ಸೌರವಿದ್ಯುತ್ ಉತ್ಪಾದಿಸಲು ಸರ್ಕಾರಕ್ಕೆ ಉತ್ತಮ ಸಲಹೆಕೊಟ್ಟ ಅನಿರುದ್ಧ್
ಬೆಂಗಳೂರು: ನಟ ಅನಿರುದ್ಧ ಅವರು ರಾಜ್ಯ ಸರ್ಕಾರಕ್ಕೆ ಉತ್ತಮ ಸಲಹೆ ನೀಡಿದ್ದಾರೆ. ರಾಜ್ಯದ ತೆರೆದ ರಾಜಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್‌ಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು ಎಂದಿದ್ದಾರೆ. ಕಾಲುವೆ ಎರಡೂ ಬದಲಿಯಲ್ಲಿ ಗೋಡೆಗಳನ್ನು ಕಟ್ಟಿ ಅದರಲ್ಲಿ ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಬರಡು ಭೂಮಿಯಲ್ಲಿ ಸೌರ ವಿದ್ಯುತ್ ಬೆಳೆ ತೆಗೆಯಲು ನೆಲ ಹಸನು ಮಾಡುವ ಕಾಯಕಕ್ಕೆ ಗುಜರಾತ್‌ನಲ್ಲಿ ಬೆಂಗಳೂರು ಮೂಲದ ಇಐ ಟೆಕ್ನಾಲಜೀಸ್ ಕಂಪನಿ ನೇಗಿಲು ಹಿಡಿದಿತ್ತು. ಇದೀಗ ಅದೇ ಮಾದರಿಯಲ್ಲಿ ವಿದ್ಯುತ್‌ಚ್ಛಕ್ತಿ ಉತ್ಪಾದನೆಗೆ […]
ಕುಂದಾಪುರ: ಬಾಲ್ಯವಿವಾಹ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳಿಂದ ದಾಳಿ
ಕುಂದಾಪುರ: ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಗುಡ್ಡೆಯಂಗಡಿ ಎಂಬಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹವನ್ನು ತಡೆದಿದ್ದಾರೆ. ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ ತಲ್ಲೂರು ಗುಡ್ಡೆಯಂಗಡಿಯ 17 ವರ್ಷದ ಬಾಲಕಿಗೆ 28 ವರ್ಷದ ಹುಡುಗನೊಂದಿಗೆ ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡು 200ಕ್ಕೂ ಹೆಚ್ಚು ಮಂದಿ ಮದುವೆ ಹಾಲ್ ನಲ್ಲಿ ಸೇರಿರುವ ಮಾಹಿತಿ ಬಂದ ಕೂಡಲೇ ಅಧಿಕಾರಿಗಳು ದಾಳಿ ನಡೆಸಿದ್ದರು. ಉಡುಪಿ ಜಿಲ್ಲಾ […]
ಉಡುಪಿ: ಅಪರೂಪದ ಬಿಳಿ ಪ್ರಬೇಧದ ಗೂಬೆ ಮರಿ ರಕ್ಷಣೆ
ಉಡುಪಿ: ತಾಯಿ ಗೂಬೆಯಿಂದ ದೂರವಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರೂಪದ ಬಿಳಿ ಪ್ರಬೇಧದ ಗೂಬೆ ಮರಿಯೊಂದು ಬನ್ನಂಜೆಯ ಸಾಯಿರಾಧ ಸಮಧಾನ ವಸತಿ ಸಂಕೀರ್ಣದ ವಾಹನ ನಿಲುಗಡೆ ಸ್ಥಳದಲ್ಲಿ ಪತ್ತೆಯಾಗಿದೆ. ಸಂಕೀರ್ಣದ ನಿವಾಸಿ ರೋಶನಿ ಶೆಟ್ಟಿ ಅವರು ಗೂಬೆ ಮರಿಯನ್ನು ರಕ್ಷಿಸಿ ಆಹಾರ ಒದಗಿಸಿ ಉಪಚರಿಸಿದ್ದರು. ಅವರು ನೀಡಿದ ಮಾಹಿತಿ ಮೆರೆಗೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಗೂಬೆ ಮರಿಯನ್ನು ಅರಣ್ಯ ರಕ್ಷಕ ಕೇಶವ ಪೂಜಾರಿ ಅವರಿಗೆ ಹಸ್ತಾಂತರಿಸಿದರು. ಪತ್ತೆಯಾಗಿರುವ ಗೂಬೆ ಮರಿಯು […]
ಉಜಿರೆ: ಪಾಕ್ ಪರ ಘೋಷಣೆ; ಆರು ಮಂದಿಯ ಬಂಧನ
ಬೆಳ್ತಂಗಡಿ: ಉಜಿರೆ ಗ್ರಾಪಂ ಮತ ಎಣಿಕೆ ಕೇಂದ್ರದ ಹೊರಗಡೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಪಿಲಿಚಂಡಿ ಕಲ್ಲು ಕುವೆಟ್ಟು ನಿವಾಸಿಗಳಾದ ಮೊಹಮ್ಮದ್ ಹರ್ಷದ್( 22 ), ದಾವೂದ್ ( 36) ಹಾಗೂ ಇಸಾಕ್ (28) ಬಂಧಿತ ಆರೋಪಿಗಳು. ಇನ್ನು ಹಲವು ಮಂದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಬಂಟ್ವಾಳ ವ್ಯಾಪ್ತಿಯ ಯುವಕರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಘೋಷಣೆ ಕೂಗಿದ ವಿಡಿಯೋದ […]
ಮಂಗಳೂರು: ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ; ನಿಷೇಧಾಜ್ಞೆ ಜಾರಿ
ಮಂಗಳೂರು: ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದ್ದು, ಮಂಗಳೂರು ನಗರದಾದ್ಯಂತ ಇಂದು (ಡಿ. 31) ಸಂಜೆ 6ಗಂಟೆಯಿಂದ ನಾಳೆ(ಜ.1) ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ನೆಪದಲ್ಲಿ ಐದು ಮಂದಿಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಸಾರ್ವಜನಿಕ ಸ್ಥಳ, ರಸ್ತೆ, ಬೀಚ್, ಮೈದಾನದಲ್ಲಿ ಸಂಭ್ರಮಾಚರಣೆ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.