ಕಾರ್ಕಳ: ತೆಂಗಿನ ಮರ ಕಡಿಯುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿ ಮೃತ್ಯು

ಕಾರ್ಕಳ: ಇಲ್ಲಿನ ಕಲ್ಲೊಟ್ಟೆ ಎಂಬಲ್ಲಿ ಇಂದು ತೆಂಗಿನ ಮರ ಕಡಿಯುವ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಮೃತನನ್ನು ಜೋಡುಕಟ್ಟೆ ನಿವಾಸಿ ವಾಸು (45) ಎಂದು ಗುರುತಿಸಲಾಗಿದೆ. ಈತ ಕಲ್ಲೊಟ್ಟೆಯಲ್ಲಿ ಇಂದು ತೆಂಗಿನ ಮರ ಕಡಿಯಲು ಮರ ಏರಿದ್ದ, ಈ ವೇಳೆ ತೆಂಗಿನ ಮರಕ್ಕೆ ತಾಗಿಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ವಾಸುವಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಕಾರ್ಕಳ: ಸೈಕಲ್ ಗೆ ಆಟೊ ಡಿಕ್ಕಿ: ಸೈಕಲ್ ಸವಾರ ಮೃತ್ಯು

ಕಾರ್ಕಳ: ಸೈಕಲ್ ಗೆ ಆಟೊ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬಜಗೋಳಿಯ ಮುಡಾರು ಅಬ್ಬೆಂಜಾಲು ಎಂಬಲ್ಲಿ‌ ಸಂಭವಿಸಿದೆ. ಮೃತ ಸೈಕಲ್ ಸವಾರನನ್ನು ನೋಣಯ್ಯ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಹೋಗುತ್ತಿದ್ದ ವೇಳೆ ಬಜಗೋಳಿಯಿಂದ ಕಡಾರಿಗೆ ಹೋಗುತ್ತಿದ್ದ ರಿಕ್ಷಾ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಮೇತವಾಗಿ ರಸ್ತೆಗೆ ಬಿದ್ದ ನೋಣಯ್ಯ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ […]

ಉಡುಪಿಗೆ ಬ್ರಿಟನ್ ವೈರಸ್ ಭೀತಿ ಇಲ್ಲ: ಎಂಟು ಮಂದಿಯ ವರದಿ ನೆಗೆಟಿವ್

ಉಡುಪಿ: ಬ್ರಿಟಿನ್ ನಿಂದ ಉಡುಪಿ ಜಿಲ್ಲೆಗೆ ಎಂಟು ಮಂದಿ ಆಗಮಿಸಿದ್ದರಿಂದ ಜಿಲ್ಲೆಗೆ ಬ್ರಿಟನ್ ವೈರಸ್ ಭೀತಿ ಕಾಡಿತ್ತು. ಆದರೆ ಇದೀಗ ಆ ಎಂಟು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇದರಿಂದ ಜಿಲ್ಲೆಯ ಜನತೆಯ ಆತಂಕ ದೂರಾಗಿದೆ. ಡಿಸೆಂಬರ್ 21ರಂದು ಇಂಗ್ಲೆಂಡ್ ನಿಂದ ಎಂಟು ಮಂದಿ ಜಿಲ್ಲೆಗೆ ಬಂದಿದ್ದರು. ಕಾರ್ಕಳ ತಾಲೂಕಿನ ನಾಲ್ವರು, ಉಡುಪಿ ತಾಲೂಕಿನ ಮೂವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 8ಮಂದಿ ಆಗಮಿಸಿದ್ದರು. ಇದರಿಂದ ಜಿಲ್ಲೆಯಾದ್ಯಂತ ಬ್ರಿಟನ್ ವೈರಸ್ ಹರಡುವ ಭೀತಿ‌ […]

ಬ್ರಿಟನ್‌ ವೈರಸ್ ಭೀತಿ: ಏಳುದಿನ ಸಂಪೂರ್ಣ ಲಾಕ್ ಡೌನ್

ನವದೆಹಲಿ: ವಿಶ್ವದಾದ್ಯಂತ ಇದೀಗ ಬ್ರಿಟನ್‌ ವೈರಸ್ ನ ಭೀತಿ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಭೂತಾನ್ ದೇಶದಲ್ಲಿ ಅಲ್ಲಿನ ಸರ್ಕಾರ ಏಳು ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ. ಬ್ರಿಟನ್ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ರೋಗ ಹರಡುವಿಕೆ ತಡೆಗೆ ಹಾಗೂ ಸಮುದಾಯ ಹರಡುವಿಕೆ ತಪ್ಪಿಸಲು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.