ಉಡುಪಿ: ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ

ಉಡುಪಿ: ರಕ್ತನಿಧಿ ಕೇಂದ್ರಗಳಿಗೆ ಹೊಸದಾಗಿ ಅನುಮೋದನೆಯಾಗಿರುವ ಶುಶ್ರೂಷಕರ ಒಂದು ಹುದ್ದೆ ಹಾಗೂ ಗ್ರೂಪ್- ಡಿ ಒಂದು ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಶುಶ್ರೂಷಕರ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಸಂಸ್ಥೆಯಿಂದ 3 ವರ್ಷ ಅಥವಾ ಅದಕ್ಕಿಂತ ಅಧಿಕ ಅವಧಿಯ ನರ್ಸಿಂಗ್ ಪಾಸಾದ ಪ್ರಮಾಣ ಪತ್ರ ಹಾಗೂ 2 ವರ್ಷ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಮಾಸಿಕ ₹11,500 ವೇತನ ನೀಡಲಾಗುವುದು. ಗ್ರೂಪ್ ಡಿ ಹುದ್ದೆಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. […]

ಮುಖದಲ್ಲಿ ಮೊಡವೆ ಆಗಿದೆಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

ಪುತ್ತೂರು: ಮುಖದಲ್ಲಿ ಮೊಡವೆ ಆಗಿದೆಂಬ ಕಾರಣಕ್ಕೆ ಬಾಲಕಿಯೊಬ್ಬಳು ಮನೆಯ ಸಮೀಪದ ಗೇರು ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಕೆಯ್ಯೂರಿನ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ದಿವ್ಯಾ ಮುಖದಲ್ಲಿ ಮೊಡವೆ ಆಗಿದ್ದು, ಇದರಿಂದ ಸಾಕಷ್ಟು ಮನನೊಂದಿದ್ದಳು. ಈ ಕಾರಣಕ್ಕಾಗಿ ದಿವ್ಯಾ ಎಲ್ಲಿಗೂ ಹೋಗುತ್ತಿರಲಿಲ್ಲ. ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಶಾಲೆ ಕೂಡ ಆರಂಭ ಆಗಿದ್ದರಿಂದ ಮೊಡವೆಯ ಮುಖವನ್ನು ಹಿಡಿದುಕೊಂಡು ಹೇಗೆ ಶಾಲೆಗೆ ಹೋಗಲಿ ಎಂಬ ಚಿಂತೆಯೂ ಆಕೆಯನ್ನು ಕಾಡಿತ್ತು. ಇದರಿಂದ ಸಾಕಷ್ಟು ಕುಗ್ಗಿ ಹೋಗಿದ್ದಳು ಎಂದು […]

ಮಣಿಪಾಲ: ಶೌಚಾಲಯದಲ್ಲಿ ಅಸ್ವಸ್ಥಗೊಂಡಿದ್ದ ಬಾಲಕನ ರಕ್ಷಣೆ

ಮಣಿಪಾಲ: ತಾಯಿ ಬೈದು ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಬಾಲಕನೊಬ್ಬ ಮನೆಯ ಶೌಚಾಲಯದಲ್ಲಿ ಸುಮಾರು ತಾಸು ಬಾಗಿಲು ಹಾಕಿಕೊಂಡು ಕುಳಿತುಕೊಂಡ ಘಟನೆ ಮಣಿಪಾಲದ ಅಪಾರ್ಟ್ ಮೆಂಟ್ ವೊಂದರಲ್ಲಿ ಇಂದು ನಡೆದಿದೆ. ಗಂಟೆಗಟ್ಟಲೇ ಮೊಬೈಲ್ ನಲ್ಲಿ‌ ಆಡುತ್ತಿದ್ದ ಮಗನಿಗೆ ತಾಯಿ ಬೈದಿದ್ದಾರೆ. ಅಲ್ಲದೆ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದೇನೆ. ಸುಮಾರು ತಾಸು ಆದ್ರೂ ಹೊರಬಂದಿಲ್ಲ. ತಾಯಿ ಸಾಕಷ್ಟು ಬಾರಿ ಕರೆದರೂ ಪ್ರತಿಕ್ರಿಯಿಸಿಲ್ಲ, ಹೊರಗೂ ಬಂದಿಲ್ಲ. ಇದರಿಂದ ಗಾಬರಿಗೊಂಡ ತಾಯಿ ಅಗ್ನಿಶಾಮಕ […]

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಲಘು ಹೃದಯಾಘಾತ ಉಂಟಾಗಿದ್ದು, ಕೋಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅವರನ್ನು ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆಯಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಗಂಗೂಲಿ ಆಪ್ತ ಮೂಲಗಳು ಹೇಳಿದ್ದಾರೆ.

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಸದಸ್ಯರಾಗಿ ಸುರೇಶ್‌ ಮಡಿವಾಳ ನೇಮಕ

ಕಾರ್ಕಳ: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಸದಸ್ಯರಾಗಿ ಕಾರ್ಕಳದ ಸುರೇಶ್‌ ಮಡಿವಾಳ ಅವರು ಆಯ್ಕೆಯಾಗಿದ್ದಾರೆ. ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಸುರೇಶ್ ಅವರನ್ನು ನೇಮಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಸುರೇಶ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.