟು ಅಂಜಿಕೆ ಸ್ವಭಾವ ಹೊಂದಿದ್ದು, ಮನುಷ್ಯರನ್ನು ನೋಡಿದ ಕೂಡಲೇ ನೀರಿನಲ್ಲಿ ಮುಳುಗಿ ಮರೆಯಾಗುತ್ತವೆ. ಈ ಹಿಂದೆ ಪಶ್ಚಿಮಘಟ್ಟದ ನದಿಗಳು ಹಾಗೂ ಸಮುದ್ರದ ಹಿನ್ನೀರಿನಲ್ಲಿ ನೀರುನಾಯಿಗಳು ಹೆಚ್ಚಾಗಿ ಕಾಣಸಿಗುತ್ತಿದ್ದವು. ಆದರೆ ಈಗ ಇವುಗಳ ಸಂತತಿ ವಿನಾಶದ ಅಂಚಿಗೆ ತಲುಪಿದ್ದು, ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ […]
ಕುಂದಾಪುರ: ಮಿಂಚಿನ ಕಾರ್ಯಾಚರಣೆ; ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿ ವಶ
ಕುಂದಾಪುರ: ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡಿದ್ದ ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿಯನ್ನು ಕುಂದಾಪುರ ಆಹಾರ ನಿರೀಕ್ಷಕರು ಹಾಗೂ ಕುಂದಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಕೋಟೇಶ್ವರದ ಹಾಲಾಡಿ ರಸ್ತೆಯ ಶೆಡ್ ವೊಂದರಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ನಿವಾಸಿ ಆಜಾಮ್, ಕೋಟೇಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ನಿವಾಸಿ ರಮಾ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ […]
ಮಲ್ಪೆ: ಸ್ಕೂಟರ್ ಗೆ ಮೀನು ಸಾಗಿಸುವ ಇನ್ಸುಲೇಟರ್ ವಾಹನ ಢಿಕ್ಕಿ; ಸವಾರ ಮೃತ್ಯು
ಉಡುಪಿ: ಮಲ್ಪೆ ತೊಟ್ಟಂ ಸಮೀಪ ಮೀನು ಸಾಗಾಟ ಮಾಡುವ ಇನ್ಸುಲೇಟರ್ ವಾಹನವೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಇಸಾಕ್ ಹೂಡೆ ಮೃತ ದುರ್ದೈವಿ. ಇಸಾಕ್ ಸ್ಕೂಟರ್ ನಲ್ಲಿ ಹೂಡೆಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ವಾಹ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ಮೊದಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ತರಕಾರಿ ಸಾಗಿಸುವ ಲಾರಿ ಪಲ್ಟಿ; ಚಾಲಕ ಮೃತ್ಯು
ಕಾರ್ಕಳ: ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಬಿದ್ದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಳ ಘಾಟಿಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದೆ. ಮೃತನನ್ನು ಲಾರಿ ಮಾಲೀಕ -ಚಾಲಕ ಚಿಕ್ಕಮಗಳೂರು ಆಲ್ದೂರಿನ ಅಣ್ಣಪ್ಪ (56) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಿಂದ ಬಜಗೋಳಿಗೆ ತರಕಾರಿ ಸಾಗಿಸುವ ಲಾರಿ ಇದಾಗಿದ್ದು, ಮಾಳ ಘಾಟಿಯಲ್ಲಿ ಶನಿವಾರ ಎರಡು ನಸುಕಿನ ವೇಳೆ ಈ ದುರ್ಘಟನೆ ನಡೆದಿದೆ. ಲಾರಿಯಲ್ಲಿದ್ದ ರವಿ ಎಂಬವರು ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.